ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರ ಮತ್ತಷ್ಟು ಮಾಹಿತಯನ್ನು ತಿಳಿಯಲು ಮುಂದೆ ಓದಿ...
ಮಂಗಳೂರು, (ಜ.18): ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಒಟ್ಟು 34 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.
10 ಶೀಘ್ರಲಿಪಿಗಾರ, 6 ಬೆರಳಚ್ಚುಗಾರ, 13 ಬೆರಳಚ್ಚು ನಕಲುಗಾರ ಮತ್ತು 5 ಆದೇಶ ಜಾರಿಕಾರ ಸೇರಿದಂತೆ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
undefined
ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಫೆಬ್ರವರಿ 12,2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ವಿದ್ಯಾರ್ಹತೆ:
* ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SSLC ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.
* ಶೀಘ್ರಲಿಪಿಗಾರ ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ.
* ಬೆರಳಚ್ಚುಗಾರ ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ
* ಬೆರಳಚ್ಚುಗಾರ ನಕಲುಗಾರ ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವೇತನ ಶ್ರೇಣಿ ವಿವರ
* ಶೀಘ್ರಲಿಪಿಗಾರ 27,650 ರಿಂದ 52,650 ರೂ. ತಿಂಗಳಿಗೆ.
* ಬೆರಳಚ್ಚುಗಾರ 21,400 ರಿಂದ 42,000 ರೂ. ತಿಂಗಳಿಗೆ
* ಬೆರಳಚ್ಚು ನಕಲುಗಾರ 21,400 ರಿಂದ 42,000 ರೂ. ತಿಂಗಳಿಗೆ.
* ಆದೇಶ ಜಾರಿಕಾರ 19,950 ರಿಂದ 37,900 ರೂ. ತಿಂಗಳಿಗೆ.
ವಯೋಮಿತಿ: ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ. 2A,2B,3A ಮತ್ತು 3B ಯ ಗರಿಷ್ಠ 38 ವರ್ಷ ಮತ್ತು ST/SC/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2A,2B,3A,3Bಗೆ ಸೇರಿದ ಅಭ್ಯರ್ಥಿಗಳಿಗೆ 200 ರೂ. SC/ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ.
ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ಕ್ಲಿಕ್ ಮಾಡಿ