Karnataka Political News: ರಾಜ್ಯ ರಾಜಕೀಯದಲ್ಲಿ ಬಣ ರಾಜಕೀಯ ಜೋರಾಗಿದೆ. ಒಂದೆಡೆ ಹೈಕಮಾಂಡ್ ನೋಟಿಸ್ ನೀಡಿದ್ರೂ ಬಿಜೆಪಿ ಭಿನ್ನರ ಪಡೆ ಡೋಂಟ್ ಕೇರ್ ಎಂದಿದೆ. ಶೋಕಾಸ್ ನೋಟಿಸ್ ನೀಡಿದರೂ ಫೆಬ್ರವರಿ 20ರಂದ ಸಭೆ ಮಾಡಲು ನಿರ್ಧರಿಸಿದೆ. ಇತ್ತ ಕಾಂಗ್ರೆಸ್‌ನಲ್ಲಿಯೂ ಸಿಎಂ ಸಿದ್ದರಾಮಯ್ಯ ಬಣದ ನಾಯಕರು, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬಣ ರಾಜಕಾರಣ ತೀವ್ರಗೊಳ್ಳುತ್ತಿರುವ ಈ ಹಂತದಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಪರಮೇಶ್ವರ್ ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ. ಕೆಲ ವಿಚಾರಗಳಿಗಾಗಿ ಬೇಸರಗೊಂಡು ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಹುದ್ದೆ ಕಲ್ಪಿಸಿದ್ದಾರೆ. ಇಂದು ಇಡೀ ದಿನ ನಡೆದ ಪ್ರಮುಖ ಸುದ್ದಿಯ ಸಂಕ್ಷಿಪ್ತ ವಿವರಣೆ ಇಲ್ಲಿದೆ.

07:21 PM (IST) Feb 18
ಬಜೆಟ್ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಅಲ್ಪಸಂಖ್ಯಾತ ಸಮುದಾಯ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದೆ. ಸಚಿವರಾದ ಜಮೀರ್ ಅಹಮದ್ ಖಾನ್, ರಹೀಮ್ ಖಾನ್, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಗಳಾದ ನಸೀರ್ ಅಹಮದ್,, ಶಾಸಕ ತನ್ವಿರ್ ಸೇಠ್, ಮುಖ್ಯ ಸಚೇತಕ ಸಲೀಂ ಅಹಮದ್ ಹಾಗೂ ಶಾಸಕರು ಭಾಗಿಯಾಗಿದ್ದರೆ.
06:45 PM (IST) Feb 18
ಜಾತಿಗಣತಿ ಜಾರಿ ಮಾಡಿ ಹಿಂದುಳಿದ ವರ್ಗದ ನಾಯಕರ ಆಗ್ರಹಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಜಾತಿಗಣತಿ ವರದಿ ಜಾರಿ ಮಾಡೇ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಈಡಿಗ ಮುಖಂಡರು ಈಡಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ನೀಡುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
06:00 PM (IST) Feb 18
ಚಿತ್ರದುರ್ಗದಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್‌ಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ಹೊರಹಾಕಿದ್ದಾರೆ.ರೈತರಿ ಜಮೀನಿಗೆ ನಿತ್ಯ 8ಗಂಟೆ ವಿದ್ಯುತ್ ಪೂರೈಕೆ, ಅಕ್ರಮ, ಸಕ್ರಮದಡಿ ರೈತರಿಗೆ ಮೂಲಭೂತ ಸೌಕರ್ಯ, ವಿದ್ಯುತ್ ಪರಿವರ್ತಕ ವಿತರಣೆಗೆ ಹಣ ವಸೂಲಿ ಆರೋಪ ಸೇರಿದಂತೆ ಹವು ಬೇಡಿಕೆಗೆ ಆಗ್ರಹಿಸಿ ರೈತರು ಪ್ರತಿಭಟಿಸಿದ್ದಾರೆ.
05:19 PM (IST) Feb 18
ಮಂಡಿ ನೋವಿನ ಕಾರಣ ಹೊಸ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ವೆಲ್‌ಫೈರ್ ಕಾರಿನಲ್ಲಿ ಕಾಲು ಚಾಚಿ ಕುಳಿತುಕೊಳ್ಳುವಷ್ಟು ಜಾಗ ಇದೆ. ಸದ್ಯ ಬೈರತಿ ಸುರೇಶ್ ಅವರ ಟೊಯೋಟಾ ವೆಲ್‌ಫೈರ್ ಕಾರನ್ನು ಸಿಎಂ ಬಳಸುತ್ತಿದ್ದಾರೆ.
