KPSC ನೇಮಕಾತಿ: ಪ್ರಥಮ ದರ್ಜೆ ಸಹಾಯಕ(FDA)ಹುದ್ದೆಗೆ ಆಹ್ವಾನ

By Suvarna News  |  First Published Feb 1, 2020, 3:08 PM IST

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಹೈದ್ರಾಬಾದ್ ಕರ್ನಾಟಕ ವೃಂದದ ಸಹಾಯಕ / ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. 


ಬೆಂಗಳೂರು, (ಫೆ.01): ಕರ್ನಾಟಕ ಲೋಕಸೇವಾ ಆಯೋಗ ಸಹಾಯಕ/ಪ್ರಥಮ ದರ್ಜೆ ಸಹಾಯಕ (FDA) ಒಟ್ಟು 137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ನೌಕರಿ ಪರ್ವ: 1112 FDA ಹುದ್ದೆಗೆ KPSC ಅರ್ಜಿ ಆಹ್ವಾನ

Latest Videos

undefined

ಸಾರ್ವಜನಿಕ ಶಿಕ್ಷಣ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯಗಳು ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಕಚೇರಿಗಳಲ್ಲಿ ಹೈದ್ರಾಬಾದ್ ಕರ್ನಾಟಕ ವೃಂದದ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಿದೆ.

ಎಂಜಿನಿಯರ್‌, ವೈದ್ಯ ಹುದ್ದೆಗೆ ಕೆಪಿಎಸ್‌ಸಿ ಸಂದರ್ಶನ ಇಲ್ಲ

06-02-2020ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಕೆ ಆರಂಭವಾಗಲಿದ್ದು, ದಿನಾಂಕ 06-03-2020 ಅರ್ಜಿ ಸಲ್ಲಿಸಲು ಕೊನೆ ದಿನವಾಗಿರುತ್ತದೆ.

ವಿದ್ಯಾರ್ಹತೆ
ಸಹಾಯಕ/ ಪ್ರಥಮ ದರ್ಜೆ ಸಹಾಯಕ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.

ಅರ್ಜಿ ಶುಲ್ಕ
# ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ.
# ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 300ರೂ.
# - ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.
# - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
# ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್‌ 35 ರೂ. ಪಾವತಿಸಬೇಕು. 

ವಯೋಮಿತಿ
# ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
# ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
# - ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
# - ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.

SSLC ಪಾಸಾದವರಿಗೆ ಉದ್ಯೋಗವಕಾಶ: 2792 ಹುದ್ದೆಗೆ ಅರ್ಜಿ ಆಹ್ವಾನ

ವೇತನ ಶ್ರೇಣಿ
# ಸಹಾಯಕ ಹುದ್ದೆ : ರೂ.30350 ರಿಂದ 58250 ರೂ. ತಿಂಗಳಿಗೆ
# ಪ್ರಥಮ ದರ್ಜೆ ಸಹಾಯಕ ಹುದ್ದೆ : ರೂ.27650-52650 ರೂ. ತಿಂಗಳಿಗೆ.

 ಪ್ರಮುಖ ದಿನಾಂಕಗಳು
# ಪ್ರಾರಂಭಿಕ ದಿನಾಂಕ : 06-02-2020
# ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-03-2020
# ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07-03-2020

ಪರೀಕ್ಷಾ ದಿನಾಂಕಗಳು
# ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ : 09-05-2020
# ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 10-05-2020

ಸೂಚನೆ: ಅರ್ಜಿ ಸಲ್ಲಿಸಲು ಫೆಬ್ರವರಿ 06, 2020 ರಂದು ಕೆಪಿಎಸ್‌ಸಿ ಆನ್‌ಲೈನ್‌ ಲಿಂಕ್‌ ಅಪ್‌ಡೇಟ್‌ ಮಾಡಲಿದೆ.
ಅಧಿಸೂಚನೆಯನ್ನು ತಿಳಿಯಲು http://www.kpsc.kar.nic.in/FDA%202019%20_HK_%20UPDATED.pdf
 

click me!