Published : Jul 22, 2022, 09:31 AM ISTUpdated : Aug 04, 2022, 01:23 PM IST

Karnataka News Updates: CBSE ಫಲಿತಾಂಶದಿಂದ ಬಿಎಸ್‌ವೈ ಪರೋಕ್ಷ ರಾಜಕೀಯ ನಿವೃತ್ತಿವರೆಗಿನ ಮಾಹಿತಿ

ಸಾರಾಂಶ

ಕರ್ನಾಟಕದಲ್ಲಿ ಇಂದು ನಡೆದ ರಾಜಕೀಯ ಬೆಳವಣಿಗೆ, ಕ್ರೀಡಾ ಸುದ್ದಿ, ಅಪರಾಧಗಳು, ಜಿಲ್ಲಾವಾರು ಮಳೆಯ ಸುದ್ದಿ, ಸಿಬಿಎಸ್‌ಇ ಫಲಿತಾಂಶ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪರೋಕ್ಷ ರಾಜಕೀಯ ನಿವೃತ್ತಿ ಸೇರಿಂದೆ ಇಂದು (ಜುಲೈ 22) ನಡೆದ ಎಲ್ಲಾ ಸುದ್ದಿಗಳನ್ನು ನೀವು ಇಲ್ಲಿ ಪಡೆಯಬಹುದು. ಬೆಳಗ್ಗೆಯಿಂದ ನಡೆದ ಚಿಕ್ಕ ಪುಟ್ಟ ಸುದ್ದಿಗಳಿಂದ ಹಿಡಿದು, ದೊಡ್ಡ ದೊಡ್ಡ ಸುದ್ದಿಗಳು ಇಲ್ಲಿ ಲಭ್ಯ. ನಿಮಗೆ ಬೆಳಗ್ಗೆಯಿಂದ ಸುದ್ದಿಗಳನ್ನು ಓದಲು ಸಮಯ ಸಿಗದಿದ್ದರೆ, ಈಗ ಒಂದೇ ಬಾರಿ ಎಲ್ಲ ಸುದ್ದಿಗಳನ್ನು ಪರಿಶೀಲಿಸಬಹುದು. 

Karnataka News Updates: CBSE ಫಲಿತಾಂಶದಿಂದ ಬಿಎಸ್‌ವೈ ಪರೋಕ್ಷ ರಾಜಕೀಯ ನಿವೃತ್ತಿವರೆಗಿನ ಮಾಹಿತಿ

07:09 PM (IST) Jul 22

ಇಂದಿನ ಸಂಪೂರ್ಣ ಸುದ್ದಿಗಳ ಗುಚ್ಚ ಈ ಕೆಳಗಿದೆ

ಬಿಎಸ್‌ ಯಡಿಯೂರಪ್ಪ ಅವರು ಪರೋಕ್ಷವಾಗಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಮಾತು, ಸಿಬಿಎಸ್‌ಇ ಫಲಿತಾಂಶ, ಮಳೆಯ ಅಬ್ಬರ, ಅಪಘಾತ, ಅಪರಾಧ, ಕ್ರೀಡೆ, ಬಿಬಿಎಂಪಿ ವಾರ್ಡ್‌ ವಿಂಗಡಣೆ ಸೇರಿದಂತೆ ಇಂದು ನಡೆದ ಎಲ್ಲಾ ಪ್ರಮುಖ ಸುದ್ದಿಗಳು ಈ ಕೆಳಗಿದೆ. 

02:29 PM (IST) Jul 22

ಶಿಕಾರಿಪುರ ಕ್ಷೇತ್ರ ಮಗ ವಿಜಯೇಂದ್ರನಿಗೆ ಬಿಟ್ಟುಕೊಟ್ಟ ಬಿಎಸ್‌ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರವನ್ನು ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟು ಕೊಡುವುದಾಗಿ ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿದ್ದಾರೆ. ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಪುತ್ರ ಬಿ ವೈ ವಿಜಯೇಂದ್ರನನ್ನು ಬೆಂಬಲಿಸಲು ಬಹಿರಂಗ ಕರೆ ನೀಡಿದ ಬಿಎಸ್ ವೈ. ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಕರೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗೆ ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ನನ್ನನ್ನು ಬೆಂಬಲಿಸಿದಂತೆ ಬಿ ವೈ ವಿಜಯೇಂದ್ರನಿಗೆ ಸಂಪೂರ್ಣ ಸಹಕಾರ ನೀಡಿ. ವಿಜಯೇಂದ್ರನನ್ನು ಒಂದು ಲಕ್ಷ ಮತಗಳ ಬಾರಿ ಅಂತರದಿಂದ ಗೆಲ್ಲಿಸಿ. ಈ ಮೂಲಕ ನಾವು ಮಾಡಿದ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

