LIVE NOW
Published : Nov 22, 2026, 06:51 AM ISTUpdated : Nov 22, 2026, 07:07 AM IST

Karnataka Latest News Live: ಹೊಸ ಮನೆಗೆ 'ಜನಗಣಮನ ನಿವಾಸ' ನಾಮಕರಣ ಮಾಡಿ ಗಮನ ಸೆಳೆದ ಗ್ರಾಮ ಆಡಳಿತಾಧಿಕಾರಿ Kotturu

ಸಾರಾಂಶ

ಹೊಸಪೇಟೆ: ಹೊಸಪೇಟೆ ನಗರದ 100 ಹಾಸಿಗೆ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ನೆಹರು ತಾರಾಲಯ ಆವರಣದಲ್ಲಿರುವ ಯು.ಆರ್.ರಾವ್ ಸಭಾಂಗಣದಲ್ಲಿ ಗುರುವಾರ ನಡೆದ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸಪೇಟೆಯ ಇಂದಿರಾ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯಮಟ್ಟದ ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಪ್ರಶಸ್ತಿ ಪ್ರದಾನ ಮಾಡಿದರು.

ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಬಿ.ಜೀವರತ್ನಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ಕುಮಾರ್, ನಗರಸಭಾ ಆಯುಕ್ತ ಯರಗುಡಿ ಶಿವಕುಮಾರ್, ಪರಿಸರ ಅಧಿಕಾರಿ ಆರತಿ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಚಿವ ಡಾ‌.ಯತೀಂದ್ರ, ಬಾಲಕೃಷ್ಣ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಾವೇರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

07:07 AM (IST) Nov 22

ಹೊಸ ಮನೆಗೆ 'ಜನಗಣಮನ ನಿವಾಸ' ನಾಮಕರಣ ಮಾಡಿ ಗಮನ ಸೆಳೆದ ಗ್ರಾಮ ಆಡಳಿತಾಧಿಕಾರಿ Kotturu

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಮದ್ದಾನಪ್ಪ ದುಮ್ಮಾಡಿ ತಮ್ಮ ನೂತನ ಮನೆಗೆ 'ಜನ ಗಣ ಮನ ನಿವಾಸ' ಎಂದು ನಾಮಕರಣ ಮಾಡಿದ್ದಾರೆ. ಮನೆಯ ಗೋಡೆಯ ಮೇಲೆ ಸಂಪೂರ್ಣ ರಾಷ್ಟ್ರಗೀತೆಯನ್ನು ಕೆತ್ತಿಸಿ, 365 ದಿನ ರಾಷ್ಟ್ರಧ್ವಜ ಹಾರಿಸುವ ಮೂಲಕ ತಮ್ಮ ಅದ್ಭುತ ದೇಶಪ್ರೇಮ ಮೆರೆದಿದ್ದಾರೆ.
Read Full Story

More Trending News