Karnataka News Live Updates: ಲಾಲ್ ಫ್ಲವರ್ ಶೋ, ಡಾ. ರಾಜ್ ಕುಟುಂಬ್ ಭಾಗಿ

ನವೆಂಬರ್ ಒಂದರೊಂದು ಪುನಿತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು, ಸಿಎಂ ಬಸವರಾಜ ಬೊಮ್ಮಾಯಿ, ಲಾಲ್‌ಬಾಗ್‌ನಲ್ಲಿ ಫಲ ಪುಷ್ಪ ಪ್ರದರ್ಶನ ಉದ್ಘಾಟನೆ ನಂತರ ಘೋಷಣೆ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು, ಜನ ಸಾಗರವೇ ಹರಿದು ಬರುತ್ತಿದೆ. ಮತ್ತೊಂದೆಡೆ ರಾಜ್ಯದ ಎಲ್ಲೆಡೆ ಮೊದಲ ಶ್ರಾವಣ ಶುಕ್ರವಾರದ ವಿಶೇಷ ದಿನವಾದ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದು, ಮಾರುಕಟ್ಟೆಯಲ್ಲಿ ಹೂವು ಹಣ್ಣಿನ ವ್ಯಾಬಾರ ಬಿರುಸಿನಿಂದ ಸಾಗಿದೆ. ಎಂದಿನಂತೆ ಹೂವಿನ ಬೆಲೆ ವಿಪರೀತವಾಗಿದೆ. 

3:18 PM

ರಾಜಕುಮಾರ್ ‌ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಇಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಈ ಆದೇಶ ಹೊರಡಿಸಿದ್ದಾರೆ. ರಾಜಕುಮಾರ್ ‌ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಅಧಿಕಾರಿಗೆ ಸಂಕಷ್ಟ ಎದುರಾಗಿದೆ.

2:51 PM

ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಿ ಭಾರತ ಉಳಿಸಿ...

ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಿ ಭಾರತ ಉಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ನೀಡಿದ ಪ್ರಮೋದ್ ಮುತಾಲಿಕ್. ಬೆಂಗಳೂರು ಜಿಲ್ಲಾಧಿಕಾರಿಗಳ ಮೂಲಕ‌ ಸಿಎಂಗೆ ಮನವಿ. 2047 ಕ್ಕೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವ ಉದ್ದೇಶ ಎಸ್ಡಿಪಿಐ, ಪಿಎಫ್ಐಗಳಿಗೆ ಇದೆ. ದೇಶ ದ್ರೋಹಕ್ಕಾಗಿಯೇ ಪಿಎಫ್ಐ ಸಂಘಟಿಸಲಾಗಿದೆ. ಬಿಹಾರದಲ್ಲಿ ಪಿಎಂ ನರೇಂದ್ರ ಮೋದಿ ಹತ್ಯೆ ಸಂಚು ಬಯಲಾಗಿದೆ. ಹೀಗೆ 10 ಕಾರಣಗಳನ್ನು ನೀಡಿ ಎಸ್ಪಿಪಿಐ ಹಾಗೂ ಪಿಎಫ್ಐ ಬ್ಯಾನ್ ಮಾಡಲು ಮನವಿ.

2:27 PM

ಗೊರವನಹಳ್ಳಿಯಲ್ಲಿ ವಿಶೇಷ ಪೂಜೆ

ತುಮಕೂರು: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ. ಬೆಳಗ್ಗೆ 5 ಗಂಟೆಯಿಂದಲೆ ಅಭಿಷೇಕ ವಿಶೇಷ ಪೂಜೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು. ಕೊರೋನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಬರುವಂತ ಭಕ್ತಾದಿಗಳಿಗೆ ತೀರ್ಥ ಪ್ರಸಾದಕ್ಕೆ ಅವಕಾಶ. ಬೆಂಗಳೂರು ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಆಗಮಿಸುವ ಭಕ್ತರು.  ವೃದ್ದರಿಗೆ ಹಾಗೂ ವಿಶೇಷಚೇತನರಿಗೆ ಪ್ರತ್ಯೇಕ ದರ್ಶನಕ್ಕೆ ವ್ಯವಸ್ಥೆ.