02:25 PM (IST) Jul 22

CBSE Class 10 ಫಲಿತಾಂಶ ಪ್ರಕಟ

ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕೆಲ ಸಮಯದ ಹಿಂದೆ ಸಿಬಿಎಸ್‌ಇ ಕ್ಲಾಸ್‌ 12 ಫಲಿತಾಂಶ ನೀಡಲಾಗಿತ್ತು. ಇದೀಗ ಹತ್ತನೇ ತರಗತಿ ಫಲಿತಾಂಶ ಕೂಡ ಪ್ರಕಟವಾಗಿದ್ದು ರಿಸಲ್ಟ್‌ ಈ ಕೆಳಗಿನ ವೆಬ್‌ಸೈಟ್‌ನಲ್ಲಿ ತಿಳಿಯಬಹುದು. cbse.gov.in, cbseresults.nic.in, parikshasangam.cbse.gov.in ಮತ್ತು results.cbse.nic.in ಈ ಜಾಲತಾಣಗಳಲ್ಲಿ ಫಲಿತಾಂಶಗಳನ್ನು ನೀವು ಪಡೆಯಬಹುದು. ಡಿಜಿ ಲಾಕರ್‌ ಆಪ್‌ನಲ್ಲಿ ಕೂಡ ಫಲಿತಾಂಶವನ್ನು ನೋಡಬಹುದು.

01:46 PM (IST) Jul 22

ಬೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಜೀವ ಬಲಿಯಾಗಿರುವ ಘಟನೆ ನಗರದ ಹಲಸೂರಿನ ಯಲ್ಲಮ್ಮ ಕೋಯಿಲ್ ಸ್ಟ್ರೀಟ್ ಬಳಿ ನಡೆದಿದೆ. ಅಪ್ಪು (25) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ರಾಜಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಜೀವ ಬಲಿ

12:46 PM (IST) Jul 22

ಕಾಂಗ್ರೆಸ್‌ ಸಿಎಂ ಆಕಾಂಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆ, ನಾನೂ ಸಿಎಂ ಅಭ್ಯರ್ಥಿ ಎಂದ ಎಂಬಿಪಿ

ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ್ ಸಮರ್ಥನೆ ನೀಡಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ಇಬ್ಬರ ಕದನದಲ್ಲಿ ಎಂ.ಬಿ.ಪಾಟೀಲ್‌ಗೆ ಚಾನ್ಸ್ ಬರಬಹುದಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಎಂಬಿ ಪಾಟೀಲ್‌, ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ ಎಂದಿದ್ದಾರೆ. ನೇರವಾಗಿಯೇ ಬರ್ತೀವಿ ಯಾವಾಗ ಬೇಕು ಆಗ. ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಅಂದ್ರೆ ನೇರವಾಗಿಯೇ ಬರ್ತೀವಿ. ಕದನದಲ್ಲಿ ಏಕೆ ಬರಬೇಕು ನಾವು? ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್. ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ವಿಚಾರ ಮಾಡಬಹುದು ಹಾಗೇ, ಅವರು ಮಾಡಿದಾಗ ಮಾತ್ರ ಕರೆಕ್ಟ್ ಆಗುತ್ತೆ. ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ವಿಚಾರ ಸರ್ವೇ ಸಾಮಾನ್ಯ. ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಣಯ ಮಾಡುತ್ತೆ. ಕಾಂಗ್ರೆಸ್ ಪಕ್ಷ ಒಂದು ವೇಳೆ ಬಯಸಿದ್ರೆ, ಪಂಜಾಬ್ ರೀತಿ ಯಾರನ್ನು ಪ್ರಾಜೆಕ್ಟ್ ಮಾಡಿದ್ರೆ ಅವರೂ ಅದನ್ನ ಡಿಕ್ಲೇರ್ ಮಾಡ್ತಾರೆ. ಹೈಕಮಾಂಡ್ ಕೇಳುವ ಪ್ರಶ್ನೆ ನನ್ನ ಕೇಳಿದ್ರೆ ಹೇಗೆ? ಹೈಕಮಾಂಡ್ ಆ ನಿರ್ಣಯ ತಗೆದುಕೊಳ್ಳಬಹುದು, ತಗೆದುಕೊಳ್ಳದೇ ಇರಬಹುದು. ಉತ್ತರ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮನಸು ಮಾಡಿದ್ರೆ ಲಿಂಗಾಯತ ಸಿಎಂ ಆಗಬಹುದು ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ, ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯ ಇರಬಹುದು ಎಂದರು. ಜೊತೆಗೆ ಮುಸಲ್ಮಾನರು ಏಕೆ ಸಿಎಂ ಆಗಬಾರದು, ದಲಿತರು ಏಕೆ ಆಗಬಾರದು ಎಂದು ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

11:57 AM (IST) Jul 22

ದೇಶಕ್ಕೆ ಎರಡನೇ ಸ್ಥಾನ ಬೆಂಗಳೂರಿಗೆ

ಬೆಂಗಳೂರಿನಲ್ಲಿ ಶೇ. 98.16 ಫಲಿತಾಂಶ: ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದಲ್ಲಿ ಪ್ರಾದೇಶಿಕವಾರು ಉತ್ತೀರ್ಣ ಪ್ರಮಾಣದಲ್ಲಿ ಬೆಂಗಳೂರು 2ನೇ ಸ್ಥಾನ ಪಡೆದುಕೊಂಡಿದೆ. ತಿರುವನಂತಪುರ ನಂ.1 ಸ್ಥಾನ ಪಡೆದುಕೊಂಡಿದ್ದು ಶೇ98.83ರಷ್ಟು ಫಲಿತಾಂಶ ದಾಖಲಾಗಿದ್ದರೆ, ಬೆಂಗಳೂರಿನಲ್ಲಿ ಶೇ. 98.16ರಷ್ಟು ಫಲಿತಾಂಶ ದಾಖಲಾಗಿದೆ. ಉಳಿದಂತೆ ಚೆನ್ನೈ: 97.79, ದೆಹಲಿ ಪೂರ್ವ: 96.29, ದೆಹಲಿ ಪಶ್ಚಿಮ: 96.29, ಅಜ್ಮೀರ್: 96.01, ಚಂಡೀಗಢ: 95.98, ಪಂಚಕುಲ: 94.94. : 92.06, ಪಾಟ್ನಾ: 91.20, ಭೋಪಾಲ್: 90.74, ಪುಣೆ: 90.48, ಭುವನೇಶ್ವರ: 90.37, ನೋಯ್ಡಾ: 90.27 , ಡೆಹ್ರಾಡೂನ್: 85.39, ಪ್ರಯಾಗ್ರಾಜ್: 83.71 ಫಲಿತಾಂಶ ಕಂಡಿದೆ.

11:56 AM (IST) Jul 22

CBSE ಫಲಿತಾಂಶದ ಹೆಚ್ಚಿನ ಮಾಹಿತಿ

33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು (33,423) ಅಥವಾ ಹಾಜರಾದವರಲ್ಲಿ ಶೇಕಡಾ 2.3 ರಷ್ಟು 95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ. ಮೊದಲ ಬಾರಿಗೆ, 2021-22ರ ಶೈಕ್ಷಣಿಕ ಅವಧಿಗೆ ಬೋರ್ಡ್ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸಲಾಗಿತ್ತು. 

"ಥಿಯರಿ ಪೇಪರ್‌ಗಳಿಗೆ ಮೊದಲ ಅವಧಿಯ ಅಂಕಗಳಿಗೆ 30 ಪರ್ಸಂಟೇಜ್‌ ವೇಟೇಜ್ ನೀಡಲಾಗಿದ್ದು, ಎರಡನೇ ಅವಧಿಯ ಅಂಕಗಳಿಗೆ 70% ವೇಟೇಜ್ ನೀಡಲಾಗಿದೆ" ಎಂದು ಅದು ಹೇಳಿದೆ. ಪ್ರಾಯೋಗಿಕ ಪತ್ರಿಕೆಗಳಿಗೆ ಎರಡೂ ಟರ್ಮ್‌ಗಳಿಗೆ ಸಮಾನ ತೂಕ ನೀಡಲಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2023 ರ 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ನಡೆಯಲಿದೆ.

