‘ಆಶಾ ಕಾರ್ಯಕರ್ತೆಯರಿಗೆ ಲಿಖಿತವಾಗಿ ಭರವಸೆ ಕೊಡಲು ಅವಕಾಶವಿಲ್ಲ, ಸಾಧ್ಯವೂ ಇಲ್ಲ. ಇದರಲ್ಲಿ ರಾಜಕೀಯ ಇರುವುದು ನನಗೆ ಗೊತ್ತಿದೆ. ರೈಟಿಂಗ್‌ನಲ್ಲಿ ಬರೆದುಕೊಡಿ ಅಂತಾ ಕೇಳುತ್ತಿದ್ದಾರೆ. ಆದರೆ, ಯಾವ ಸರ್ಕಾರ ಬರೆದುಕೊಟ್ಟಿದೆ? ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿದಾಗ ಯಾವಾಗಲಾದರೂ ರೈಟಿಂಗ್‌ನಲ್ಲಿ ಭರವಸೆ ಕೊಟ್ಟಿದ್ದಾರೆಯೇ? ಹಾಗೆಲ್ಲ ಬರೆದು ಕೊಡಲು ಆಗುವುದಿಲ್ಲ. ಬ್ಲ್ಯಾಕ್‌ಮೇಲ್ ಮಾಡಬೇಡಿ. ನಿಮ್ಮ ಬಗ್ಗೆ ನಮಗೆ ಸಹಾನುಭೂತಿ ಇದೆ. ನಮ್ಮ ಮೇಲೆ ವಿಶ್ವಾಸವಿಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತರು 10 ದಿನದಿಂದ ಮುಷ್ಕರ ನಡೆಸುತ್ತಿದ್ದ ಲಿಖಿತ ಭರವಸೆ ಬೇಕೆಂದು ಕೇಳುತ್ತಿದ್ದಾರೆ. ಈ ಬಗ್ಗೆ ಮೈಸೂರು, ಬೆಂಗಳೂರು ಹಾಗೂ ಕೊಪ್ಪಳದಲ್ಲಿ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲವೆಂದರೆ ನಾನೇನು ಮಾಡಲು ಸಾಧ್ಯ? ನಮ್ಮ ಮಾತಿಗೆ ಗೌರವ ಕೊಡಿ ಅಂತ ತಾಯಂದಿರ ಬಳಿ ವಿನಮ್ರವಾಗಿ ಮನವಿ ಮಾಡುವೆ’ ಎಂದರು.
07:24 AM (IST) Nov 27
ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ಅವರನ್ನು ನೇಮಿಸಿದ್ದು, ರಾಜ್ಯ ಸರ್ಕಾರದ ಮೇಲಷ್ಟೇ ಒತ್ತಡ ತರುವುದು ಸರಿಯಲ್ಲ ಎಂದಿದ್ದಾರೆ.