Karnataka News Live updates: ಶಿರಾ ಅಪಘಾತ ಸೇರಿ ಆಗಸ್ಟ್ 25ರ ಸುದ್ದಿಗಳು ಹೈಲೈಟ್ಸ್
Aug 25, 2022, 6:44 PM IST
ಬೆಳ್ಳಂ ಬೆಳಗ್ಗೆ ತುಮಕೂರಿನ ಶಿರಾ ಬಳಿ ಸಂಭವಿಸಿದ ಭೀಕರ ಅಪಘಾಕದಲ್ಲಿ 10 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಕರ್ನಾಟಕ ಸರಕಾರಕ್ಕೂ ಮುನ್ನವೇ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ. ಆಗಸ್ಟ್ 25, 2022ರ ಸುದ್ದಿಯ ಝಲಕ್ ಇಲ್ಲಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್. ವಿಜಯಪುರ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಅಂಟಿಸಿದ ಹಿನ್ನೆಲೆಯಲ್ಲಿ ಪೋಟೋ ಅಂಟಿಸಿದ ಬಿಜೆಪಿ ಕಾರ್ಯಕರ್ತನ ಮೇಲೆ FIR ಹಾಕಿದ ಬಗ್ಗೆ ಸಮಾಲೋಚನೆ. FIR ರದ್ದು ಪಡಿಸುವ ಸಂಬಂಧ ಗೃಹ ಸಚಿವರ ಜೊತೆಗೆ ಚರ್ಚಿಸಿದ್ದಾರೆ ಯತ್ನಾಳ್.
ಕನ್ನಡದ ಖ್ಯಾತ ನಿರ್ದೇಶಕನ ಹೆಸರಲ್ಲಿ ಮಲಯಾಳಂ ನಟಿಗೆ ವಂಚನೆ ಯತ್ನ! ಕನ್ನಡ ನಿರ್ದೇಶಕನ ಹೆಸರಲ್ಲಿ ಕರೆ ಮಾಡಿ ಸಿನಿಮಾದ ಆಫರ್. 777 ಚಾರ್ಲಿ ಚಿತ್ರದ ನಿರ್ದೇಶಕನ ಹೆಸರಲ್ಲಿ ಮಲಯಾಳಂ ಖ್ಯಾತ ನಟಿಗೆ ವಂಚನೆ ಯತ್ನ. 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್ ಹೆಸರಲ್ಲಿ ಸಿನಿಮಾ ಆಫರ್. ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಾಲಾ ಪಾರ್ವತಿಗೆ ಆಫರ್. 8848185488 ನಂಬರ್ ನಿಂದ ಕಿರಣ್ ರಾಜ್ ಹೆಸರಲ್ಲಿ ನಟಿಗೆ ಕರೆ. ಅಗಸ್ಟ್ 20 ಕ್ಕೆ ಕರೆ ಮಾಡಿ 18 ದಿನಗಳ ಕಾಲ್ ಶೀಟ್ ಕೇಳಿದ ಅಪರಿಚಿತ. ಈ ಬಗ್ಗೆ ಅನುಮಾನ ಬಂದು ಚಾರ್ಲಿ ಚಿತ್ರ ಸೌಂಡ್ ಡಿಸೈನರ್, ಪರಿಚಿತ ರಾಜಾಕೃಷ್ಣನ್ ಸಂಪರ್ಕಿಸಿದ ಮಾಲಾ ಪಾರ್ವತಿ.
ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ನೀಡುವಂತೆ ಹಿಂದೂ ಕಾರ್ಯಕರ್ತರಿಗೂ ಮೀಸಲಿಡಬೇಕು. ಹಿಂದೂಗಳಿಗೆ ಟಿಕೆಟ್ ಕೊಡ್ಬೇಕು. ಹಿಂದೂ ಕಾರ್ಯಕರ್ತರು ಗೆದ್ದು ಬಂದ ಬಳಿಕ ವಿಧಾನಸೌಧದಲ್ಲಿ ಹಿಂದುತ್ವದ ಪರ ನಿಲ್ಲುತ್ತಾರೆ. ಆಜಾನ್, ಗೋಹತ್ಯೆ ವಿಚಾರದಲ್ಲೂ ಸರ್ಕಾರಕ್ಕೆ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಅಸಹಾಯಕ ಸಂದರ್ಭದಲ್ಲಿ ಹಿಂದೂಗಳು ಹಿಂದೂ ಪರ ಧ್ವನಿ ಎತ್ತುತ್ತಾರೆ. ಹೀಗಾಗಿ ಹಿಂದೂಪರ ಹೋರಾಟಗಾರರಿಗೆ ಟಿಕೆಟ್ ಸಿಗ್ಬೇಕು. ಸ್ವಾಮೀಜಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆವೆಂದ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.
ಮದರಸಾಗಳ ಮೇಲೆ ಶಿಕ್ಷಣ ಇಲಾಖೆ ಕಣ್ಣು ಇಟ್ಟಿದ್ದು ಸರಿ ಇದೆ. ಮದರಸಾ ಭಯೋತ್ಪಾದಕರ ಕೃತ್ಯ ಮಾಡತ್ತೆ ಎಂದು ನಾಲ್ಕು ವರ್ಷಗಳ ಹಿಂದೆ ಹೇಳಿದ್ದೆ. ಅದು ಹುಬ್ಬಳ್ಳಿಯಲ್ಲಿ ಸಾಬೀತು ಆಯಿತು. ಹಿಂದೂಗಳ ದೇವಸ್ಥಾನ ದಲ್ಲಿ ತೀರ್ಥ ನೀಡ್ತಾರೆ. ಅದೇ ಮದರಸಗಳಲ್ಲಿ ಭಯೋತ್ಪಾದನೆ ಹೇಳಿಕೊಡುತ್ತಾರೆ, ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
ಧಾರವಾಡಛ ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿ. ಸ್ಥಳದಲ್ಲೇ ಬಸ್ ಕ್ಲೀನರ್ ಸಾವು. ಓರ್ವನ ಸ್ಥಿತಿ ಗಂಭೀರ. ಧಾರವಾಡ ಹೊರವಲಯದಲ್ಲಿ ಘಟನೆ. ಹಳಿಯಾಳ ಬೈಪಾಸ್ ರಸ್ತೆಯಲ್ಲಿ ನಡೆದ ಘಟನೆ. ರಾ. ಹೆ. 4 ರಲ್ಲಿ ಘಟನೆ
ಲಾರಿಯಲ್ಲಿಯೇ ಸಿಲುಕಿರೋ ಚಾಲಕ. ಚಾಲಕನನ್ನು ಹೊರ ತೆಗೆಯಲು ಪೊಲೀಸರ ಹರಸಾಹಸ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ. ಗಾಯಾಳುಗಳು ಜಿಲ್ಲಾಸ್ಪತ್ರೆಗೆ ರವಾನೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಚಿಕ್ಕಮಗಳೂರು: ದತ್ತಪೀಠದ ಮಾರ್ಗದ ಕವಿಕಲ್ ಗಂಡಿ ಎಂಬ ಸ್ಥಳದಲ್ಲಿ 21 ಅಡಿ ಏಕಶಿಲಾ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮೂರ್ತಿ ನಿರ್ಮಾಣಕ್ಕೆ ಚಿಕ್ಕಮಗಳೂರು ನಗರಕ್ಕೆ ಬಂದಿರೋ ಕೃಷ್ಣಶಿಲೆ ಕಲ್ಲುಗಳು. ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಬಂದಿರೋ ಕಲ್ಲುಗಳು. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲೇ ಎತ್ತರದಲ್ಲಿ ಕಾಣುವ ಮೂರ್ತಿ. ಕವಿಕಲ್ ಗಂಡಿಯಲ್ಲಿ ಆಂಜನೇಯನ ಮೂರ್ತಿ ಇರುವ ಜಾಗದಲ್ಲೇ ಪ್ರತಿಷ್ಠಾಪನೆ . ದತ್ತಜಯಂತಿ ವೇಳೆಗೆ ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ. ಇದೇ ಡಿಸೆಂಬರ್ ನಲ್ಲಿ 3 ದಿನ ನಡೆಯಲಿರುವ ದತ್ತ ಜಯಂತಿ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್ ಗಂಡಿ.