04:33 PM (IST) Feb 18
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್, ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ವೈದ್ಯರ ಭೇಟಿಗಾಗಿ ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ಆರೋಪಿ ದರ್ಶನ್, 57ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆರೋಪಿ ದರ್ಶನ್ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಫೆಬ್ರವರಿ 18 ರಿಂದ 20 ರವರೆಗೆ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿ, ಅರ್ಜಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿದೆ.
04:08 PM (IST) Feb 18
03:30 PM (IST) Feb 18
ಇವತ್ತು ದಲಿತರ ದಲಿತ ಸಂಘಟನೆಗಳ ಬಹುತೇಕ ಮುಖಂಡರು ಭಾಗಿಯಾಗಿದ್ದರು. ಎಸ್‌ಇಪಿಟಎಸ್‌ಪಿ ಹಣ ಬಹಳಷ್ಟು ಇದೆ. ಇದರ ಭಾಗದಲ್ಲಿ ಹೆಚ್ಚಿನ ಪ್ರಮಾಣವನ್ನು ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಒತ್ತು ಕೊಡಬೇಕು ಅಂತ ಕೇಳಿದ್ದಾರೆ. ನಿಗಮಗಳನ್ನು ಹೆಚ್ಚು ಶಕ್ತಿಯುತಗೊಳಿಸಬೇಕು ಅಂತ ಕೇಳಿದ್ದಾರೆ. ಆರ್ಥಿಕ, ಶೈಕ್ಷಣಿಕ ಹೆಚ್ಚು ಬಲ ನೀಡುವಂತೆ ಕೋರಿದ್ದಾರೆ. ಮಾತನಾಡಲು ಆಗದೆ ಇರುವವರು ಲಿಖಿತ ರೂಪದಲ್ಲಿ ಸಲಹೆ ಕೊಟ್ಟಿದ್ದಾರೆ. ಅರ್ಥಪೂರ್ಣ ಚರ್ಚೆ ಇವತ್ತು ಆಗಿದೆ. ಇಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್ ಮಾಡಬೇಕು ಅಂತ ಕೋರಿಕೆ ಬಂದಿದೆ. ಶಿಕ್ಷಣ, ಆರೋಗ್ಯ ಮತ್ತು ಗಂಗಾ ಕಲ್ಯಾಣ ವಿಚಾರಕ್ಕೆ ಪ್ರತಿಕ್ರಿಯಿಸಿ ಭೂಮಿ ಖರೀದಿ, ವ್ಯಕ್ತಿಗತವಾದ ಲೋನ್ ಸೇರಿದಂತೆ ಅನೇಕ ವಿಚಾರಗಳ ಮನವಿ ಬಂದಿದೆ ಎಂದು ವಿಧಾನಸೌಧದಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
03:26 PM (IST) Feb 18
ಇವತ್ತು 30 ರಿಂದ 50 ಹೊಸ ಟಿವಿ ಹಾಗೂ ಪತ್ರಿಕೆಗಳು ರಾಜ್ಯದಲ್ಲಿದೆ. ಹೀಗಾಗಿ ಒಂದೊಂದು ಸುದ್ದಿ ದೊಡ್ಡದಾಗಿ ಬಿಂಬಿಸಲಾಗುತ್ತದೆ. ಜಾರಕಿಹೊಳಿ, ರಾಜಣ್ಣ ಒಬ್ಬೊಬ್ಬ ಲೀಡರ್ಸೆ..ಪರಮೇಶ್ವರ ಮಾಜಿ ಅಧ್ಯಕ್ಷರು, ಡಿಕೆಶಿ ಅಧ್ಯಕ್ಷರು. ನಾನು ಸಹ ಹಿಂದೆ ಅಧ್ಯಕ್ಷ ಆಗಿದ್ದೆ, ನಾನು ದೆಹಲಿಗೆ ಹೋದ್ರೆ ನೀವು ಅದನ್ನ ಬರೆಯೋದೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
02:49 PM (IST) Feb 18
