ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಎಲ್ಲ ಮಾರ್ಗಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 26,447 ಟ್ರಿಪ್‌ಗಳಲ್ಲಿ 3.22 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಕಳೆದ ಎಲ್ಲ ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಸೆಪ್ಟೆಂಬರ್ 1ರಿಂದ 30ರವರೆಗೆ ಪ್ರತಿ ದಿನ ಮೆಟ್ರೋದ ನೆರಳೆ ಮಾರ್ಗ, ಹಸಿರು ಮಾರ್ಗ, ಹಾಗೂ ಹಳದಿ ಮಾರ್ಗಗಳಲ್ಲಿ 10 ಲಕ್ಷ ಜನ ಸಂಚರಿಸಿದ್ದಾರೆ, ಅತಿ ಹೆಚ್ಚು ಪ್ರಯಾಣಿಕರು ಸೆ.9ರಂದು 11,45,262 ಮಂದಿ ಪ್ರಯಾಣಿಸಿದ್ದಾರೆ. ಜನದಟ್ಟಣೆ ಸಮಯದಲ್ಲಿ (ಬೆಳಗ್ಗೆ 10 ಹಾಗೂ ಸಂಜೆ 5ರ ಸಮಯ) ಈ ಮೂರು ಮಾರ್ಗಗಳಲ್ಲಿ ರೈಲು ಅತಿ ಕಡಿಮೆ ತಡವಾಗಿ ಬಂದ ಸಮಯ ಎಂದರೆ, ನೆರಳೆ ಮಾರ್ಗದಲ್ಲಿ 3.3 ನಿಮಿಷಗಳು. ಅತಿಹೆಚ್ಚು ತಡವಾಗಿ ಪ್ರಯಾಣಿಕರು ರೈಲಿಗಾಗಿ ಕಾದ ಸಮಯ ಎಂದರೆ ಹಳದಿ ಮಾರ್ಗದಲ್ಲಿ 6 ನಿಮಿಷಗಳು. ಇದನ್ನು ಹೊರತುಪಡಿಸಿ ಈ ತಿಂಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಪ್ರಯಾಣಿಕರಿಗೆ ಮೆಟ್ರೋ ತನ್ನ ಸೇವೆ ನೀಡಿದೆ. ಸಮಯ ಪಾಲನೆಯಲ್ಲಿ ಶೇ 99.73ರಷ್ಟು ಸಾಧನೆ ತೋರಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
08:51 AM (IST) Oct 11
ಅವಾಚ್ಯ ಶಬ್ದಗಳ ಬಳಕೆ ಹಾಗೂ ಅತಿರೇಕದ ವರ್ತನೆಯಿಂದಾಗಿ ಬಿಗ್‌ಬಾಸ್ ಮನೆಯಿಂದ ಮಂಜುನಾಥ್ ಹೊರಬಂದಿದ್ದಾರೆ ಎನ್ನಲಾದ ಪ್ರೋಮೋ ಬಿಡುಗಡೆಯಾಗಿದೆ. ಈ ಬೆಳವಣಿಗೆಯಿಂದ ಯಶಸ್ ಕೃಷ್ಣ ಸೇರಿದಂತೆ ಕೆಲವರು ಸಂಭ್ರಮಿಸಿದರೆ, ವೀಕ್ಷಕರಲ್ಲಿ ಇದು ನಿಜವೇ ಎಂಬ ಗೊಂದಲ ಮೂಡಿದೆ.
08:22 AM (IST) Oct 11
08:14 AM (IST) Oct 11
ಐದು ಸಾವಿರ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ. ಇಳಕಲ್ಲಿನ ಎಸ್.ವಿ.ಎಂ. ಸಂಘದ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶ್ರೀಗಳ ಆಶೀರ್ವಾದದಿಂದ ಸಚಿವನಾಗಿದ್ದೇನೆ ಎಂದರು.
08:12 AM (IST) Oct 11
08:03 AM (IST) Oct 11
07:49 AM (IST) Oct 11
07:37 AM (IST) Oct 11
ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಅಕ್ಟೋಬರ್ 10, 16 ಮತ್ತು 17 ರಂದು ಕಾರ್ಯಾಚರಣೆ ನಡೆಸಲಿದ್ದು, ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