Published : Feb 13, 2025, 07:27 AM ISTUpdated : Feb 13, 2025, 08:11 PM IST

Karnataka New Live: ಸಿದ್ದರಾಮಯ್ಯ ಪರ ಹಲವರ ಬ್ಯಾಟಿಂಗ್, ಕುರ್ಚಿ ಅಲುಗಾಡಲ್ಲ ಎಂದ ನಾಯಕರು

ಸಾರಾಂಶ

ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳ ಆಂತರಿಕ ಯುದ್ಧ ಕ್ಲೈಮ್ಯಾಕ್ಸ್  ಹಂತಕ್ಕೆ ಬಂದು ತಲುಪಿದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಸುಳಿವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ದೆಹಲಿಗೆ ತೆರಳಿರುವ ಸಚಿವ ಕೆಎನ್ ರಾಜಣ್ಣ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ನೋಟಿಸ್ ಸಿಕ್ಕಿಲ್ಲ, ಸಿಕ್ಕರೂ ಉತ್ತರ ಕೊಡಲ್ಲ ಎಂಬ ಮಾತುಗಳನ್ನಾಡುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ. ಇದರ ಜೊತೆ ಬಿವೈ ವಿಜಯೇಂದ್ರ  ಬದಲಾಗುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ.  ಎರಡು ಪಕ್ಷದ ರಾಜ್ಯದ ಅಧ್ಯಕ್ಷರ ಬದಲಾವಣೆಯಾದ್ರೆ ಮುಂದಿನ ಆಯ್ಕೆ ಯಾರು ಎಂಬುದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಶುರುವಾಗಿದೆ.  ಈ ಎಲ್ಲಾ ಬೆಳವಣಿಗೆ ನಡುವೆ ಮೆಟ್ರೋ ರೈಲು ದರ ಏರಿಕೆ ಸಂಬಂಧ ಎರಡು ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ. ಇಂದು ಲೋಕಸಭೆಯಲ್ಲಿ ವಕ್ಪ್ ಬಿಲ್ ಮಂಡನೆಯಾಗಲಿದೆ. ಮುಡಾ ಅಕ್ರಮದ ವರದಿಯನ್ನು ಮೈಸೂರು ಲೋಕಾಯುಕ್ತ ಪೊಲೀಸರು ಐಜಿಪಿಗೆ ಸಲ್ಲಿಕೆ ಮಾಡಿದ್ದಾರೆ.ಇಂದು ಇಡೀ ದಿನ ನಡೆದ ಪ್ರಮುಖ ಬೆಳವಣಿಗಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ. 

Karnataka New Live:  ಸಿದ್ದರಾಮಯ್ಯ ಪರ ಹಲವರ ಬ್ಯಾಟಿಂಗ್, ಕುರ್ಚಿ ಅಲುಗಾಡಲ್ಲ ಎಂದ ನಾಯಕರು

08:10 PM (IST) Feb 13

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.  ಕೈಗಾರಿಕೋದ್ಯಮದ ಪರವಾನಗಿ ನೀಡಲು ಹಣದ ಬೇಡಿಕೆ ಇಟ್ಟಿದ್ದ ಬಸವರಾಜ್. ಒಂದು ಎಕ್ಕರೆ 17 ಗುಂಟೆ ಜಾಗದಲ್ಲಿ ಮರದ ಶಾಮಿಲ್ ನಡೆಸಲು 70 ಸಾವಿರ ಹಣದ ಬೇಡಿಕೆ.ಪರವಾನಗಿ ನೀಡಲು ಒಟ್ಟು ಎರಡು ಲಕ್ಷ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ.

07:39 PM (IST) Feb 13

ಸಾಭೀತು ಮಾಡಿದ್ರೆ ರಾಜಕೀಯ ನಿವೃತ್ತಿ, ಸಂದೀಪ್ ರೆಡ್ಡಿಗೆ ಡಾ.ಕೆ ಸುಧಾಕರ್ ಸವಾಲು

ಬಿಜೆಪಿ ಜಿಲ್ಲಾಧ್ಯಕ್ಷ ವಿಚಾರದಲ್ಲಿ ಸಂದೀಪ್ ‌ರೆಡ್ಡಿ ಆರೋಪಕ್ಕೆ ಸಂಸದ ಡಾ.ಕೆ. ಸುಧಾಕರ್  ತಿರುಗೇಟು ನೀಡಿದ್ದಾರೆ. ಕೋವಿಡ್ ನಲ್ಲಿ ಚೆನ್ನೈ ನ ಮೈಕ್ರೋ ಫೈನಾನ್ಸ್ ಗಳಿಗೆ ಹಷ ವರ್ಗಾವಣೆ ವಿಚಾರ ಸತ್ಯಕ್ಕೆ ದೂರವಾಗಿದೆ. ಆರೋಪ ಸಾಬೀತು ಮಾಡಿದರೆ ರಾಜಕೀಯಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ. 

07:07 PM (IST) Feb 13

ದಲಿತರಿಗೆ ಆದ್ಯತೆ ನೀಡಲು ಮನವಿ, ಖರ್ಗೆ ಭೇಟಿಯಾದ ಸಚಿವ ರಾಜಣ್ಣ

ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಅಧ್ಯಕ್ಷ ಸ್ಥಾನ ಮತ್ತು ಸಿಎಂ ಬದಲಾವಣೆ ವಿಚಾರ ಬಂದಾಗ ದಲಿತರಿಗೆ ಮನ್ನಣೆ ನೀಡಲು ಮನವಿ ಮಾಡಿದ್ದಾರೆ.

06:50 PM (IST) Feb 13

ಧಗಧಗಿಸಿದ ಎಣ್ಣೆಹೊಳೆ ಮಹದೇಶ್ವರ ದೇವಸ್ಥಾನ ಬೆಟ್ಟ, ಕಿಡಿಗೇಡಿಗಳಿಂದ ಕೃತ್ಯ

ಚಾಮರಾಜನಗರ ತಾಲೂಕಿನ ಎಣ್ಣೆಹೊಳೆ ಮಹದೇಶ್ವರ ದೇವಸ್ಥಾನದ ಬಳಿ ಬೆಂಕಿ ಕಾಣಿಸಿಕೊಂಡು ಇಡೀ ಬೆಟ್ಟ ಹೊತ್ತಿ ಉರಿದಿದೆ. ಕಿಡಿಗೇಡಿಗಳು ಬೆಂಕಿ ಹಾಕಿರುವ ಪರಿಣಾಮ ಹತ್ತಾರು ಎಕರೆ ಕುರುಚಲು ಕಾಡು ಭಸ್ಮವಾಗಿದೆ. 

06:21 PM (IST) Feb 13

ಸಿಎಂ ಗಟ್ಟಿಯಾಗಿ ಕುರ್ಚಿಯಲ್ಲಿ ಕೂತಿದ್ದಾರೆ, ಸಿದ್ದರಾಮಯ್ಯ ಪರ ಮಹದೇವಪ್ಪ ಬ್ಯಾಟಿಂಗ್

ಸಿಎಂ ಬದಲಾವಣೆ ವಿಚಾರದಲ್ಲಿ  ಸಚಿವ ಡಾ ಎಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.  ಸಿದ್ದರಾಮಯ್ಯ ಬದಲಾವಣೆ ವಿಚಾರ ಪ್ರಸ್ತಾಪವೇ ಇಲ್ಲ. ಸತೀಶ್ ಜಾರಕಿಹೊಳಿ ಮನೆ, ನಮ್ಮ ಮನೆ ಅಕ್ಕಪಕ್ಕದಲ್ಲೆ ಇದೇ. ಹಾಗಾಗಿ ಭೇಟಿ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಸಚಿವ ಡಾ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.

05:42 PM (IST) Feb 13

ಜೆಡಿಎಸ್ ವಿಪ್ ಜಾರಿ ನಡುವೆಯೂ ಸದಸ್ಯರಿಂದ ಅಡ್ಡ ಮತದಾನ

ನೆಲಮಂಗಲ ನಗರಸಭೆ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದೆ.ಜೆಡಿಎಸ್ ನಿಂದ ಸದಸ್ಯರಿಗೆ ವಿಪ್ ಜಾರಿ ನಡುವೆಯೂ ಅಡ್ಡ ಮತದಾನ ನಡೆದಿದೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್.ಗಣೇಶ್ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಜಯಗಳಿಸಿದ್ದ ಎನ್.ಗಣೇಶ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. 

05:04 PM (IST) Feb 13

ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ಸಭೆ, ಬಿ ಕೆ ಹರಿಪ್ರಸಾದ್‌ಗೆ ಬುಲಾವ್

ಕಾಂಗ್ರೆಸ್ ಸಂಘಟನೆಗೆ ಹೊಸ ಶಕ್ತಿ ನೀಡಲು ಮಹತ್ವದ ಸಭೆ ನಡೆದಿದೆ.ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಸಭೆ ನಡೆಸಲಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್  ಸಭೆಯಲ್ಲಿ ಭಾಗಿಯಾಗಿದ್ದಾರೆ. ಚರ್ಚೆ ಬಳಿಕ ಕರ್ನಾಟಕ ಪ್ರಮುಖ ನಾಕ ಬಿ ಕೆ ಹರಿಪ್ರಸಾದ್ ಗೆ ಬುಲಾವ್ ನೀಡಲಾಗಿದೆ.

04:28 PM (IST) Feb 13

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ವಿಚಾರ, ಪ್ರತಿಕ್ರಿಯೆ ನೀಡದೆ ತೆರಳಿದ ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಪೂರ್ಣ ಅವಧಿ  ಸಿಎಂ ಆಗಿ ಇರುತ್ತಾರೆ ಎಂಬ ಸಚಿವರ ಹೇಳಿಕೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. 

03:12 PM (IST) Feb 13

ನಮ್ಮ ಮೆಟ್ರೋ ದರ ಏರಿಕೆಗೆ ಜನಾಕ್ರೋಶ ಬೆನ್ನಲ್ಲೇ ಬೇಕಾಬಿಟ್ಟಿ ಬೆಲೆ ತಗ್ಗಿಸಲು ನಿರ್ಧಾರ; ನಾಳೆಯಿಂದ ಹೊಸದರ ಜಾರಿ!

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬೆಲೆ ತಗ್ಗಿಸಲು ಮುಂದಾಗಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ಮೂಲಕ ಬೆಲೆ ತಗ್ಗಿಸುವ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

02:49 PM (IST) Feb 13

2024-25ನೇ ಸಾಲಿನ ವಿವಿಧ ಪ್ರಶಸ್ತಿ ಪುರಸ್ಕೃರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!

02:10 PM (IST) Feb 13

ನನ್ನ ಹೇಳಿಕೆಗೆ ಈಗಲೂ ಬದ್ಧ

ಆರ್.ಎಸ್.ಎಸ್ ಅವರು ವೇಷ ಮರೆಸಿಕೊಂಡು ಕಲ್ಲು ತೂರಿದ್ದಾರೆ.  ಈ ಹೇಳಿಕೆಗೆ ಈಗಲೂ ಬದ್ದವಾಗಿದ್ದೇನೆ. ಡಿಕೆ ಶಿವಕುಮಾರ್‌ಗೂ ಕೂಡ ತಪ್ಪು ಮಾಹಿತಿ ನೀಡಿರಬಹುದು.
ನಾನು ಅವರಿಗೆ ಸರಿ ಮಾಹಿತಿ ನೀಡುತ್ತೇನೆ ಎಂದು  ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.

01:17 PM (IST) Feb 13

ಮಧು ಬಂಗಾರಪ್ಪ ವಿರುದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

ಭದ್ರಾವತಿ ಜನ ನಿಮ್ಮ ಬಗ್ಗೆ ಲೋಕಲ್ ಭಾಷೆಯಲ್ಲಿ ಬೈದುಕೊಳ್ಳುತ್ತಿದ್ದಾರೆ. ಕೂದಲು ಬಿಟ್ಕೊಂಡು, ತಲೆ ಕೆರ್ಕೊಂಡು ಬಂದು ಸ್ಟೇಟ್ಮೆಂಟ್ ಕೊಡೋದಲ್ಲ.  ನೀವು ಈಗ ಏನು ಸಗಣಿ ತಿಂತಿದೀರಾ? ಅದಷ್ಟು ಶೀಘ್ರವಾಗಿ ಭದ್ರಾವತಿ ಶಾಸಕರ ಮಗ ಮಹಿಳಾ ಅಧಿಕಾರಿ ಬೈದ ಪ್ರಕರಣದ ತನಿಖೆ ಆಗಬೇಕು ಎಂದು ಸಚಿವ  ಮಧು ಬಂಗಾರಪ್ಪ ವಿರುದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ. 

12:46 PM (IST) Feb 13

ಕೆಪಿಸಿಸಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ದ: ಪರಂ

12:17 PM (IST) Feb 13

ಅಮಾಯಕರಿಗೆ ತೊಂದರೆ‌ ಕೊಡಬೇಡಿ: ತನ್ವೀರ್ ಸೇಠ್

ಬೆಳಗ್ಗೆ ದೂರು ಕೊಟ್ಟರೆ ಸಂಜೆ ಪ್ರಕರಣ ದಾಖಲಾಗಿದೆ. ಎಲ್ಲದರ ಬಗ್ಗೆ ಪರಮರ್ಶೆ ಮಾಡಬೇಕಿದೆ. ಈ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಅಮಾಯಕರಿಗೆ ತೊಂದರೆ‌ ಕೊಡಬೇಡಿ ಎಂದಷ್ಟೆ ಪೊಲೀಸರಿಗೆ ಮನವಿ ಮಾಡಿದ್ದೇನೆ‌ ಎಂದು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ. 

11:43 AM (IST) Feb 13

ದರ ಇಳಿಕೆಗೆ ಮುಂದಾದ ನಮ್ಮ ಮೆಟ್ರೋ; ಎಷ್ಟು ಕಡಿಮೆಯಾಗುತ್ತೆ? BMRCL ಎಂಡಿ ಹೇಳಿದ್ದೇನು?

11:20 AM (IST) Feb 13

ಸಿಎಂ ಕುರ್ಚಿ ಖಾಲಿ ಇಲ್ಲ

ದೇವರಾಜು ಅರಸು 7ವರ್ಷಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಇರ್ತಾರೆ. ಏಳು ವರ್ಷಗಳಲ್ಲ 10ವರ್ಷ ಇರ್ತಾರೆ. ಹೈಕಮಾಂಡ್ ಸಿದ್ದರಾಮಯ್ಯನವರನ್ನ ಸಿಎಂ ಮಾಡಿದ್ದಾರೆ. ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ. ಸಿಎಂ ಕುರ್ಚಿ ಖಾಲಿ ಇಲ್ಲ. ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

10:52 AM (IST) Feb 13

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಂತ್ರಾಲಯ ರಾಯರ ಮಠದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು

ಕಳೆದ ತಿಂಗಳು(ಜ.22) ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಮಂತ್ರಾಲಯ ಮಠದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಜಯಸಿಂಹ(23) ಮೃತ ದುರ್ದೈವಿ.  ಮಂತ್ರಾಲಯ ರಾಯರ ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದ ಮೃತರು. ಅಪಘಾತದಲ್ಲಿ ತಲೆ, ಬೆನ್ನು, ಶಾಸ್ವಕೋಶ ಸೇರಿ ದೇಹದ ಹಲವೆಡೆ ತೀವ್ರ ಗಾಯಗಳಾಗಿದ್ದವು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ. ಆದರೆ ಇಂದು ಬೆಳಗಿನ ಜಾವ ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವನ್ನಪ್ಪಿದ್ದಾರೆ
 

10:31 AM (IST) Feb 13

ಶಾಸಕ ಸಂಗಮೇಶ್ ರಾಜೀನಾಮೆಗೆ ಆಗ್ರಹ

ಗಣಿ ಅಧಿಕಾರಿ ಜ್ಯೋತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ, ಭದ್ರಾವತಿ ಶಾಸಕ ಸಂಗಮೇಶ್ ಪುತ್ರನನ್ನು ಬಂಧಿಸಬೇಕಿತ್ತು. ಶಾಸಕ ಸಂಗಮೇಶ್ ತಮ್ಮ ಶಾಸಕ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

09:52 AM (IST) Feb 13

ಉದಯಗಿರಿ ಪೊಲೀಸ್ ಠಾಣೆ ಬಳಿ ಹೈಡ್ರಾಮಾ

ಉದಯಗಿರಿ ಪೊಲೀಸ್ ಠಾಣೆ ಮುಂದೆ ಬಂದಿದ್ದ ಮುಸ್ಲಿಂ ಮಹಿಳೆಯರು ಬಂಧನದಲ್ಲಿರುವ ಆರೋಪಿಗಳನ್ನು ಬಿಡುವಂತೆ ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಸ್ಥಳೀಯ  ವಕೀಲ ಷರೀಫ್ ಎಂಬವರು ಮಹಿಳೆಯರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.

09:23 AM (IST) Feb 13

ಮೆಟ್ರೋ ದರ ಏರಿಕೆಗೆ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

09:15 AM (IST) Feb 13

ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ

ಶೇ.40ರಿಂದ ಆರಂಭವಾಗಿ ದುಪ್ಪಟ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ಅಸಮಾಧಾನದ ಬಿಸಿ ತಟ್ಟುತ್ತಿದೆ.  ಫೆ.4 ರಂದು 8,58,417 ಮಂದಿ ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆ ಫೆ.10ರಂದು 8,28,149ರಷ್ಟಿತ್ತು. 79,643 ಮಂದಿ ಪ್ರಯಾಣಿಕರ ಕುಸಿತವನ್ನು ನಮ್ಮ ಮೆಟ್ರೋ ದಾಖಲಿಸಿದೆ.

08:36 AM (IST) Feb 13

ಇವಕ್ಕೆಲ್ಲ ಹೆದರುವ ಮಗ ನಾನಲ್ಲ ಎಂದ ಯತ್ನಾಳ್!

‘ಬಿಜೆಪಿ ವರಿಷ್ಠರು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ಬಂದರೂ ನಾನು ಅದಕ್ಕೆ ಉತ್ತರ ನೀಡುವುದಿಲ್ಲ’ ಎಂದು ನಗರ ಬಿಜೆಪಿ ಶಾಸಕ ಹಾಗೂ ರಾಜ್ಯ ಬಿಜೆಪಿ ಭಿನ್ನರ ಪಡೆ ನಾಯಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

08:23 AM (IST) Feb 13

ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ನಿಧನ

07:46 AM (IST) Feb 13

ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ

ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.  ಬಂಧಿತರಲ್ಲಿ12 ಜನ‌ ಯುವಕರು, ಓರ್ವ ಅಪ್ರಾಪ್ತ ಸೇರಿದ್ದಾನೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


More Trending News