ಗೃಹ ಇಲಾಖೆಯ ಕೆಲಸದ ಬಗ್ಗೆ ಪರಮೇಶ್ವರ್ ದೆಹಲಿಗೆ ಹೋಗಿರಬೇಕು. ಪರಮೇಶ್ವರ್ ಅವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರ ಬಗ್ಗೆ ನನಗೆ ಗೊತ್ತಿಲ್ಲಪ್ಪ. ಗೃಹ ಲಕ್ಷ್ಮಿ ಹಣ ವಿಳಂಬ ಹಾಗೂ ಅನ್ನಭಾಗ್ಯ ಯೋಜನೆ ಸಮಸ್ಯೆ ಬಗ್ಗೆ ಸಿಎಂ ನೋಡ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
02:20 PM (IST) Feb 18
ಭೂ ಒತ್ತುವರಿ ಆರೋಪಕ್ಕೆ ರಾಮನಗರದಲ್ಲಿ ಸಂಸದ ಡಾ ಸಿಎನ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಲೋಕಸಭೆಗೆ ನಾಮಪತ್ರ ಸಲ್ಲಿಕೆ ವೇಳೆಯೇ ನನ್ನ ಆಸ್ತಿ ಘೋಷಣೆ ಮಾಡಿದ್ದೇನೆ. ಮಾಧ್ಯಮದಲ್ಲಿ ಮಂಜುನಾಥ್ ಎಂಪಿ ಆದ ಮೇಲೆ 71 ಎಕರೆ ಜಮೀನು ಮಾಡಿದ್ದಾರೆ ಎಂಬ ಆರೋಪ ಬಂತು. ಎಂಪಿ ಆದಮೇಲೆ 71 ಇಂಚೂ ಕೂಡ ಆಸ್ತಿ ಮಾಡಿಲ್ಲ. ಕೇತಗಾನಹಳ್ಳಿಯಲ್ಲಿ 1996 ರಲ್ಲಿ ನಮ್ಮ ತಂದೆ 3.5 ಎಕರೆ ಜಮೀನು ಖರೀದಿ ಮಾಡಿದ್ರು. ಅವರು ಕಾಲವಾದ ಮೇಲೆ ನಮ್ಮ ಹೆಸರಿಗೆ ಬಂತು. ಇದು ವಾಸ್ತವ ವಿಚಾರ. ಸರ್ವೆ ನಡೆಯಲಿ, ಕಾನೂನು ಪ್ರಕಾರ ಹೇಗಿರುತ್ತೆ ಹಾಗೆ ಮಾಡಲಿ ಎಂದು ಹೇಳಿದ್ದಾರೆ.
01:33 PM (IST) Feb 18
ಅನಧಿಕೃತ ಬಡಾವಣೆಗಳು ನಗರ ಹಾಗೂ ಪಟ್ಟಣ ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ. ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
12:46 PM (IST) Feb 18
ಮಂಗಳೂರು ಸಿಸಿಬಿ ಪೊಲೀಸರು ಬೃಹತ್ ಗಾಂಜಾ ಸಾಗಾಟ ರಾಕೆಟ್ ಭೇದಿಸಿದ್ದು, ಲಾರಿ ಹಾಗೂ ಕಾರ್ ನಲ್ಲಿದ್ದ 119kg ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ನಟೋರಿಯಸ್ ಸ್ಮಗ್ಲರ್ ಕೇರಳದ ಕಾಸರಗೋಡು ನಿವಾಸಿ ಮೊಯ್ದಿನ್ ಶಬ್ಬಿರ್ (38) ಸೇರಿದಂತೆ 4 ಜನರನ್ನು ಬಂಧಿಸಲಾಗಿದೆ.
12:37 PM (IST) Feb 18
12:06 PM (IST) Feb 18
ಇದೊಂದು ಸೌಹಾರ್ದ ಭೇಟಿ. ಯಾವುದೇ ರಾಜಕೀಯ ಮಾತನಾಡಿಲ್ಲ. ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೇ. ಯಾವುದೇ ರಾಜಕೀಯ ವಿದ್ಯಮಾನಗಳ ಚರ್ಚೆ ಮಾಡಿಲ್ಲ. ಸಚಿವರ ಹೇಳಿಕೆಗಳ ಬಗ್ಗೆಯೂ ಚರ್ಚೆ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಡಿಕೆ ಸುರೇಶ್ ಹೇಳಿದ್ದಾರೆ.
11:40 AM (IST) Feb 18
ಇಂದು ಸದಾಶಿವನಗರ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಜಿ ಸಂಸದ ಡಿಕೆ ಸುರೇಶ್ ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ದೂರು ನೀಡಿದ್ರಾ ಎಂಬ ಪ್ರಶ್ನೆ ಮೂಡಿದೆ.
11:29 AM (IST) Feb 18
11:05 AM (IST) Feb 18
ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಮಾ.9ರಂದು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಲಿದ್ದಾರೆ. ಅಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ತಮಿಳುನಾಡು ಮೂಲದ ಶಿವಶ್ರೀ ಅವರು ಈಗಾಗಲೇ ಗಾಯನದಿಂದ ಖ್ಯಾತರಾಗಿದ್ದಾರೆ.
10:55 AM (IST) Feb 18
ಕಾಂಗ್ರೆಸ್‌ನಿಂದ ಉಚ್ಛಾಟನೆಯಾಗಿರುವ ಕವಿತಾ ರೆಡ್ಡಿ, ಸಚಿವ ರಾಜಣ್ಣ ಅವರನ್ನ ಕೆಪಿಸಿಸಿ ಉಚ್ಛಾಟನೆ ಮಾಡುತ್ತದೆಯೇ..? ಎಂದು ಪ್ರಶ್ನೆ ಮಾಡಿದ್ದಾರೆ. ನನ್ನನ್ನು ಹೊರಹಾಕಲು 3rd ಕ್ಲಾಸ್ ಸಹಚರರು ಕಳುಹಿಸಿದ ಕೆಲವು ಅಪ್ರಸ್ತುತ ಸ್ಕ್ರೀನ್ ಶಾಟ್‌ಗಳನ್ನು ಬಳಸುವುದು ಸುಲಭವಾಗಿತ್ತು. ಈಗ ಕೆಪಿಸಿಸಿ ರಾಜಣ್ಣ ಅವರನ್ನು ಉಚ್ಚಾಟಿಸುತ್ತದೆಯೇ? ಹೇಗಾದರೂ, ಸಂಪುಟ ಪುನಾರಚನೆಯಲ್ಲಿ ರಾಜಣ್ಣ ಅವರನ್ನು ಕೈಬಿಡಲಾಗುವುದು ಎಂದು ತಿಳಿದಿತ್ತು. ಆದ್ದರಿಂದ KPCC ಇದನ್ನು ರಾಜಣ್ಣ ಅವರ ಮೇಲಿನ ಕ್ರಮವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಕವಿತಾ ರೆಡ್ಡಿ ಪೋಸ್ಟ್ ಮಾಡಿಕೊಂಡಿದ್ದಾರೆ.
10:48 AM (IST) Feb 18
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಶೇಂಗಾ ಚಿಕ್ಕಿ ನೀಡುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣನ್ನು ಮಾತ್ರ ನೀಡಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
10:32 AM (IST) Feb 18
BMTC ಬಸ್ ನ ಕ್ಯೂಆರ್ ಕೋಡ್ ಬದಲು ನಿರ್ವಾಹಕರು ತಮ್ಮ ವೈಯುಕ್ತಿಕ ಖಾತೆಯ ಕ್ಯೂ ಆರ್ ಕೋಡ್ ಮೂಲಕ ಪ್ರಯಾಣಿಕರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೇಮೆಂಟ್ ಸ್ಕ್ರೀನ್ ಶಾಟ್ ಸಮೇತ ಬಿಎಂಟಿಸಿಗೆ ದೂರು ನೀಡಲಾಗಿದೆ. ಮೆಜೆಸ್ಟಿಕ್ ನಿಂದ ಮಾರತಳ್ಳಿ ಭಾಗವಾಗಿ ವೈಟ್ ಫೀಲ್ಡ್ ಗೆ ತೆರಳುವ ಮಾರ್ಗದಲ್ಲಿ KA57 F432 ನಂಬರ್ ನ ಬಸ್ ಕಂಡಕ್ಟರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಫೆಬ್ರವರಿ 11 ರಂದು ನಡೆದ ಘಟನೆ ಬಗ್ಗೆ ದೂರು ದಾಖಲಿಸಲಾಗಿದೆ.
10:05 AM (IST) Feb 18
ರಾಷ್ಟ್ರೀಯ ಬಿಜೆಪಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದರೂ ಕ್ಯಾರೇ ಎನ್ನದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಇದೇ ತಿಂಗಳ 20ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.
09:57 AM (IST) Feb 18
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೊಳಿಸಿ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ.
09:49 AM (IST) Feb 18
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ದಾಖಲೆಯ 16ನೇ ಬಜೆಟ್ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಮಟ್ಟಿಗೆ 13 ಬಜೆಟ್ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು 2023ರಲ್ಲೇ ತಮ್ಮ 14ನೇ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ಮುರಿದಿದ್ದರು. ಇದೀಗ ರಾಷ್ಟ್ರ ಮಟ್ಟದ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ.