LIVE NOW
Published : Oct 22, 2026, 06:56 AM ISTUpdated : Oct 22, 2026, 08:34 AM IST

Karnataka News Live: ಆಲಮಟ್ಟಿಯಿಂದ ನಿತ್ಯ 27,500 ಕ್ಯುಸೆಕ್ ನೀರು ಬಿಡುಗಡೆ - ಇದರ ಹಿಂದಿನ ರಹಸ್ಯವೇನು ?

ಸಾರಾಂಶ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳ ಅನಿರೀಕ್ಷಿತ ತಪಾಸಣೆ ವೇಳೆ ಮತ್ತೆ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಮಹಿಳಾ ವಿಭಾಗದಲ್ಲಿ ಕೈದಿ ಆಗ್ನೆಸ್ ನಂಬಲಿರಾವಾ ಬಳಿ ₹11,500 ನಗದು ಸಿಕ್ಕಿದೆ. ಅದೇ ರೀತಿ ಮತ್ತಿಬ್ಬರ ಕೈದಿಗಳಾದ ಮಾಲತೇಶ್‌ ಬ್ಯಾಗ್‌ನಲ್ಲಿ ಸಿಮ್ ಇಲ್ಲದ ಮೊಬೈಲ್, ಮಹಮ್ಮದ್‌ ನವಾಜ್‌ನ ಹಾಸಿಗೆಯಲ್ಲಿದ್ದ ಟೋಪಿಯ ಒಳಗಡೆ ಕೀ ಪ್ಯಾಡ್ ಮೊಬೈಲ್ ಸಿಕ್ಕಿದೆ ಎಂದು ಮೂಲಗಳು ಹೇಳಿವೆ. 

ಈ ಸಂಬಂಧ ಮಹಿಳಾ ಕೈದಿ ಸೇರಿದಂತೆ ಮೂವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ಜೈಲಿನಲ್ಲಿ ಅನಿರೀಕ್ಷಿತವಾಗಿ ಜೈಲಿನ ಅಧಿಕಾರಿಗಳು ದಿಢೀರ್ ಶೋಧನೆ ನಡೆಸಿದ್ದರು. ಆಗ ಕೈದಿಗಳ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

08:34 AM (IST) Oct 22

ಆಲಮಟ್ಟಿಯಿಂದ ನಿತ್ಯ 27,500 ಕ್ಯುಸೆಕ್ ನೀರು ಬಿಡುಗಡೆ - ಇದರ ಹಿಂದಿನ ರಹಸ್ಯವೇನು ?

ಮೂರು ದಿನಗಳಲ್ಲಿ ಸುಮಾರು 7 ಟಿಎಂಸಿ ಅಡಿ ನೀರು ಹರಿದು ಹೋಗಿದ್ದು, ಇನ್ನೂ ಒಂದೆರೆಡು ದಿನ ಹೊರಹರಿವು ಇದೇ ರೀತಿ ಮುಂದುವರೆದರೆ ಅದು 10 ಟಿಎಂಸಿ ದಾಟಬಹುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು.

Read Full Story

08:18 AM (IST) Oct 22

ಚೂಪಾದ ಕಾರೆಮುಳ್ಳಿನ ಮೇಲೆ ದೇವಿಯ ಮೆರವಣಿಗೆ! ಮೈ ಜುಮ್ಮೆನಿಸುವ ದಸರೀಘಟ್ಟ ಚೌಡೇಶ್ವರಿ ದೇವಿ ಉತ್ಸವ!

Dasarighatta Chowdeshwari Devi temple ತಿಪಟೂರು ತಾಲೂಕಿನ ದಸರೀಘಟ್ಟದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವವು ವಿಜಯದಶಮಿಯಂದು ಅತ್ಯಂತ ಭಕ್ತಿಭಾವದಿಂದ ಜರುಗಿತು. ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ಭಕ್ತರು ದೇವಿಯ ಉತ್ಸವ ಮೂರ್ತಿ ಹೊತ್ತು ಹರಕೆ ತೀರಿಸಿದರು.

Read Full Story

08:10 AM (IST) Oct 22

Post Office - ಇಂದಿನಿಂದ 3 ದಿನ ಬೆಂಗಳೂರಿನ ಈ ಅಂಚೆ ಕಚೇರಿಗಳಲ್ಲಿ ಕೆಲ ಸೇವೆ ಅಲಭ್ಯ

ನೂತನ ತಂತ್ರಾಂಶ ಅಳವಡಿಕೆ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರಿಂದ 25ರವರೆಗೆ ಕೆಲ ಸೇವೆಗಳು ಸಿಗುವುದಿಲ್ಲ . ಅಕ್ಟೋಬರ್ 26 ರಿಂದ ಹೊಸ ತಂತ್ರಾಂಶದೊಂದಿಗೆ ಸೇವೆಗಳು ಮರುಪ್ರಾರಂಭವಾಗಲಿವೆ. ಆನ್‌ಲೈನ್ ಮೂಲಕ ಪ್ರೀಮಿಯಂ ಪಾವತಿಸಲು ಅವಕಾಶವಿರುತ್ತದೆ.

Read Full Story

07:52 AM (IST) Oct 22

Yakshagana - ಸುರತ್ಕಲ್‌ನಲ್ಲಿ ಒಂಭತ್ತು ತಿಂಗಳ ತುಂಬು ಗರ್ಭಿಣಿಯಿಂದ ಯಕ್ಷಗಾನ! ವೈರಲ್

ಸುರತ್ಕಲ್‌ನಲ್ಲಿ ನಡೆದ ದಶಾವತಾರ ಯಕ್ಷಗಾನದಲ್ಲಿ 9 ತಿಂಗಳ ಗರ್ಭಿಣಿ ದಿಶಾ ಶೆಟ್ಟಿ ಕಯಾದು ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ತಮ್ಮ ಕುಟುಂಬದ ಪ್ರೇರಣೆಯಿಂದ ಈ ಪಾತ್ರ ಮಾಡಿದ್ದು, ಗರ್ಭಿಣಿಯರು ಇದನ್ನು ಅನುಕರಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
Read Full Story

07:12 AM (IST) Oct 22

ಬೆಂಗಳೂರು - ಮನೆ, ಅಂಗಡಿ ಪಿಜಿಗಳಲ್ಲಿ ದಸರಾ ಹಬ್ಬದ ರಾಶಿ ರಾಶಿ ಕಸ.. ತ್ಯಾಜ್ಯ ಸಂಗ್ರಹಿಸಲು ವಾಹನವೇ ಬರುತ್ತಿಲ್ಲ..!

ಬೆಂಗಳೂರು ಉತ್ತರ ನಗರ ಪಾಲಿಕೆ ನಡೆಸಿದ ಎರಡನೇ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ಕಸದ ಸಮಸ್ಯೆಗಳ ಬಗ್ಗೆ ಹತ್ತಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ದೂರುಗಳನ್ನು 'ಸಹಾಯ 2.0' ವ್ಯವಸ್ಥೆಯಲ್ಲಿ ದಾಖಲಿಸಿ ಶೀಘ್ರವೇ ಇತ್ಯರ್ಥಪಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
Read Full Story

More Trending News