ಕರ್ನಾಟಕದ ಹಲವೆಡೆ ಅಪಘಾತಗಳಾದ ವರದಿಗಳಾಗಿದ್ದು, ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಡಿಕ್ಕಿಯಾದ ಪರಿಣಾಮ ಸಂಭವಿಸಿದ ಈ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗು ಸಾಧ್ಯತೆ ಇದೆ. ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಹೋದ ಕ್ರೂಸರ್ ನಿಯಂತ್ರಣ ತಪ್ಪಿ ಡಿವೈಡರ್ ಹೊಡೆಯುವ ಸಾಧ್ಯತೆ ಇತ್ತು. ಆಗ ಕ್ರೂಸರ್ ಡ್ರೈವರ್ ಗಾಡಿಯ ವೇಗವನ್ನು ನಿಧಾನಗೊಳಿಸಲು ಬ್ರೇಕ್ ಹಾಕಿದ್ದಾನೆ. ಆದರೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದು, ಈ ಅಪಘಾತ ಸಂಭವಿಸಿದೆ. ಧಾರವಾಡ ಮತ್ತು ಚಿತ್ರದುರ್ಗದಲ್ಲಿಯೂ ಅಪಘಾತ ಸಂಭವಿಸಿದೆ. ರಾಜ್ಯದ ಇವತ್ತಿನ ರಾಜಕೀಯ, ಅಪರಾಧ ಮತ್ತು ಇತರೆ ಸುದ್ದಿಗಳ ಲೈವ್ ಅಪ್‌ಡೇಟ್ಸ್‌ಗೆ ಸುವರ್ಣನ್ಯೂಸ್.ಕಾಮ್ ಲೈವ್ ಬ್ಲಾಗ್‌ಗೆ ಲಾಗಿನ್ ಆಗಿರಿ.
6:38 PM
ಶಿರಾ ಅಪಘಾತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕೂಲಿ ಕಾರ್ಮಿಕರು ತುಮಕೂರು ಜಿಲ್ಲೆಯ ಶಿರಾ ಬಳಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. ಇದುವೆರೆಗೆ 10 ಮಂದಿ ಕೊನೆಯುಸಿರೆಳೆದಿದ್ದು, ಹಲವರು ಬೆಂಗಳೂರಿನ ನಿಮ್ಹಾನ್ಸ್ ಮತ್ತು ತುಮಕೂರು ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.
6:09 PM
ನನ್ನನ್ನು ಯಾರಾದರೂ ಹೊಗಳಿದರೆ ಹೆದರಿಕೆ: ಸಿಎಂ ಬೊಮ್ಮಾಯಿ
ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಶಾಸಕ ಅರುಣಕುಮಾರ ಪೂಜಾರ ಹುಟ್ಟುಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿಕೆ. ನಾನು ಯಾರಾದರೂ ಹೊಗಳಿದರೆ ಹೆದರುತ್ತೇನೆ. ತೆಗಳಿದರೆ, ಟೀಕೆ ಮಾಡಿದರೆ ನನ್ನ ಕೆಲಸದ ಮೂಲಕ ಉತ್ತರ ಕೊಡುತ್ತೇನೆ. ರಾಣೆಬೆನ್ನೂರು ನನ್ನ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಆತ್ಮೀಯತೆ ತುಂಬಿದ ಕ್ಷೇತ್ರ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನ ನನ್ನ ತಂದೆ ತಾಯಿ ಇದ್ದಂತೆ. ಸಿಎಂ ಆದ್ಮೇಲೆ ನಾನು ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೂ ಹೋದಾಗಲೆಲ್ಲ ಪ್ರೀತಿ, ವಿಶ್ವಾಸ ಕೊಟ್ಟಿದ್ದಾರೆ. ಅದೆ ರೀತಿ ರಾಣೆಬೆನ್ನೂರು ಜನ ಸಹ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಬಹಳ ತುರುಸಿನ ರಾಜಕಾರಣ ರಾಣೆಬೆನ್ನೂರು ಕ್ಷೇತ್ರದಲ್ಲಿದೆ. ಯಾಕಂದರೆ ಇದು ಬಹಳ ದೊಡ್ಡವರ ಕ್ಷೇತ್ರ. ಆದರೆ ಈಗ ಕಾಲ ಬದಲಾಗಿದೆ. ಮೊದಲಿನಂತೆ ಇಲ್ಲ, ಯುವಕರು ಬದಲಾವಣೆ ನೋಡಿದ್ದಾರೆ. ಅರುಣಕುಮಾರ ಉಡದ ರೀತಿ ಗಟ್ಟಿಯಾಗಿ ಹಿಡಿದುಕೊಂಡು ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ. ಈತ ನಿಮ್ಮ ಕೈ ಬಿಡಲ್ಲ, ಇವನ ಮೇಲೆ ನಂಬಿಕೆ ಇದೆ. ನೀವು ಇವನನ್ನು ಕೈ ಬಿಡಬೇಡಿ. ಸಾಮಾಜಿಕ ನ್ಯಾಯ ಅಂದರು, ಆದರೆ ಯಾರಿಗೆ ಕೊಟ್ಟರು? ರೈತರಿಗೆ ಕೊಟ್ಟರಾ? ಮಹಿಳೆಯರಿಗೆ ಕೆಲಸ ಕೊಟ್ಟರಾ? ಯುವಕರಿಗೆ ಕೊಟ್ಟರಾ? ನಿಜವಾಗಿ ಸಾಮಾಜಿಕ ನ್ಯಾಯ ಕೊಡುತ್ತಿರುವುದು ಮೋದಿ ಸರಕಾರ. ನಾವು ಮಾಡಿದ ಕಾರ್ಯಕ್ರಮ, ನೀವು ಮಾಡಿದ ಕಾರ್ಯಕ್ರಮ ಜನರ ಮುಂದಿಡೋಣ. ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರತಿಪಕ್ಷಗಳಿಗೆ ಸವಾಲು. ನಿಮ್ಮ ವಿಶ್ವಾಸಕ್ಕೆ ಯಾವ ಕಾರಣಕ್ಕೂ ಚ್ಯುತಿ ಬಾರದಂತೆ ನೋಡಿಕೊಳ್ಳುವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಎಂದ ಬೊಮ್ಮಾಯಿ.
6:07 PM
ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಶಾಲಾ ವಾಹನದ ಮಧ್ಯೆ ಡಿಕ್ಕಿ, ತಪ್ಪಿದ ಅನಾಹುತ
ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಶಾಲಾ ವಾಹನದ ಮಧ್ಯೆ ಡಿಕ್ಕಿ, ತಪ್ಪಿದ ಅನಾಹುತ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಘಟನೆ. ನಗರದ ಬಸವೇಶ್ವರ ವೃತ್ತದ ಬಳಿ ನಡೆದ ಅಪಘಾತ. ಶಾಲೆ ಮುಗಿಸಿ ಮಕ್ಕಳನ್ನ ಕರೆ ತರುವ ವೇಳೆ ನಡೆದ ಅಪಘಾತ. ವಾಹನದ ಮುಂಭಾಗದ ಗಾಜು ಪುಡಿಪುಡಿ. ಅವಘಡದಿಂದ ಪಾರಾದ ಪ್ರಯಾಣಿಕರು ಮತ್ತು ಮಕ್ಕಳು. ಮಕ್ಕಳನ್ನ ಬಿಡಲು ಬೇರೆ ವಾಹನದ ಮೂಲಕ ವ್ಯವಸ್ಥೆ. ಹೊಸಪೇಟೆಯಿಂದ ತಾಳಿಕೋಟಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್. ಘಟನಾ ಸ್ಥಳಕ್ಕೆ ಇಲಕಲ್ ನಗರ ಪೋಲಿಸರ ಭೇಟಿ, ಪರಿಶೀಲನೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಡೆದ ಅಪಘಾತ.
5:25 PM
ಭಾನುಮತಿಯ ಹನಿ ಟ್ರ್ಯಾಪಿನಲ್ಲಿ ಹಾವೇರಿ ಟಾಸ್ಕರ್!
ಚಿಕ್ಕಮಗಳೂರು: ಮಲೆನಾಡಲ್ಲಿ ಮೋಹಿನಿ ಬಲೆಗೆ ಬಿದ್ದ ಮದಗಜ. ಭಾನುಮತಿಯ ಹನಿ ಟ್ರ್ಯಾಪಿನಲ್ಲಿ ಹಾವೇರಿ ಟಾಸ್ಕರ್ . ಹನಿಟ್ರ್ಯಾಪ್ ನಿಂದ ಹಾವೇರಿ ಟಸ್ಕರ್ ಖೆಡ್ಡಾಕೆ ಬೀಳಿಸಿದ ಅರಣ್ಯಾಧಿಕಾರಿಗಳು. ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ಸೆರೆ. ಐದು ಸಾಕಾನೆಯಿಂದ ಒಂದು ಒಂಟಿ ಸಲಗಕ್ಕಾಗಿ ಕಾರ್ಯಚರಣೆ. 40ಕ್ಕೂ ಹೆಚ್ಚು ಸಿಬ್ಬಂದಿ 6 ದಿನದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಹಗಲಲ್ಲಿ ದಾಂದಲೆ ನಡೆಸಿ ಸಂಜೆ ಪ್ರಪಾತದ ಸ್ಥಳಕ್ಕೆ ಹೋಗುತ್ತಿದ್ದ ಸಲಗ. ಇಂದು ಮೋಹಿನಿಯ ಪ್ರೇಮಪಾಶಕ್ಕೆ ಸಿಲುಕಿ ಒಂಟಿ ಸಲಗ ಸೆರೆ. ಸಲಗನ ಸೆರೆಯಿಂದ ನಿಟ್ಟುಸಿರಿ ಬಿಟ್ಟ ಮಲೆನಾಡಿಗರು.ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದ ಕಾರ್ಯಾಚರಣೆ.
5:15 PM
ಯಾರಿಗಿದೆ ಮಾನ..ಮೊಕದ್ದಮೆ ಹಾಕಲು: ಮುನಿರತ್ನಗೆ ಎಚ್ಡಿಕೆ ಟಾಂಗ್
ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರ. ಯಾರಿಗಿದೆ ಮಾನ..ಮೊಕದ್ದಮೆ ಹಾಕುವುದಕ್ಕೆ? ಶಾಸಕರಾಗುವುದಕ್ಕೂ ಮೊದಲು ಇವರೇ ಗುತ್ತಿಗೆದಾರರು ಆಗಿದ್ರು . ಆ ಸಂದರ್ಭದಲ್ಲಿ ಒಂದು ಮಗು ಸತ್ತು ಹೋಯಿತು. ಆ ಕೆಲಸ ಮಾಡಿದ್ದು ಇವರೆ ಅಲ್ಲವೇ? ನರೇಂದ್ರ ಮೋದಿ ಇಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್, ಬಿಜೆಪಿ ಯಾರು ಹೊರತಲ್ಲ. ಎಚ್ ಡಿ ಕುಮಾರಸ್ವಾಮಿ ಹೇಳಿಕೆ
4:58 PM
ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನ
ಆನೇಕಲ್: ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನ. ಜಿಗಣಿ ಪೊಲೀಸ್ ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ. ಚಿಕ್ಕಮಗಳೂರು ಮೂಲದ ರತೀಶ್ ಆತ್ಮಹತ್ಯೆಗೆ ಯತ್ನಿಸಿದವ. ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸ್ ಸಿಬ್ಬಂದಿ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ. ಹತ್ತು ವರ್ಷದ ಹಿಂದೆ ಕೊಳ್ಳೆಗಾಲ ಮೂಲದ ಕವಿತಾ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಬನ್ನೇರುಘಟ್ಟದಲ್ಲಿ ಮಡದಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಇತ್ತೀಚೆಗೆ ಸಂಸಾರದಲ್ಲಿ ವಿರಹ ಮೂಡಿತ್ತು. ಗಂಡನ ವಿರುದ್ಧ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆ ಬಳಿ ಆಗಮಿಸಿದ್ದಳು. ಈ ವೇಳೆ ಠಾಣೆ ಬಳಿ ಹೆಂಡತಿ ಜೊತೆ ವಾಗ್ವಾದ. ಪೊಲೀಸ್ ಠಾಣೆಗೆ ದೂರು ನೀಡದಂತೆ ಪತ್ನಿಗೆ ಒತ್ತಾಯ. ಒಪ್ಪದಿದ್ದಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
4:46 PM
ಶಿರಾ ಅಪಘಾತ: ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಸಾವು- ಮೃತರ ಸಂಖ್ಯೆ 10 ಕ್ಕೆ ಏರಿಕೆ
ತುಮಕೂರಿನ ಶಿರಾ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಈ ಮಧ್ಯೆ ಮೃತಪಟ್ಟ 9 ಮಂದಿ ಪೈಕಿ 6 ಮಂದಿ ನೇತ್ರದಾನ ಮಾಡಿದ್ದಾರೆ.
4:32 PM
ಈದ್ಗಾ ಮೈದಾನಕ್ಕೆ ಸಂಬಂಧಿಸಿದ ಹೈ ಕೋರ್ಟ್ ತೀರ್ಪು ಪಾಲಿಸಬೇಕು: ಎಚ್ಡಿಕೆ
ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಉಚ್ಚ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಬೆಂಗಳೂರಿನ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರ ಕ್ಕೆ ಆಗಾಗ ಇಂತಹ ಘಟನೆಗಳು ಆಗುವ ಮೂಲಕ ಅವರ ಹುಳುಕುಗಳನ್ನು ಮುಚ್ಚಿ ಕೊಳ್ಳಲು ಅನುಕೂಲ. ಇಂತ ವಿಚಾರಗಳನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು. 40 ಪರ್ಸೆಂಟ್ ಕಮೀಷನ್ ಬಗ್ಗೆ ನೆನ್ನೆ ಕೆಲವು ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ರೆ ತನಿಖೆ ನಡೆಸ್ತೀವಿ ಅಂತಾರೆ. ತನಿಖೆಗೆ ಕೊಟ್ರೆ ಸಾಕ್ಷಿ ಕೊಡ್ತೀವಿ ಅಂತಾ ಇವರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ.ನಾನು ಲಾಟರಿ ನಿಷೇಧ ಮಾಡಿದಾಗ , ಇದ್ದ ಕಿಂಗ್ ಪಿನ್, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ರು . ಆದರೂ ಎಲ್ಲ ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಎಷ್ಟು ಕೋಟಿ ಆಫರ್ ಕೊಟ್ಟರು, ಎಲ್ಲರೂ ಇನ್ನೂ ಬದುಕಿದ್ದಾರೆ, ಎಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.
3:44 PM
ಬೆಂಗಳೂರು ಪ್ರೆಸ್ ಕ್ಲಬ್: ಕುಸಿದು ಬಿದ್ದ ಕರ್ತವ್ಯ ನಿರತ ಎಎಸ್ಐ
ಕುಸಿದು ಬಿದ್ದ ಕರ್ತವ್ಯ ನಿರತ ಎಎಸ್ಐ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ. ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿ ಸಂಬಂಧ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕುಸಿದು ಬಿದ್ದ ಎಎಸ್ಐ ಬಿಬಿ ಬೂದಿಹಾಳ್. ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು. ವಿಧಾನಸೌಧ ಠಾಣೆ ಎಎಸ್ಐ ಬಿ.ಬಿ.ಬೂದಿಹಾಳ್.
3:26 PM
ಸರಕಾರದ ಅಕ್ರಮಕ್ಕೆ 10-15 ಪರಪ್ಪನ ಅಗ್ರಹಾರ ಬೇಕು: ಎಚ್ಡಿಕೆ
ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ. ರಾಜ್ಯ ಸರ್ಕಾರದಲ್ಲಿ ಹಗರಣಗಳು ಹೆಚ್ಚಾಗಿ ನಡೆದಿವೆ. ಇವರ ಅಕ್ರಮಗಳಿಗೆ 10-15 ಪರಪ್ಪನ ಅಗ್ರಹಾರಗಳು ಬೇಕಾಗಲಿವೆ. ಈಗಿನ ಕೈಗಾರಿಕಾ ಸಚಿವರ ಬ್ರಹ್ಮಾಂಡ ವಿಷಯಗಳೇ ಇವೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದೇ ಇವರ ಗುರಿ. ಈಗಾಗಲೇ ರಾಜ್ಯದಲ್ಲಿ 40%. ಕಮೀಷನ್ ಇದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳು ಕೇಂದ್ರಕ್ಕೆ ಗೊತ್ತಿಲ್ಲವಾ? ದೆಹಲಿಯಲ್ಲಿ ಸಿಸೋಡಿಯಾ ಅವರನ್ನು ಮಾತ್ರ ಟಾರ್ಗೆಟ್ ಮಾಡಿದ್ದೀರಾ? ಬೌರಿಂಗ್ ಆಸ್ಪತ್ರೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ನೇಮಕಾತಿಯಲ್ಲಿ ಪ್ರತಿಯೊಬ್ಬರು 2 ವರ್ಷದ ಸಂಬಳ ದತ್ತಿನಿಧಿಗೆ ನೀಡಿ ಅಂತಿದ್ದಾರೆ. ಅಷ್ಟೊಂದು ದಾರಿದ್ರ್ಯ ಬಂದಿದೆಯಾ ರಾಜ್ಯದಲ್ಲಿ? ದಕ್ಷಿಣ ಭಾರತದಲ್ಲಿ ಬಿಜೆಪಿಗೆ ತೆರೆದ ಬಾಗಿಲು, ಇಲ್ಲಿಂದಲೇ ಮುಚ್ಚುವ ಕಾಲ ಸನ್ನಿಹಿತದಲ್ಲಿದೆ, ಎಂದ ಮಾಜಿ ಸಿಎಂ.
3:14 PM
ಪಂಚಮಸಾಲಿ ಸಮೂದಾಯಕ್ಕೆ 2ಎ ಮೀಸಲಾತಿ: ಹೋರಾಟ ಮುಂದುವರಿಸಲ ನಿರ್ಧಾರ
ಪಂಚಮಸಾಲಿ ಸಮೂದಾಯಕ್ಕೆ ೨ ಎ ಮೀಸಲಾತಿ ನೀಡುವ ವಿಚಾರ. ಕಾನೂನು ಹೋರಾಟ ಮುಂದುವರಿಸಲು ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿರ್ಧಾರ. ಸಚಿವರಾದ ಮುರುಗೇಶ್ ನಿರಾಣಿ ನಿವಾಸದಲ್ಲಿ ಪಂಚಮಸಾಲಿ ಸಮುದಾಯದ ನಾಯಕರ ಸಭೆ. ಸಾರ್ವಜನಿಕ ಹೋರಾಟದ ಜೊತೆಗೆ ಕಾನೂನು ಹೋರಾಟ ನಡೆಸಲು ತಿರ್ಮಾನ. ಹೋರಾಟಕ್ಕೆ ಬೆಂಬಲ ನೀಡುವಂತೆ ಸಂಘದ ಪ್ರಮುಖರಿಂದ ಸಚಿವ ಮುರುಗೇಶ್ ನಿರಾಣಿಗೆ ಮನವಿ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಗಳನ್ನು ಸೇರ್ಪಡೆ ಮಾಡಬೇಕು. ರಾಜ್ಯದಲ್ಲಿ 2ಎ ಮೀಸಲಾತಿ ಯನ್ನು ನೀಡಬೇಕೆಂದು ಆಗ್ರಹ. ಈ ಸಂಬಂಧ ಹೋರಾಟಕ್ಕೆ ಸಹಕಾರ ನೀಡುವಂತೆ ಸಚಿವ ನಿರಾಣಿಗೆ ಮನವಿ ನೀಡಿದ ಪಂಚಮಸಾಲಿ ಸಮಾಜದ ಪ್ರಮುಖರು. ಸಭೆಯ ಬಳಿಕ ಪಂಚಮಸಾಲಿ ಸಂಘದ ಅಧ್ಯಕ್ಷ ಜಿ.ಪಿ.ಪಾಟೀಲ್ ಹೇಳಿಕೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ನೀಡಬೇಕು. ಈ ಬಗ್ಗೆ ಮಾಜಿ ಯಡಿಯೂರಪ್ಪ ಗಮನಕ್ಕೆ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇವತ್ತು ರಾತ್ರಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಮೀಸಲಾತಿ ಸಿಗುವವರೆಗೂಗೆ ಹೋರಾಟ ಮುಂದುವರೆಯುತ್ತದೆ. ಕಾನೂನು ಹೋರಾಟ ಕೂಡ ಮುಂದುವರೆಯುತ್ತದೆ. ನಮಗೆ ಸಚಿವ ನಿರಾಣಿ ಎಲ್ಲ ಸಹಕಾರ ಕೊಡುತ್ತಿದ್ದಾರೆ....
3:06 PM
ರಾಜಾ ಕೃಷ್ಣನ್ ಮೂಲಕ ಕಿರಣ್ ರಾಜ್ ಸಂಪರ್ಕಿಸಿದ ಮಾಲಾ ಪಾರ್ವತಿ
ರಾಜಾ ಕೃಷ್ಣನ್ ಮೂಲಕ ಕಿರಣ್ ರಾಜ್ ಸಂಪರ್ಕಿಸಿದ ಮಾಲಾ ಪಾರ್ವತಿ. ಈ ವೇಳೆ ಅಪರಿಚಿತ ವ್ಯಕ್ತಿಯಿಂದ ವಂಚನೆ ಬಯಲು. ಈ ಬಗ್ಗೆ ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡ ನಟಿ ಮಾಲಾ ಪಾರ್ವತಿ. ಸದ್ಯ ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು. ಕಿರಣ್ ರಾಜ್ ಹೆಸರಲ್ಲಿ ಹಲವರಿಗೆ ಕರೆ ಮಾಡಿ ಆಫರ್ ಕೊಟ್ಟಿರುವ ವಂಚಕ. ನಟಿಯರನ್ನೇ ಟಾರ್ಗೆಟ್ ಮಾಡಿ ಸಂಪರ್ಕಿಸಿರೋ ವಂಚಕ. ಈ ಬಗ್ಗೆ ತನ್ನ ಫೇಸ್ ಬುಕ್ ನಲ್ಲಿ ನಿರ್ದೇಶಕ ಕಿರಣ್ ರಾಜ್ ಅಲರ್ಟ್. ಯಾವುದೇ ಹೊಸ ಸಿನಿಮಾ ಪ್ರಾಜೆಕ್ಟ್ ಆರಂಭಿಸಿಲ್ಲ ಅಂತ ಅಲರ್ಟ್. ಮಂಗಳೂರು ಗಡಿ ಭಾಗದ ಕಾಸರಗೋಡು ಮೂಲದ ನಿರ್ದೇಶಕ ಕಿರಣ್ ರಾಜ್. ಮಲಯಾಳಂ ಕಲಾವಿದರನ್ನೇ ಸಂಪರ್ಕಿಸಿ ಕಿರಣ್ ರಾಜ್ ಹೆಸರಲ್ಲಿ ಟಾರ್ಗೆಟ್. ಮಲಯಾಳಂನಲ್ಲೂ ಮೆಗಾ ಹಿಟ್ ಆಗಿದ್ದ ಕನ್ನಡದ ಚಾರ್ಲಿ 777 ಚಿತ್ರ.
2:49 PM
ಯಾಕೆ ಪಿಎಫ್‌ಐ ಬ್ಯಾನ್ ಮಾಡಿಲ್ಲ, ಎಸ್ ಡಿಪಿಐ ಬ್ಯಾನ್ ಮಾಡಿಲ್ಲ?: ಮುತಾಲಿಕ್
ನಾವು ಕುಡುಕ ಗಂಡನ್ನ (BJP) ಮದುವೆ ಆಗಿದಿವಿ. ಈಗ ಡಿವೋರ್ಸ್ ಕೊಡೋಕಾಗ್ತಿಲ್ಲ. ಹೀಗಾಗಿ ಬಿಜೆಪಿ 25 ಮಂದಿ ಪ್ರಖರ ಹಿಂದುತ್ವವಾದಿಗಳಿಗೆ ಟಿಕೆಟ್ ಕೊಡ್ಬೇಕು.ಯಾಕೆ ಪಿಎಫ್‌ಐ ಬ್ಯಾನ್ ಮಾಡಿಲ್ಲ, ಎಸ್ ಡಿಪಿಐ ಬ್ಯಾನ್ ಮಾಡಿಲ್ಲ? ನೀವು ಅಧಿಕಾರಕ್ಕೆ ಬರೋವಾಗ ಒಂದು ಹೇಳ್ತಿರಿ. ಈಗ ಬೇರೆ ಮಾಡ್ತಿರಾ ? ಇದನ್ನ ತಪ್ಪಿಸಲೇ 25 ಪ್ರಕರ ಹಿಂದೂಗಳಿಗೆ ಟಿಕೆಟ್ ಕೊಡಿ. ನಾವು ಎಲ್ಲವನ್ನೂ ಸರಿಮಾಡಿ ತೋರಿಸ್ತಿವಿ.ಹೀಗಾಗಿ ವಿಜಯದಶಮಿವರೆಗೆ ಗಡುವು ಅಷ್ಟೆ. ಮುಂದಿನ ನಡೆ ಯಾವರೀತಿ ಇರಲಿದೆ ಅನ್ನೋದನ್ನ ಕಾದು ನೋಡ್ತಿರಿ. ನಾವು ಭ್ರಷ್ಟರನ್ನೂ ಬಯಲಿಗೆಳೆಯುತ್ತೀವಿ. ನಮಗೆ ಒಂದು ಅವಕಾಶ ಕೊಡಿ ಮೋದಿ ಹೇಳಿದಂತೆ ನಾವು ಕಾವೂಂಗ ನಾ ಕಾನೇದೂಂಗ ಅನ್ನೋದನ್ನ ಅನ್ನೋದನ್ನ ಸಾಧಿಸುತ್ತೇವೆ.. ಟೋಟಲ್ ಬಿಜೆಪಿ ಗದ್ದುಗೆ ಕುಸಿದು ಬೀಳೋ ಹಂತದಲ್ಲಿದೆ. ಹೀಗಾಗಿ ನಮ್ಮ 25 ಕ್ಷೇತ್ರದಲ್ಲಿ ಟಿಕೆಟ್ ಸಿಗೋ ವಿಶ್ವಾಸವಿದೆ. ಈ ವಿಚಾರದಲ್ಲಿ ನೋ ಕಾಂಪ್ರಮೈಸ್: ಪ್ರಮೋದ್ ಮುತಾಲಿಕ್ ಹೇಳಿಕೆ
2:01 PM
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ ರಿಟ್ ಅರ್ಜಿ
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ ರಿಟ್ ಅರ್ಜಿ. ಸರ್ಕಾರ, ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ನೋಟಿಸ್. ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್. ಈಜಿಪುರದ ಕೆ.ಮಹದೇವ ರಿಟ್ ಅರ್ಜಿ ಸಲ್ಲಿಸಿದ್ದರು. ನಿಯಮಬಾಹಿರವಾಗಿ ಮೀಸಲಾತಿ ನಿಗದಿಪಡಿಸಿದ್ದಾರೆಂದು ಆರೋಪ. ಮೀಸಲಾತಿ ಪಟ್ಟಿ ರದ್ದು ಕೋರಿದ್ದ ಅರ್ಜಿದಾರರು. ವಿಚಾರಣೆ ಸೆ.1 ಕ್ಕೆ ಮುಂದೂಡಿದ ಹೈಕೋರ್ಟ್.
1:34 PM
40 ಪರ್ಸೆಂಟ್ ಕಮಿಷನ್ ಆರೋಪ, ನಾನು ತಪ್ಪು ಮಾಡಿದರೆ ಶಿಕ್ಷೆಯಾಗಲಿ: ಮುನಿರತ್ನ
ಈ ಗುತ್ತಿಗೆ ದಾರ ಸಂಘವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗ್ತಿದೆ. ಆರೋಪ ಮಾಡ್ತಾ ಇರೋರು ಇಲ್ಲಿ ತನಕ ಯಾಕೆ ದಾಖಲೆ ಕೊಡ್ತಾ ಇಲ್ಲ? ವಿರೋಧ ಪಕ್ಷದವರ ಜೊತೆ ಸೇರಿಕೊಂಡು ಪ್ರಧಾನಿ ಗಳಿಗೆ ಪತ್ರ ಬರೀತಾರೆ. ಅವರಿಗಾದರೂ ದಾಖಲೆಗಳನ್ನು ಕೊಡಬೇಕಲ್ಲ? ಮುಖ್ಯಮಂತ್ರಿಗೂ ಒಂದು ಪ್ರತಿ ದಾಖಲೆ ಕೊಡಲಿ. ಮತ್ತೊಂದು ಪ್ರತಿ ಪ್ರಧಾನಿಗಳಿಗೂ ಕೊಡಲಿ. ಸಿಎಂ ಏನೂ ಕ್ರಮ ತಗೊಳ್ತಾ ಇಲ್ಲ ಅಂತಾ ಪ್ರಧಾನಿಗಳಿಗೆ ದೂರು ಕೊಡಲಿ. ನಾನು ಕೋಲಾರದ ರಸ್ತೆಗಳ ಗುಣಮಟ್ಟ ಪರೀಕ್ಷೆ ಮಾಡಿದ್ದಕ್ಕೇ ಈ ಆರೋಪ ಮಾಡಿದ್ರೆ ಹೇಗೆ? ಒಂದು ಸಲ ಕೋಲಾರದ ಸಚಿವರು ಅಂತಾರೆ, ಮತ್ತೊಮ್ಮೆ ನಾನು ಹೆಸರೇ ಹೇಳಿಲ್ಲ ಅಂತಾರೆ. ಗೊಂದಲದ ಹೇಳಿಕೆ ಕೊಡ್ತಾರೆ. ಈಗ ನಾನು ಒಂದು ತೀರ್ಮಾನಕ್ಕೆ ಬಂದಿದ್ದೇನೆ. ನಾನೂ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಾದ್ರೂ ದಾಖಲೆ ಕೊಡ್ತಾರಾ? ಲೋಕಾಯುಕ್ತಕ್ಕಾದ್ರೂ ದೂರು ಕೊಡ್ತಾರಾ? ಕಡೆಗೆ ಕೋರ್ಟಿಗಾದರೂ ಹೋಗಿ ದಾಖಲೆ ಕೊಟ್ಟು ತನಿಖೆಗೆ ಕೇಳ್ತಾರಾ? ಇದ್ಯಾವುದೂ ಮಾಡದ ನಿಮ್ಮ ಉದ್ದೇಶ ಏನು? ದಾಖಲೆಗಳಿದ್ರೆ ಇವತ್ತೇ ಬಿಡುಗಡೆ ಮಾಡಿ. ಕೆಂಪಣ್ಣ ನನಗೆ 25 ವರ್ಷಗಳಿಂದ ಪರಿಚಯಸ್ಥರು.ಗುತ್ತಿಗೆದಾರ ಸಂಘದ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತಾ ಇದ್ದೇನೆ. ನಾನು ತಪ್ಪು ಮಾಡಿದ್ರೆ ನಮಗೆ ಶಿಕ್ಷೆ ಆಗಲಿ. ಪ್ರಚಾರಕ್ಕೆ ಅಂತಾ ಪತ್ರ ಬರೆಯೋದಲ್ಲ. ಕಾನೂನು ಹೋರಾಟದಲ್ಲಿ ದಾಖಲೆಗಳನ್ನು ಕೊಟ್ಟು ಸಾಬೀತು ಮಾಡಲಿ. ಆರೋಪ ಮಾಡಿದವರಿಗೆ ಮುನಿರತ್ನ ಸವಾಲು.
1:03 PM
ಸಾವರ್ಕರ್ ಫೋಟೊ ಎಲ್ಲಾ ಕಡೆ ಹಾಕಬೇಕು: ರೇಣುಕಾಚಾರ್ಯ
ಸಾವರ್ಕರ್ ಫೋಟೊ ಎಲ್ಲಾ ಕಡೆ ಹಾಕಬೇಕು. ಮಸೀದಿಯಲ್ಲೂ ಹಾಕಬೇಕು. ಮಸೀದಿ ಮುಂದೆಯೂ ಹಾಕಬೇಕು. ಯಾಕೆ ಹಾಕಬಾರದು? ಸ್ವಾತಂತ್ರ್ಯ ಹೋರಾಟಗಾರರು ಅಲ್ವೆ? ಮುಸ್ಲಿಮರು ಸತ್ತವರ ಫೋಟೊ ಮನೆಯಲ್ಲಿ ಹಾಕಲ್ಲ. ಯಾಕೆ ಹಾಕಲ್ಲ? ಈಗ ಟಿಪ್ಪು ಅಂತ ದೇಶದ್ರೋಹಿ/ನ್ನು ಜಯಂತಿ ಹೆಸರಲ್ಲಿ ವಿಜೃಂಭಣೆ ಮಾಡ್ತಿರಾ?
12:56 PM
ವಿದ್ಯುತ್ ಖಾಸಗೀಕರಣ ಖಂಡಿಸಿ ರೈತ ಸಂಘ ಪ್ರತಿಭಟನೆ
ಹಾವೇರಿ: ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯಿಸಿ, ವಿದ್ಯುತ್ ಖಾಸಗೀಕರಣ ಖಂಡಿಸಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ.
12:33 PM
ನೆಲಮಂಗಲ: ವೀರಭದ್ರ ಸ್ವಾಮಿ ದೇವಾಲಯಕ್ಕೆ ಕನ್ನ ಹಾಕಿದ ಕಳ್ಳರು
ನೆಲಮಂಗಲ: ವೀರಭದ್ರ ಸ್ವಾಮಿ ದೇವಾಲಯಕ್ಕೆ ಕನ್ನ ಹಾಕಿದ ಕಳ್ಳರು. ದೇವಾಲಯದ ಬಾಗಿಲು ಒಡೆದು ಹುಂಡಿ ಕಳ್ಳತನ. ಮಲ್ಲಸಂದ್ರದ ಪುರಾತನ ಶ್ರೀ ವೀರಭದ್ರ ಸ್ವಾಮಿ ದೇವಾಲಯ. ದೇವಾಲಯದಲ್ಲಿದ್ದ ಮೂರು ಹುಂಡಿ ಹೊತ್ತೋಯ್ದ ಕಳ್ಳರು. ಪಕ್ಕದ ತೋಟದಲ್ಲಿ ಹುಂಡಿ ಒಡೆದು ಹಣ ಕದ್ದು ಪರಾರಿ. ದೇವರಿಗೆ ಹರಕೆ ರೂಪದಲ್ಲಿ ಸಲ್ಲಿಸಿದ್ದ ಪಾದುಕೆಗಳು. ಚೆಲ್ಲಾಪಿಲ್ಲಿ. ಕಳ್ಳರ ಕೈಚಳಕ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ.
12:21 PM
ಸಹಾಯಕ ಕೃಷಿ ನಿರ್ದೇಶಕಿ ದರ್ಪಕ್ಕೆ ಅಧಿಕಾರಿಗಳು, ಸಿಬ್ಬಂದಿ ಸುಸ್ತೋ ಸುಸ್ತು!
ರಾಯಚೂರು: ಸಹಾಯಕ ಕೃಷಿ ನಿರ್ದೇಶಕಿಯ ದರ್ಪಕ್ಕೆ ಅಧಿಕಾರಿಗಳು,ಸಿಬ್ಬಂದಿ ಸುಸ್ತೋ ಸುಸ್ತು. ರಾಯಚೂರು ಜಿಲ್ಲೆ ಸಿಂಧನೂರು ತಾ. ಸಹಾಯಕ ಕೃಷಿ ನಿರ್ದೇಶಕಿ. ನಿರ್ದೇಶಕಿಯ ಶಿಷ್ಟಾಚಾರಕ್ಕೆ ಬೇಸತ್ತ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ. ಸಿಂಧನೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾಂಕಾ. ಎಸ್. ವಿರುದ್ದ ಆರೋಪ. ಕಚೇರಿ ಎಂಟ್ರಿಯಿಂದಲೇ ಶುರುವಾಗುತ್ತೇ ಮೇಡಂ ಅವರ ಶಿಷ್ಟಾಚಾರಗಳು. ಕಚೇರಿ ಗೇಟ್ ನಲ್ಲಿ ಹಾರ್ನ್ ಹಾಕಿ ಹಾಜರಿ ಖಾತ್ರಿ ಪಡಿಸಿಕೊಳ್ಳತ್ತಾರೆ ಮೇಡಂ. ಹಾರ್ನ್ ಕೇಳಿದ ತಕ್ಷಣವೇ ಡೋರ್ ಓಪನ್ ಮಾಡಬೇಕು ಪಿವನ್, ಸಿಬ್ಬಂದಿ. ಪ್ಯೂನ್ ಡೋರ್ ಓಪನ್ ಮಾಡಿದ ಬಳಿಕವೇ ಮೇಡಂ ಕಾರಿನಿಂದ ಕೆಳಗೆ ಇಳಿಯುವುದು. ಪಿವನ್ ಡೋರ್ ಓಪನ್ ಮಾಡುವಲ್ಲಿ ವಿಳಂಬ ಆದ್ರೆ ಮೇಡಂ ಫುಲ್ ಗರಂ. ಪಿವನ್ ಡೋರ್ ತೆಗೆಯುವರೆಗೂ ಕಾರಿನಿಂಸ ಕೆಳಗೆ ಇಳಿಯಲ್ವಂತೆ ಮೇಡಂ. ದಿನನಿತ್ಯ ಕೃಷಿ ಇಲಾಖೆಯಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ. ಐಎಎಸ್,ಐಪಿಎಸ್ ಅಧಿಕಾರಿಗಳು ಇಲ್ಲದ ದರ್ಪ ಈ ಮೇಡಂಗೆ ಮಾತ್ರ. ಕೃಷಿ ಇಲಾಖೆಯಲ್ಲಿ ದರ್ಪ ಮೇರೆಯುವ ಹಾರ್ನ್ ಲೇಡಿ ಪ್ರಿಯಾಂಕ .ಎಸ್. ಪ್ರಿಯಾಂಕಾ ಎಸ್ ದರ್ಪಕ್ಕೆ ಡ್ರೈವರ್, ಪ್ಯೂನ್ಸ್ ಸುಸ್ತೋ ಸುಸ್ತು. ಸದ್ಯ ಪ್ರಿಯಾಂಕ ಮೇಡಂ ದರ್ಪದ ವಿಡಿಯೋ ಎಲ್ಲೆಡೆ ವೈರಲ್!
12:09 PM
ಗಣೇಶೋತ್ಸವ: ಬೆಂಗಳೂರಲ್ಲಿ ಶಾಂತಿ ಸಭೆ
ಬೆಂಗಳೂರಿನಲ್ಲಿ ಶಾಂತಿ ಸಭೆ ಆರಂಭ. ಬೆಂ.ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ಆರಂಭ. ಗಣೇಶ ಹಬ್ಬದ ಹಿನ್ನಲೆ ಭದ್ರತೆ ಹಾಗೂ ಗಣೇಶ ಗೈಡ್ ಲೈನ್ ಬಗ್ಗೆ ಮಾಹಿತಿ. ಟೌನ್ ಹಾಲ್ ಸಭಾಂಗಣ ದಲ್ಲಿ ನಡೆಯುತ್ತಿರುವ ಸಭೆ. ಸಭೆಯಲ್ಲಿ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ವಿಭಾಗದ ಡಿಸಿಪಿಗಳು ಎಸಿಪಿ, ಹಾಗೂ ಇನ್ಸ್ಪೆಕ್ಟರ್ ಗಳು ಭಾಗಿ. ಜೊತೆಗೆ ಕಮಿಷನರ್ ಸಭೆಯಲ್ಲಿ ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರಿಯ ಮುಖಂಡರು ಭಾಗಿ. ಹಿಂದೂ ಮುಖಂಡರು, ಮುಸ್ಲಿಂ ಮುಖಂಡರು ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಭಾಗಿ. ಮುಖಂಡರುಗಳಿಗೆ ಸರ್ಕಾರದ ಗೈಡ್ ಲೈನ್ ಹಾಗೂ ಶಾಂತಿಯುತವಾಗಿ ಗಣೇಶೋತ್ಸವನ್ನ ಆಚರಣೆ ಮಾಡಲು ಸಹಕಾರ ನೀಡಿ ಎಂದು ಮನವಿ. ಎರಡು ವರ್ಷ ಕೋವಿಡ್ ಹಿನ್ನಲೆ ಗೌರಿ ಗಣೇಶ್ ಹಬ್ಬ ಆಚರಣೆಯಾಗಿಲ್ಲ. ಹೀಗಾಗಿ ಎಲ್ಲಾ ಧರ್ಮಿಯರು ಸಹಕರಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಲಿರುವ ಅಧಿಕಾರಿಗಳು. ಶಾಂತಿಯುತವಾಗಿ ಹಬ್ಬ ಆಚರಣೆ ಬಗ್ಗೆ ಮಾಹಿತಿ ನೀಡುತ್ತಿರುವ ಅಧಿಕಾರಿಗಳು.
12:06 PM
ನವಜಾತ ಗಂಡು ಶಿಶು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿದ್ದ ದುರುಳರು
ಬೆಳಗಾವಿ: ನವಜಾತ ಗಂಡು ಶಿಶು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿದ್ದ ದುರುಳರು. ನೆರಸಾ ಗೌಳಿವಾಡ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ರಾಕ್ಷಸಿ ಕೃತ್ಯ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮ. ಅಂದಾಜು ಮೂರು ದಿನಗಳ ನವಜಾತ ಗಂಡು ಶಿಶು. ಮಗು ಅಳುವ ಶಬ್ದ ಕೇಳಿ ಗಮನಿಸಿದ್ದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ. ತಕ್ಷಣ ಆ್ಯಂಬುಲೆನ್ಸ್ ಕರೆಯಿಸಿ ತಾಲೂಕು ಆಸ್ಪತ್ರೆಗೆ ರವಾನೆ. ಚಿಕ್ಕಮಕ್ಕಳ ತಜ್ಞ ಡಾ.ಪವನ್ ಪೂಜಾರಿಯಿಂದ ಚಿಕಿತ್ಸೆ. 2.2ಕೆಜಿ ತೂಕದ ನವಜಾತ ಗಂಡು ಶಿಶು. ಮಗುವಿನ ಕಣ್ಣಿನ ಮೇಲೆ ಪರಚಿದ ಗಾಯ ಪತ್ತೆ. ಚಳಿ ಜಿಟಿ ಜಿಟಿ ಮಳೆಯಿಂದ ತಂಪಾಗಿದ್ದ ಶಿಶುವಿನ ದೇಹ. ಪ್ರಾಥಮಿಕ ಚಿಕಿತ್ಸೆ ನೀಡಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ. ಸದ್ಯ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗೆ ಚಿಕಿತ್ಸೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
12:04 PM
ಸಾವರ್ಕರ್ ರಥಯಾತ್ರೆಗೆ ಟಾಂಗ್ ಕೊಟ್ಟ ಎಂಬಿಪಿ
ವಿಜಯಪುರ: ಬಿಎಸ್ವೈ ವೀರ್ ಸಾವರ್ಕರ್ ಪೋಟೊ ರಥಯಾತ್ರೆ ವಿಚಾರ. ವಿಜಯಪುರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಪ್ರತಿಕ್ರಿಯೆ. ಸಾವರ್ಕರ್ ರಥಯಾತ್ರೆಗೆ ಟಾಂಗ್ ಕೊಟ್ಟ ಎಂಬಿಪಿ. ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರ ನಾಯಕರ ಪೋಟೊ ರಥಯಾತ್ರೆ ಮಾಡಿ. ಬೇಕಿದ್ರೆ ನಾವು ರಥಯಾತ್ರೆಯಲ್ಲಿ ಪಾಲ್ಗೊಳ್ತೀವಿ ಎಂದ ಎಂಬಿಪಿ. ನಮ್ಮ ನಾಡಿನ ಹೋರಾಟಗಾರರ ರಥಯಾತ್ರೆ ಮಾಡಿ. ಗಣೇಶ ಉತ್ಸವದ ಮಂಟಪಗಳಲ್ಲು ನಾಡಿನ ಹೋರಾಟಗಾರರ ಪೋಟೋ ಇಡಿ ಎಂದ ಎಂಬಿಪಿ. ನಮ್ಮ ನಾಡಿದ ಹೋರಾಟಗಾರರು ಕಾಣಿಸಲ್ವಾ ನಿಮಗೆ, ಇವರಿಗೆ ಗೌರವ ಕೊಡಿ. ಪಕ್ಷದ ನಾಯಕರ ಜೊತೆಗೆ ಚರ್ಚೆ ಮಾಡಿ ನಾವು ಗೌರವಿಸುವ ಕೆಲಸ ಮಾಡ್ತೀವಿ. ಅವರು ಮಾಡದೆ ಇದ್ದರೆ ನಾವು ಗೌರವಿಸೋ ಕೆಲಸ ಮಾಡ್ತೀವಿ. ಪಕ್ಕದ ಮಹಾರಾಷ್ಟ್ರದ ವಿವಾದಿತ ವ್ಯಕ್ತಿ ಪೊಟೋ ರಥಯಾತ್ರೆ ಯಾಕೆ? ವಿವಾದಿತ ವ್ಯಕ್ತಿಯ ಪೋಟೋ ಯಾತ್ರೆ ಎಷ್ಟು ಸೂಕ್ತ ಎಂದ ಎಂ ಬಿ ಪಾಟೀಲ್. ಯಡಿಯೂರಪ್ಪರಲ್ಲಿ ವಿನಂತಿ ಮಾಡ್ತೀನಿ ಎಂದ ಎಂಬಿಪಿ. ಸಾವರ್ಕರ್ ಪೋಟೊ ತೆಗೆದು ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಸುರಪುರ ನಾಯಕರ, ಪೋಟೊ ಯಾತ್ರೆ ಮಾಡಿ, ಎಂದ ಕಾಂಗ್ರೆಸ್ ನಾಯಕ.
11:28 AM
ಶಿರಾ ಅಪಘಾತ: ಬದುಕುಳಿದ 5 ವರ್ಷದ ಕಂದ
ತುಮಕೂರು ಭೀಕರ ಅಪಘಾತ ಪ್ರಕರಣ. ಒಂದೇ ಕುಟುಂಬದ ಮೂವರು ಸಾವು. ಬದುಕುಳಿದ 5 ವರ್ಷದ ಓರ್ವ ಕಂದ. ಪ್ರಭುಸ್ವಾಮಿ,ರೇಖಾ ದಂಪತಿ ಜೊತೆಹೆ ವಿನೋದ್, ಸಂದೀಪ್ ಎಂಬ ಪುತ್ರರು ಆಗಮಿಸುತ್ತಿದ್ದರು. ಅಪಘಾತದಲ್ಲಿ ಪ್ರಭುಸ್ವಾಮಿ, ರೇಖಾ, ವಿನೋದ್ ಸಾವು. ಬದುಕುಳಿದ ಓರ್ವ ಪುತ್ರ ಸಂದೀಪ್. ಸುದ್ದಿ ತಿಳಿದು ಬೆಂಗಳೂರಿನಿಂದ ಆಗಮಿಸಿರುವ ಸಂಬಂಧಿಕರು. ಮಗುವಿನ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಅಳಲು.
10:58 AM
ಶಿರಾ ಅಪಘಾತ: ಮೋದಿ ಟ್ವೀಟ್ ಮಾಡಿ, ಸಂತಾಪ
ಶಿರಾ ಬಳಿಯ ಕಳ್ಳಂಬೆಳ್ಳ ಬಳಿ ಭೀಕರ ಅಪಘಾತ. ಅಪಘಾತ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್. ಪ್ರಧಾನಿಗಳಿಂದ ಸಂತಾಪ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಣೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ.
The accident in Tumakuru district, Karnataka is heart-rending. Condolences to the bereaved families. Prayers with the injured. Rs 2 lakh from PMNRF would be paid to the next of kin of each deceased. The injured would be paid Rs. 50,000: PM
— PMO India (@PMOIndia)9:52 AM
ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಸ್ಥಾನ ನಿರಾಕರಿಸಿದ ನರೇಂದ್ರ ರೈ ದೇರ್ಲ
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ .ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ. ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟ ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು.ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ. ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ, ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ .ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ...
- ನರೇಂದ್ರ ರೈ ದೇರ್ಲ.