11:19 AM (IST) Jul 22

CBSE ಫಲಿತಾಂಶ ಪ್ರಕಟ, ಬಾಲಕಿಯರದ್ದೇ ಮೇಲುಗೈ

ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ 92.71% ಫಲಿತಾಂಶ ಹೊರಬಂದಿದೆ. cbse.gov.in, cbseresults.nic.in, parikshasangam.cbse.gov.in ಮತ್ತು results.cbse.nic.in ಈ ಜಾಲತಾಣಗಳಲ್ಲಿ ಫಲಿತಾಂಶಗಳನ್ನು ನೀವು ಪಡೆಯಬಹುದು.

11:01 AM (IST) Jul 22

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ನಾಮಕರಣ ಸಾಧ್ಯತೆ

ಮೈಸೂರು ವಿಮಾನ ನಿಲ್ದಾಣದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಸಾಧ್ಯತೆ. ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ವಿಸ್ತರಣೆಗಾಗಿ ಅವಶ್ಯವಿರುವ 240 ಎಕರೆ ಜಮೀನು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಚರ್ಚೆ ಸಾಧ್ಯತೆ. ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡುವ ಸಾಧ್ಯತೆ.

10:59 AM (IST) Jul 22

ಸನ್ನಡತೆ ಆಧಾರದ ಮೇಲೆ 75ನೇ ಸ್ವಾತಂತ್ರೋತ್ಸವದಂದು 81 ಖೈದಿಗಳ ಬಿಡುಗಡೆ

75ನೇ ಸ್ವಾತಂತ್ರ ದಿನಾಚಾರಣೆಯ ಅಂಗವಾಗಿ "ಅಜಾದಿ ಕಾ ಅಮೃತ್ ಮಹೋತ್ಸವ" ಕಾರ್ಯಕ್ರಮ. ಸನ್ನಡೆತಯ ಆಧಾರದ ಮೇಲೆ 81 ಮಂದಿ ಖೈದಿಗಳಿಗೆ ಬಿಡುಗಡೆ. ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯ ಒಟ್ಟು 81 ಅರ್ಹ ನಿರ್ದಿಷ್ಟ ವರ್ಗದ ಶಿಕ್ಷಾ ಬಂದಿಗಳ ಬಿಡುಗಡೆಗೆ ಅನುಮೋದನೆ ಸಾಧ್ಯತೆ. 15ನೇ ಆಗಸ್ಟ್ 2022ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೊದಲನೇ ಹಂತದಲ್ಲಿ ವಿಶೇಷ ಮಾಫಿಯೊಂದಿಗೆ ಬಿಡುಗಡೆಗೆ ಪರಿಗಣಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಸಾಧ್ಯತೆ. ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆಗೆ ಅನುದಾನ ವಿಚಾರ. 2022-23ನೇ ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್, ಅಥವಾ ಸ್ಯಾಂಡಲ್ಸ್ ವಿತರಣೆಗೆ ಘಟನೋತ್ತರ ಅನುಮೋದನೆ. ರೂ. 132.00 ಕೋಟಿ ಅನುದಾನದಲ್ಲಿ ಶೂ ಸಾಕ್ಸ್ ಸ್ಯಾಂಡಲ್ ವಿತರಿಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡುವ ಸಾಧ್ಯತೆ.

10:02 AM (IST) Jul 22

ಮೈಸೂರು ಚಾಮುಂಡಿ ದರ್ಶನ ಪಡೆದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರವಾಗಿ  ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ..ನನಗೆ ಮೊದಲ ದಿನವೇ ಈ ಪ್ರಕರಣದಿಂದ‌ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು. ನಾನು ಈ ಪ್ರಕರಣದಲ್ಲಿ ಯಾವ ತಪ್ಪನ್ನೂ ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದ್ದೆ. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ನಿವಾರಣೆಯಾಗಿದೆ. ಬಿ ರಿಪೋರ್ಟ್ ಆದ್ರು ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರು ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತರ ಆಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕಿಸುತ್ತಿದ್ದಾರೆ.

 

 

09:58 AM (IST) Jul 22

Koppal: ಪೊಲೀಸರಿಂದ ಆರೋಪಿಗಳಿಗೆ ಗುಂಡೇಟು

ಕೊಪ್ಪಳ: ಪೊಲೀಸರಿಂದ ಆರೋಪಿಗಳಿಗೆ ಗುಂಡೇಟು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಮುಷ್ಟೂರ ಬಳಿ ಆರೋಪಿಗಳ ಮೇಲೆ ಫೈರ್. ಚಿಕ್ಕಜಾಲ ಪೊಲೀಸರಿಂದ ಆರೋಪಿಗಳ ಕಾಲಿಗೆ ಗುಂಡೇಟು. ಡಕಾಯಿತಿ ಕೇಸಿನ ಐವರು ಆರೋಪಿಗಳ ಪತ್ತೆಗೆ ಬಂದಿದ್ದ ಪೊಲೀಸರು. ಆರೋಪಗಳನ್ನ ಬೆನ್ನು ಹತ್ತಿದ್ದ ಚಿಕ್ಕಜಾಲ ಪೊಲೀಸರು. ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದ ಇಬ್ಬರ ಮೇಲೆ ಗುಂಡೇಟು. ಅಶೋಕ್, ಶಂಕರ್ ಎನ್ನುವವರಿಗೆ ಗುಂಡು. ಇಬ್ಬರು ಪೊಲೀಸರಿಂದ ಆರೋಪಿಗಳ ಮೇಲೆ ಫೈರಿಂಗ್. ಆರೋಪಿಗಳ ಕಾಲಿಗೆ ಗಾಯ, ಪೊಲೀಸರಿಗೂ ಸಣ್ಣ ಪುಟ್ಟ ಗಾಯ.  ಗುಂಡೇಡು ತಿಂದು ಅವಿತು ಕುಳಿತಿದ್ದ ಆರೋಪಿಗಳು. ನಂತರ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು. ಒಟ್ಟು ಐದು ಜನರ ಬಂಧನ ಮಾಡಿದ ಪೊಲೀಸರು. ಆರೋಪಿಗಳು,ಪೊಲೀಸರಿಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ವಿವಿಧ ಕೇಸ್ ದಾಖಲು

09:42 AM (IST) Jul 22

ಸಿದ್ದರಾಮಯ್ಯರಿಗೆ ಸ್ವಾಗತ- ಹೆದ್ದಾರಿ ಸಂಚಾರ ಅಸ್ತವ್ಯಸ್ತ

ತುಮಕೂರು: ಸಿದ್ದರಾಮಯ್ಯರಿಗೆ ಸ್ವಾಗತ- ಹೆದ್ದಾರಿ ಸಂಚಾರ ಅಸ್ತವ್ಯಸ್ತ. ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ತುಮಕೂರಿನ ಡಿಎಮ್ ಪಾಳ್ಯ ಬಳಿ ಘಟನೆ. ಹೆದ್ದಾರಿಯ ಮಧ್ಯದಲ್ಲಿ ಸಿದ್ದರಾಮ್ಯರಿಗಾಗಿ ಎರಡು ಗಂಟೆಗಳ ಕಾಲ ಕಾದು ನಿಂತ ಮುಖಂಡರು. ಈ ವೇಳೆ ವಾಹನ ಸಂಚಾರಕ್ಕೆ ಅಡ್ಡಿ. ಹೆದ್ದಾರಿ ಮಧ್ಯದಲ್ಲೇ ಸಿದ್ದಾರಮಯ್ಯರ ಕಾರು ನಿಲ್ಲಿಸಿ ಗೌರವಿಸಿದ ಮುಖಂಡರು. ಈ ವೇಳೆಯೂ ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ. ದಾವಣಗೆರೆ ಪ್ರಯಾಣದ ವೇಳೆ ಮಾರ್ಗ ಮಧ್ಯೆ ತುಮಕೂರಿನಲ್ಲಿ ಸಿದ್ದರಾಮಯ್ಯರನ್ನು ಗೌರವಿಸಿದ ಮುಖಂಡರು.

09:35 AM (IST) Jul 22

ಚಾಮರಾಜಪೇಟೆ ಮೈದಾನ ವಿವಾದಕ್ಕೆ ಬೀಳಲಿದೆ ತೆರೆ

ಎರಡು ಬಾರಿ ಬಿಬಿಎಂಪಿ ವರ್ಕ್ಫ್ ಬೋರ್ಡ್ ಗೆ ನೋಟೀಸ್ ನೀಡದ್ರೂ ಸರಿಯಾದ ದಾಖಲೆ ನೀಡದ ವರ್ಕ್ಫ್ ಬೋರ್ಡ್. ದಾಖಲೆಗಳನ್ನು ಒದಗಿಸಲು ಕಾಲಾವಕಾಶ ಕೇಳಿದ ವರ್ಕ್ಫ್ ಬೋರ್ಡ್. ಕಾಲಾವಕಾಶ ನೀಡಲು ಬಿಬಿಎಂಪಿ ನಕಾರ. ಬಿಬಿಎಂಪಿ ಎಆರ್‌ಒ ಕಚೇರಿ ದಾಖಲೆಗಳಲ್ಲಿ ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಅಂತಾ ನಮೂದು? ಹೀಗಾಗಿ ಒಂದು ತಾರ್ಕಿಕ ಅಂತ್ಯ ಕಾಣಿಸಲು ಮುಂದಾದ ಬಿಬಿಎಂಪಿ. ಇನ್ನೊಂದು ವಾರದಲ್ಲಿ ಅಂತ್ಯ ಹಾಡುವಂತೆ ಬಿಬಿಎಂಪಿಗೆ ಸೂಚನೆ ನೀಡಿರೋ ಸಿಎಂ ಬೊಮ್ಮಾಯಿ. ಬಹಳಷ್ಟು ದಿನ ಈ ವಿಚಾರವನ್ನ ಕಾಂಪ್ಲೀಕೇಷನ್ ಮಾಡ್ಬೇಡಿ ಅಂತಾ ಸೂಚನೆ ನೀಡಿರೋ ಸಿಎಂ. ನಿನ್ನೆ ಬಿಬಿಎಂಪಿ ಕಮಿಷನರ್ ಹಾಗೂ ಪಶ್ಚಿಮ ವಿಭಾಗದ ಜಂಟಿ ಆಯುಕ್ತರನ್ನ ಕರೆದು ಸಭೆ ನಡೆಸಿರೋ ಸಿಎಂ ಬೊಮ್ಮಾಯಿ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಪಶ್ಚಿಮ ವಿಭಾಗದ ಜಂಟಿ‌ ಆಯುಕ್ತ ಶ್ರೀನಿವಾಸ್ ಅವರನ್ನ ಕರೆದು ಒಂದು ಸುತ್ತಿನ‌ ಮಾತುಕತೆ ನಡೆಸಿರೋ ಸಿಎಂ. ಸಭೆಯಲ್ಲಿ ಆದಷ್ಟು ಬೇಗ ಚಾಮರಾಜಪೇಟೆ ಮೈದಾನ ವಿವಾದ ಬಗೆಹರಿಸುವಂತೆ ಖಡಕ್ ಸೂಚನೆ. ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಅನ್ನೋದನ್ನ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿರೋ ಸಿಎಂ. ವಿವಾದ ಬಹಳಷ್ಟು ದಿನ ಹೋಗೋದು ಬೇಡ, ಆದಷ್ಟು ಬೇಗ ಇತಿಶ್ರೀ ಹಾಡುವಂತೆ ಸಿಎಂ ಸೂಚಿಸಿದ್ದಾರೆ. 

 

09:33 AM (IST) Jul 22

ಬಿಬಿಎಂಪಿ ಚುನಾವಣೆ: ಮತ್ತೆ ಕಾಲಾವಕಾಶ ಕೇಳುತ್ತಾ ಸರಕಾರ?

ಬಿಬಿಎಂಪು ಚುನಾವಣೆ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ರಾಜ್ಯಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಕಾಲಾವಕಾಶ ಕೇಳುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ನ ಆದೇಶದತ್ತ ಬೆಂಗಳೂರು ನಾಯಕರ ಚಿತ್ತ. ಒಬಿಸಿ ಮೀಸಲಾತಿ ಪ್ರಕಟಣೆ ಬಗ್ಗೆ ಬಕ್ತವಾತ್ಸಲ್ಯಂ ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಡೀ ಲಿಮಿಟೇಷನ್ ಜೊತೆ ಒಬಿಸಿ ಮೀಸಲಾತಿ ವರದಿಯನ್ನೂ ಸುಪ್ರೀಂ ಕೋಟ್೯‌ಗೆ ಸಲ್ಲಿಸಲು ಮುಂದಾಗಿದೆ ಸರ್ಕಾರ. ಚುನಾವಣಾ ಪ್ರಕ್ರಿಯೆಗೆ  8 ವಾರಗಳ ಕಾಲ ಗಡವು ನೀಡಿತ್ತು ಸುಪ್ರೀಂ ಕೋರ್ಟ್. ಸದ್ಯ ಸುಪ್ರೀಂ ಕೋಟ್೯ ನ ಗಡವು ಮುಗಿದ ಹಿನ್ನೆಲೆಯಲ್ಲಿ ಇಂದು ವರದಿ ಸಲ್ಲಿಸಲು ಮುಂದಾಗಿದೆ ಸರ್ಕಾರ.


More Trending News