1:40 PM

ಸಿದ್ದರಾಮೋತ್ಸವಕ್ಕೆ ಆಗಮಿಸುವಾಗ ಅಪಘಾತದಲ್ಲಿ ಸಾವು: ಸಿದ್ದು ಸಾಂತ್ವಾನ

ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾವೇಶಕ್ಕೆ ಬರುವಾಗ ಮತ್ತು ವಾಪಸ್ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಮೃತರಾದ ಇಬ್ಬರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಮೃತರ ನಿವಾಸಗಳಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ. ಅಗಸ್ಟ್ 7ರಂದು ಪಿರಿಯಾಪಟ್ಟಣದ ಘಸಿ ಉದ್ದೀನ್ ಮನೆಗೆ ಭೇಟಿ. ಅಗಸ್ಟ್ 10ರಂದು ಮುಧೋಳದ ಪ್ರಕಾಶ ಬಡಿಗೆರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

1:31 PM

Chikkodi: ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಒಮಿನಿ‌ ಕಾರ್

ಚಿಕ್ಕೋಡಿ: ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಒಮಿನಿ‌ ಕಾರು. ಸಂಕೇಶ್ವರ ಪಟ್ಟಣದ ಶಿವಾಜಿ ವೃತ್ತದಲ್ಲಿ ಘಟನೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣ. ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನ. ಮಾರುಕಟ್ಟೆ ಪ್ರದೇಶದಲ್ಲೆ ಬೆಂಕಿ ಅವಘಡ ಹಿನ್ನೆಲೆಯಲ್ಲಿ ಶಿವಾಜಿ ವೃತ್ತದಲ್ಲಿ ಕೆಲಕಾಲ ಆತಂಕದ ವಾತಾವರಣ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಹೊರಗಡೆಗೆ ಬಂದ ಪ್ರಯಾಣಿಕರು. ಯಾವುದೇ ಪ್ರಾಣ ಹಾನಿ  ಸಂಭವಿಸಿಲ್ಲ. ಬೆಂಕಿ‌ ನಂದಿಸಿದ ಅಗ್ಮಿ ಶಾಮಕ ದಳದ ಸಿಬ್ಬಂದಿ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,

1:15 PM

ಗಾರ್ಡನ್ ಸಿಟಿ ಹೋಗಿ ಪಾಟ್ ಹೋಲ್ ಸಿಟಿ ಆಗಿದೆ ಬೆಂಗಳೂರು: ಕೃಷ್ಣ ಬೈರೇಗೌಡ

ಶಾಸಕ ಕೃಷ್ಣ ಬೈರೇಗೌಡ ಹೇಳಿಕೆ, ಬೆಂಗಳೂರು ಗಾರ್ಡನ್ ಸಿಟಿ, ಐಟಿ ಸಿಟಿ ಆಗಿ ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್. ಸ್ಟಾರ್ಟಪ್ ಸಿಟಿ, ಡೈನಾಮಿಕ್ ಸಿಟಿಯಾಗಿದ್ದ ಬೆಂಗಳೂರು ಪಾಟ್‌ ಹೋಲ್ ಸಿಟಿ ಆಗಿದೆ. ಬೆಂಗಳೂರಿಗೆ ಬಿಜೆಪಿ ಅನ್ಯಾಯ ಮಾಡಿರೋದು ರಸ್ತೆ ರಸ್ತೆಯಲ್ಲಿ ಕಾಣ್ತಿದೆ. ಹೆಬ್ಬಾಳ, ಪೀಣ್ಯ ಟ್ರಾಫಿಕ್ ಸಮಸ್ಯೆ ಗೆ ಪರಿಹಾರ ಕೊಡಲಿಲ್ಲ. ಪಾಟ್‌ ಹೋಲ್ ಮುಚ್ಚುವುದರಲ್ಲಿ ದುಡ್ಡು ಮಾಡ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಬೇಕಾಬಿಟ್ಟಿ ವಾರ್ಡ್ ಮಾಡಿ ಮೀಸಲಾತಿ ಮಾಡಿ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿ, ಕಾಂಗ್ರೆಸ್ ‌ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳೆಯರಿಗೆ ಮೀಸಲಾತಿ ನೀಡಿ. ವಾಮ ಮಾರ್ಗದ ಮೂಲಕ ಚುನಾವಣೆ ಎದುರಿಸುವ ಪ್ರಯತ್ನ ಮಾಡ್ತಿದೆ ಬಿಜೆಪಿ. ಇದು ನಾಚಿಕೆಗೇಡಿನ ವಿಚಾರ. ಹೇಡಿತನದಿಂದ ಕಾನೂನು ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೀಸಲಾತಿ ಹೊರಡಿಸಿದ್ದಾರೆ. ಇದನ್ನ ಕಾಂಗ್ರೆಸ್ ‌ಸಂಪೂರ್ಣ ಕಾಂಗ್ರೆಸ್ ವಿರೋಧಿಸುತ್ತದೆ. ಆದರೆ ಜನ ಇವರ ಎಲ್ಲಾ ಆಟಗಳನ್ನ ನೋಡ್ತಿದ್ದಾರೆ. ಪಾಟ್ ಹೋಲ್ ಸಮಸ್ಯೆ, ಬೆಲೆ ಏರಿಕೆ ಬಿಸಿ, ಟ್ಯಾಕ್ಸ್ ಹೆಚ್ಚಳ ಈ ಎಲ್ಲಾ ಕಾರಣದಿಂದ ತಕ್ಕ‌ಪಾಠ ಕಲಿಸುತ್ತಾರೆ, ಎಂದಿದ್ದಾರೆ. 

1:06 PM

ಮಗು ಹತ್ಯೆ ಉದ್ದೇಶಪೂರ್ವಕ: ಡಿಸಿಪಿ ಶ್ರೀನಿವಾಸ್ ಗೌಡ

ಬಿಲ್ಡಿಂಗ್ ಮೇಲಿಂದ ತಾಯಿ ಮಗುವನನ್ನ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ. ನಿನ್ನೆ ಸಂಜೆ ಮಗುವನ್ನ ನಿಮ್ಹಾನ್ಸ್‌ಗೆ ಅಡ್ಮಿಟ್ ಮಾಡಿರ್ತಾರೆ. ಮಹಡಿ ಮೇಲಿಂದ ಮಗು ಬಿದ್ದಿದೆ ಎಂದು ಹೇಳಿದ್ದರು. ಆದರೆ, ನಾವು ಆ ಮಗುವಿನ ಬಗ್ಗೆ ಕೂಲಂಕುಷವಾಗಿ ತೆನಿಖೆ ನಡೆಸಿದಾಗ‌, ಆ ತಾಯಿ ಬೇಕು ಅಂತ  ಮಾಡಿ ಮೇಲಿಂದ ಎಸೆದಿದ್ದಾರೆ ಎಂದು ಗೊತ್ತಾಗುತ್ತೆ. 
ಇಂಜುರಿಯಿಂದ ಆ ಮಗು ನಿನ್ನೆ ತಡ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪಿದೆ. ಆ ಮಗು ಬುದ್ಧಿಮಾಂದ್ಯ ಎಂಬ ಕಾರಣಕ್ಕಾಗಿ ಆ ತಾಯಿ ರೀತಿ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ..
ಆ ತಾಯಿ ಮೇಲೆ ಮರ್ಡರ್‌ ಕೇಸ್ ಹಾಕಿ ಅರೆಸ್ಟ್ ಮಾಡಿದ್ದೆವೆ. ಇನ್ನುಳಿದಂತೆ ಸಮಗ್ರ ತನಿಖೆ ನಡೆಯುತ್ತಿದೆ.

12:48 PM

ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ‌

ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ‌. 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ.. ಕೈಮಗ್ಗ ಮತ್ತು ಜವಳು ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ. ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಮೂರು ದಿನಗಳ ಕಾಲ ನಡೆಯಲಿರುವ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ಪ್ರದರ್ಶನ. ಕಾರ್ಯಕ್ರಮದಲ್ಲಿ ಜವಳಿ ಖಾತೆ ಸಚವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಚಿವ ಮುನಿರತ್ನ, ನಿರಾಣಿ  ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

12:21 PM

ಜನ್ಮಕೊಟ್ಟ ತಾಯಿಯಿಂದಲೇ  ಮಗುವಿನ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆ.  ಜನ್ಮಕೊಟ್ಟ ತಾಯಿಯಿಂದಲೇ  ಮಗುವಿನ ಹತ್ಯೆ. ಬುದ್ದಿಮಾಂದ್ಯ ಮಗು ಎಂದು ಹತ್ಯೆ. ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ ಅಮ್ಮ. ಸ್ಥಳದಲ್ಲೇ ಮೃತಪಟ್ಟ ಐದು ವರ್ಷದ ಕಂದಮ್ಮ. ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಿಸಿಟಿಯಲ್ಲಿ ಸೆರೆಯಾಯ್ತು ಭಯನಕ ದೃಶ್ಯ. ಸಮಯ ಪ್ರಜ್ಞೆಯಿಂದ ತಾಯಿಯನ್ನು ರಕ್ಷಿಸಿದ ಸ್ಥಳೀಯರು. ದಂತ ವೈದ್ಯಯಾಗಿ ಪ್ರಾಕ್ಟಿಸ್ ಮಾಡುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಮೃತ ಮಗುವಿನ ತಂದೆ. ಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ. ತಾಯಿ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12:13 PM

ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ

ಹವಾಮಾನ ಇಲಾಖೆಯಿಂದ  ಮಾಹಿತಿ. ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಸಾಧ್ಯತೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್,. ನಾಳೆ ರೆಡ್ ಅಲರ್ಟ್. 6ನೇ ತಾರೀಖು ಆರೆಂಜ್ ಅಲರ್ಟ್. ಕೊನೆಯ ಎರಡು ದಿನ ಯಲ್ಲೋ ಅಲರ್ಟ್. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.

10:38 AM

ಬೆಂಗಳೂರಿನಲ್ಲಿ ಕಸ್ಟಡಿಯಲ್ಲಿದ್ದ ವಿದೇಶಿ ಪ್ರಜೆಗಳು ಎಸ್ಕೇಪ್

ಪೊಲೀಸ್ ಹಾಗೂ ಎಫ್‌ಆರ್‌ಆರ್‌ಒ ಕಸ್ಟಡಿಯಲ್ಲಿದ್ದರು ಆರೋಪಿಗಳು. ಬಾಂಗ್ಲಾದೇಶ ‌7 , ಉಗಾಂಡ 3 ಪ್ರಜೆಗಳು ಪರಾರಿಯಾಗಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ವಿದೇಶಿ ಪ್ರಜೆಗಳನ್ನ ಗಡಿಪಾರಿಗೆ ತಯಾರಿ ನಡೆಸಿದ್ದ ಅಧಿಕಾರಿಗಳು. FRRO ಮತ್ತು ಬೆಂಗಳೂರು ಪೊಲೀಸರು ದಾಖಲೆ ಪರಿಶೀಲನೆ ನಡೆಸಿ ಗಡಿಪಾರು ಮಾಡಲು ಮುಂದಾಗಿದ್ದರು. ಕೊತ್ತನೂರು ಬಳಿಯ ದೊಡ್ಡಗುಬ್ಬಿಯ NGO  ಕೇಂದ್ರದಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರಾತ್ರೋರಾತ್ರಿ ಕಬ್ಬಿಣದ ಗ್ರೀಲ್ಸ್‌ಗೆ ಹಗ್ಗ ಕಟ್ಟಿ ಕೆಳಗೆ ಇಳಿದು ಪರಾರಿ. ಎರಡನೇ ಮಹಡಿಯಯಿಂದ ಹಗ್ಗ ಕಟ್ಟಿ ಎಸ್ಕೇಪ್ ಆದ ಮೂವರು ಮಹಿಳೆಯರು. ನೆಲ ಮಹಡಿಯಲ್ಲಿ ಕಾಂಪೌಂಡ್ ಹಾರಿ ತಪ್ಪಿಸಿಕೊಂಡ ವಿದೇಶಿಗಳು ಪ್ರಜೆಗಳು. ವೀಸಾ ಮತ್ತು ಪಾಸ್ ಪೋರ್ಟ್ ಅವಧಿ ಮುಗಿದಿತ್ತು. ಆದ್ರೂ  ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದರು. NGO ಸಿಬ್ಬಂದಿಯಿಂದ ಕೊತ್ತನೂರು ಪೊಲೀಸ್ ಠಾಣೆಗೆ ದೂರು. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿFIR ದಾಖಲಿಸಿ ಹುಡುಕಾಟ ಮುಂದುವರಿಸಲಾಗಿದೆ. 

10:32 AM

11 ಜಿಲ್ಲೆಗಳಲ್ಲಿ ಮಳೆಯಾರ್ಭಟ: 6 ಬಲಿ

ಕಲ್ಯಾಣ ಕರ್ನಾಟಕದ ಬಹುಭಾಗ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರ ಒಟ್ಟು ಆರು ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನವೂ ತೀವ್ರ ಅಸ್ತವ್ಯಸ್ತಗೊಂಡಿದ್ದು ಕಲಬುರಗಿ ನಗರವೊಂದರಲ್ಲೇ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡುವಂತಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ ನಗರದಲ್ಲಿ ಉತ್ತಮ ಮಳೆ ಸುರಿದಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:31 AM

ಸಸ್ಯಕಾಶಿಯಲ್ಲಿ ಇಂದಿನಿಂದ 212ನೇ  ಫಲಪುಷ್ಪ ಪ್ರದರ್ಶನ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ಫಲ ಪುಷ್ಪ ಪ್ರದರ್ಶನ ನಡೆಯಲಿದೆ. ಸಸ್ಯಕಾಶಿಯಲ್ಲಿ ತಲೆಯೆತ್ತಲಿದೆ ಹೂಗಳ ಸುಂದರ ಲೋಕ. ಈ ಬಾರಿ ಡಾ ಪುನೀತ್ ರಾಜ್ಕುಮಾರ್ ಹಾಗೂ ಮುತ್ತುರಾಜ್‌ಗೆ ಪುಷ್ಪ ನಮನ. ಕಬ್ಬನ್ ಪಾರ್ಕ್ ಹಾಗೂ ಊಟಿ ಸಸ್ಯತೋಟ ಸೇರಿ ದೇಶ- ವಿದೇಶದಿಂದ ಬಂದ ಅಲಂಕಾರಿಕ ಹೂಗಳು.  
15 ಲಕ್ಷಕ್ಕೂ ಹೆಚ್ಚು ಜನ ಫ್ಲವರ್ ಶೋಗೆ ಆಗಮನ. ಈ ಪ್ರದರ್ಶನದಲ್ಲಿ ರಾಜ್ ಕುಟುಂಬದ ಸದಸ್ಯರು ಹಾಗೂ ಶಕ್ತಿಧಾಮದ ಮಕ್ಕಳೂ ಸಹ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ.  ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ ಸಿಎಂ. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ, ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಶಾಸಕ ಉದಯ್ ಬಿ. ಗರುಡಾಚಾರ್, ಡಾ. ಶಿವರಾಜ್‍ಕುಮಾರ್, ಡಾ. ರಾಘವೇಂದ್ರ ರಾಜ್‍ಕುಮಾರ್,  ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಲಿದ್ದಾರೆ. 

3:18 PM IST:

ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಇಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಈ ಆದೇಶ ಹೊರಡಿಸಿದ್ದಾರೆ. ರಾಜಕುಮಾರ್ ‌ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಅಧಿಕಾರಿಗೆ ಸಂಕಷ್ಟ ಎದುರಾಗಿದೆ.

2:51 PM IST:

ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಿ ಭಾರತ ಉಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ನೀಡಿದ ಪ್ರಮೋದ್ ಮುತಾಲಿಕ್. ಬೆಂಗಳೂರು ಜಿಲ್ಲಾಧಿಕಾರಿಗಳ ಮೂಲಕ‌ ಸಿಎಂಗೆ ಮನವಿ. 2047 ಕ್ಕೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವ ಉದ್ದೇಶ ಎಸ್ಡಿಪಿಐ, ಪಿಎಫ್ಐಗಳಿಗೆ ಇದೆ. ದೇಶ ದ್ರೋಹಕ್ಕಾಗಿಯೇ ಪಿಎಫ್ಐ ಸಂಘಟಿಸಲಾಗಿದೆ. ಬಿಹಾರದಲ್ಲಿ ಪಿಎಂ ನರೇಂದ್ರ ಮೋದಿ ಹತ್ಯೆ ಸಂಚು ಬಯಲಾಗಿದೆ. ಹೀಗೆ 10 ಕಾರಣಗಳನ್ನು ನೀಡಿ ಎಸ್ಪಿಪಿಐ ಹಾಗೂ ಪಿಎಫ್ಐ ಬ್ಯಾನ್ ಮಾಡಲು ಮನವಿ.

2:27 PM IST:

ತುಮಕೂರು: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ. ಬೆಳಗ್ಗೆ 5 ಗಂಟೆಯಿಂದಲೆ ಅಭಿಷೇಕ ವಿಶೇಷ ಪೂಜೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು. ಕೊರೋನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಬರುವಂತ ಭಕ್ತಾದಿಗಳಿಗೆ ತೀರ್ಥ ಪ್ರಸಾದಕ್ಕೆ ಅವಕಾಶ. ಬೆಂಗಳೂರು ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಆಗಮಿಸುವ ಭಕ್ತರು.  ವೃದ್ದರಿಗೆ ಹಾಗೂ ವಿಶೇಷಚೇತನರಿಗೆ ಪ್ರತ್ಯೇಕ ದರ್ಶನಕ್ಕೆ ವ್ಯವಸ್ಥೆ.

1:40 PM IST:

ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾವೇಶಕ್ಕೆ ಬರುವಾಗ ಮತ್ತು ವಾಪಸ್ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಮೃತರಾದ ಇಬ್ಬರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಮೃತರ ನಿವಾಸಗಳಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ. ಅಗಸ್ಟ್ 7ರಂದು ಪಿರಿಯಾಪಟ್ಟಣದ ಘಸಿ ಉದ್ದೀನ್ ಮನೆಗೆ ಭೇಟಿ. ಅಗಸ್ಟ್ 10ರಂದು ಮುಧೋಳದ ಪ್ರಕಾಶ ಬಡಿಗೆರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

1:31 PM IST:

ಚಿಕ್ಕೋಡಿ: ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಒಮಿನಿ‌ ಕಾರು. ಸಂಕೇಶ್ವರ ಪಟ್ಟಣದ ಶಿವಾಜಿ ವೃತ್ತದಲ್ಲಿ ಘಟನೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣ. ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನ. ಮಾರುಕಟ್ಟೆ ಪ್ರದೇಶದಲ್ಲೆ ಬೆಂಕಿ ಅವಘಡ ಹಿನ್ನೆಲೆಯಲ್ಲಿ ಶಿವಾಜಿ ವೃತ್ತದಲ್ಲಿ ಕೆಲಕಾಲ ಆತಂಕದ ವಾತಾವರಣ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಹೊರಗಡೆಗೆ ಬಂದ ಪ್ರಯಾಣಿಕರು. ಯಾವುದೇ ಪ್ರಾಣ ಹಾನಿ  ಸಂಭವಿಸಿಲ್ಲ. ಬೆಂಕಿ‌ ನಂದಿಸಿದ ಅಗ್ಮಿ ಶಾಮಕ ದಳದ ಸಿಬ್ಬಂದಿ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,

1:15 PM IST:

ಶಾಸಕ ಕೃಷ್ಣ ಬೈರೇಗೌಡ ಹೇಳಿಕೆ, ಬೆಂಗಳೂರು ಗಾರ್ಡನ್ ಸಿಟಿ, ಐಟಿ ಸಿಟಿ ಆಗಿ ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್. ಸ್ಟಾರ್ಟಪ್ ಸಿಟಿ, ಡೈನಾಮಿಕ್ ಸಿಟಿಯಾಗಿದ್ದ ಬೆಂಗಳೂರು ಪಾಟ್‌ ಹೋಲ್ ಸಿಟಿ ಆಗಿದೆ. ಬೆಂಗಳೂರಿಗೆ ಬಿಜೆಪಿ ಅನ್ಯಾಯ ಮಾಡಿರೋದು ರಸ್ತೆ ರಸ್ತೆಯಲ್ಲಿ ಕಾಣ್ತಿದೆ. ಹೆಬ್ಬಾಳ, ಪೀಣ್ಯ ಟ್ರಾಫಿಕ್ ಸಮಸ್ಯೆ ಗೆ ಪರಿಹಾರ ಕೊಡಲಿಲ್ಲ. ಪಾಟ್‌ ಹೋಲ್ ಮುಚ್ಚುವುದರಲ್ಲಿ ದುಡ್ಡು ಮಾಡ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಬೇಕಾಬಿಟ್ಟಿ ವಾರ್ಡ್ ಮಾಡಿ ಮೀಸಲಾತಿ ಮಾಡಿ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿ, ಕಾಂಗ್ರೆಸ್ ‌ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳೆಯರಿಗೆ ಮೀಸಲಾತಿ ನೀಡಿ. ವಾಮ ಮಾರ್ಗದ ಮೂಲಕ ಚುನಾವಣೆ ಎದುರಿಸುವ ಪ್ರಯತ್ನ ಮಾಡ್ತಿದೆ ಬಿಜೆಪಿ. ಇದು ನಾಚಿಕೆಗೇಡಿನ ವಿಚಾರ. ಹೇಡಿತನದಿಂದ ಕಾನೂನು ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೀಸಲಾತಿ ಹೊರಡಿಸಿದ್ದಾರೆ. ಇದನ್ನ ಕಾಂಗ್ರೆಸ್ ‌ಸಂಪೂರ್ಣ ಕಾಂಗ್ರೆಸ್ ವಿರೋಧಿಸುತ್ತದೆ. ಆದರೆ ಜನ ಇವರ ಎಲ್ಲಾ ಆಟಗಳನ್ನ ನೋಡ್ತಿದ್ದಾರೆ. ಪಾಟ್ ಹೋಲ್ ಸಮಸ್ಯೆ, ಬೆಲೆ ಏರಿಕೆ ಬಿಸಿ, ಟ್ಯಾಕ್ಸ್ ಹೆಚ್ಚಳ ಈ ಎಲ್ಲಾ ಕಾರಣದಿಂದ ತಕ್ಕ‌ಪಾಠ ಕಲಿಸುತ್ತಾರೆ, ಎಂದಿದ್ದಾರೆ. 

1:06 PM IST:

ಬಿಲ್ಡಿಂಗ್ ಮೇಲಿಂದ ತಾಯಿ ಮಗುವನನ್ನ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ. ನಿನ್ನೆ ಸಂಜೆ ಮಗುವನ್ನ ನಿಮ್ಹಾನ್ಸ್‌ಗೆ ಅಡ್ಮಿಟ್ ಮಾಡಿರ್ತಾರೆ. ಮಹಡಿ ಮೇಲಿಂದ ಮಗು ಬಿದ್ದಿದೆ ಎಂದು ಹೇಳಿದ್ದರು. ಆದರೆ, ನಾವು ಆ ಮಗುವಿನ ಬಗ್ಗೆ ಕೂಲಂಕುಷವಾಗಿ ತೆನಿಖೆ ನಡೆಸಿದಾಗ‌, ಆ ತಾಯಿ ಬೇಕು ಅಂತ  ಮಾಡಿ ಮೇಲಿಂದ ಎಸೆದಿದ್ದಾರೆ ಎಂದು ಗೊತ್ತಾಗುತ್ತೆ. 
ಇಂಜುರಿಯಿಂದ ಆ ಮಗು ನಿನ್ನೆ ತಡ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪಿದೆ. ಆ ಮಗು ಬುದ್ಧಿಮಾಂದ್ಯ ಎಂಬ ಕಾರಣಕ್ಕಾಗಿ ಆ ತಾಯಿ ರೀತಿ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ..
ಆ ತಾಯಿ ಮೇಲೆ ಮರ್ಡರ್‌ ಕೇಸ್ ಹಾಕಿ ಅರೆಸ್ಟ್ ಮಾಡಿದ್ದೆವೆ. ಇನ್ನುಳಿದಂತೆ ಸಮಗ್ರ ತನಿಖೆ ನಡೆಯುತ್ತಿದೆ.

12:48 PM IST:

ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ‌. 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ.. ಕೈಮಗ್ಗ ಮತ್ತು ಜವಳು ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ. ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಮೂರು ದಿನಗಳ ಕಾಲ ನಡೆಯಲಿರುವ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ಪ್ರದರ್ಶನ. ಕಾರ್ಯಕ್ರಮದಲ್ಲಿ ಜವಳಿ ಖಾತೆ ಸಚವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಚಿವ ಮುನಿರತ್ನ, ನಿರಾಣಿ  ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

12:21 PM IST:

ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆ.  ಜನ್ಮಕೊಟ್ಟ ತಾಯಿಯಿಂದಲೇ  ಮಗುವಿನ ಹತ್ಯೆ. ಬುದ್ದಿಮಾಂದ್ಯ ಮಗು ಎಂದು ಹತ್ಯೆ. ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ ಅಮ್ಮ. ಸ್ಥಳದಲ್ಲೇ ಮೃತಪಟ್ಟ ಐದು ವರ್ಷದ ಕಂದಮ್ಮ. ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಿಸಿಟಿಯಲ್ಲಿ ಸೆರೆಯಾಯ್ತು ಭಯನಕ ದೃಶ್ಯ. ಸಮಯ ಪ್ರಜ್ಞೆಯಿಂದ ತಾಯಿಯನ್ನು ರಕ್ಷಿಸಿದ ಸ್ಥಳೀಯರು. ದಂತ ವೈದ್ಯಯಾಗಿ ಪ್ರಾಕ್ಟಿಸ್ ಮಾಡುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಮೃತ ಮಗುವಿನ ತಂದೆ. ಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ. ತಾಯಿ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12:13 PM IST:

ಹವಾಮಾನ ಇಲಾಖೆಯಿಂದ  ಮಾಹಿತಿ. ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಸಾಧ್ಯತೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್,. ನಾಳೆ ರೆಡ್ ಅಲರ್ಟ್. 6ನೇ ತಾರೀಖು ಆರೆಂಜ್ ಅಲರ್ಟ್. ಕೊನೆಯ ಎರಡು ದಿನ ಯಲ್ಲೋ ಅಲರ್ಟ್. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.

10:38 AM IST:

ಪೊಲೀಸ್ ಹಾಗೂ ಎಫ್‌ಆರ್‌ಆರ್‌ಒ ಕಸ್ಟಡಿಯಲ್ಲಿದ್ದರು ಆರೋಪಿಗಳು. ಬಾಂಗ್ಲಾದೇಶ ‌7 , ಉಗಾಂಡ 3 ಪ್ರಜೆಗಳು ಪರಾರಿಯಾಗಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ವಿದೇಶಿ ಪ್ರಜೆಗಳನ್ನ ಗಡಿಪಾರಿಗೆ ತಯಾರಿ ನಡೆಸಿದ್ದ ಅಧಿಕಾರಿಗಳು. FRRO ಮತ್ತು ಬೆಂಗಳೂರು ಪೊಲೀಸರು ದಾಖಲೆ ಪರಿಶೀಲನೆ ನಡೆಸಿ ಗಡಿಪಾರು ಮಾಡಲು ಮುಂದಾಗಿದ್ದರು. ಕೊತ್ತನೂರು ಬಳಿಯ ದೊಡ್ಡಗುಬ್ಬಿಯ NGO  ಕೇಂದ್ರದಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರಾತ್ರೋರಾತ್ರಿ ಕಬ್ಬಿಣದ ಗ್ರೀಲ್ಸ್‌ಗೆ ಹಗ್ಗ ಕಟ್ಟಿ ಕೆಳಗೆ ಇಳಿದು ಪರಾರಿ. ಎರಡನೇ ಮಹಡಿಯಯಿಂದ ಹಗ್ಗ ಕಟ್ಟಿ ಎಸ್ಕೇಪ್ ಆದ ಮೂವರು ಮಹಿಳೆಯರು. ನೆಲ ಮಹಡಿಯಲ್ಲಿ ಕಾಂಪೌಂಡ್ ಹಾರಿ ತಪ್ಪಿಸಿಕೊಂಡ ವಿದೇಶಿಗಳು ಪ್ರಜೆಗಳು. ವೀಸಾ ಮತ್ತು ಪಾಸ್ ಪೋರ್ಟ್ ಅವಧಿ ಮುಗಿದಿತ್ತು. ಆದ್ರೂ  ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದರು. NGO ಸಿಬ್ಬಂದಿಯಿಂದ ಕೊತ್ತನೂರು ಪೊಲೀಸ್ ಠಾಣೆಗೆ ದೂರು. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿFIR ದಾಖಲಿಸಿ ಹುಡುಕಾಟ ಮುಂದುವರಿಸಲಾಗಿದೆ. 

10:32 AM IST:

ಕಲ್ಯಾಣ ಕರ್ನಾಟಕದ ಬಹುಭಾಗ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರ ಒಟ್ಟು ಆರು ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನವೂ ತೀವ್ರ ಅಸ್ತವ್ಯಸ್ತಗೊಂಡಿದ್ದು ಕಲಬುರಗಿ ನಗರವೊಂದರಲ್ಲೇ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡುವಂತಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ ನಗರದಲ್ಲಿ ಉತ್ತಮ ಮಳೆ ಸುರಿದಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:31 AM IST: