ಯುವರಾ'ಜ್ ಸಿಂಗ್'ಗೆ ಪತ್ರ ಬರೆದು ಅಭಿನಂದಿಸಿದ ಪ್ರಧಾನಿ ಮೋದಿ

Published : Sep 03, 2017, 08:34 PM ISTUpdated : Apr 11, 2018, 01:04 PM IST
ಯುವರಾ'ಜ್ ಸಿಂಗ್'ಗೆ ಪತ್ರ ಬರೆದು ಅಭಿನಂದಿಸಿದ ಪ್ರಧಾನಿ ಮೋದಿ

ಸಾರಾಂಶ

ನೀವು ಅಪೂರ್ವವಾಗಿ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಮುಂದುವರಿಸಿ' ಎಂದು ಜುಲೈ 31 , 2017 ರಂದು ಪತ್ರ ಬರೆದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಯುವ'ರಾಜ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತ್ರ ಬರೆದು ಅಭಿನಂದಿಸಿದ್ದಾರೆ.

ಯುವಿ'ಕೆನ್ ಫೌಂಡೇಷನ್'ನ ಸಂಸ್ಥಾಪರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸ್'ರ್ ರೋಗಿಗಳ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಪತ್ರ ಮುಖೇನ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ' ನೀವು ಅತ್ಯುತ್ಸಾಹದಿಂದ ಕೈಗೊಂಡಿರುವ ಸಾಮಾಜಿಕ ಸೇವೆಯ ನನಗೆ ಸಂತಸ ತಂದಿದೆ. ಕಾಯಿಲೆ ಪೀಡಿತರಿಗಾಗಿ ನಿಮ್ಮ ಸಂಸ್ಥೆಯಿಂದ ಕೈಗೊಂಡಿರುವ ಸೇವೆ ನಿಜವಾಗಲು ಮೆಚ್ಚುವಂತಹದ್ದು.

ಒಬ್ಬ ಪ್ರಸಿದ್ಧ ಕ್ರಿಕೆಟಿಗನಾಗಿ ಹಾಗೂ ಕ್ಯಾನ್ಸ'ರ್ ರೋಗದಿಂದ ಪಾರಾದ ನಿಮ್ಮಂಥವರಿಂದ ಹಲವು ಭಾರತೀಯರು ಸ್ಫೂರ್ತಿ ಪಡೆಯುತ್ತಾರೆ. ನೀವು ಅಪೂರ್ವವಾಗಿ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಮುಂದುವರಿಸಿ' ಎಂದು ಜುಲೈ 31 , 2017 ರಂದು ಪತ್ರ ಬರೆದಿದ್ದಾರೆ.

ಪ್ರಧಾನಿಯವರು ಬರೆದಿರುವ ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾ'ಗ್ರಾಮ್'ನಲ್ಲಿ 2 ದಿಮಗಳ ಹಿಂದೆ ಪೋಸ್ಟ್ ಮಾಡಿಕೊಂಡಿದ್ದಾರೆ.2011ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದ ಯುವಿ 2012ರಲ್ಲಿ ಸ್ವತಃ ಕ್ಯಾನ್ಸ್'ರ್'ಗೆ ತುತ್ತಾಗಿ ನಂತರ ಅಮೆರಿಕಾದಲ್ಲಿ ಯಶಸ್ವಿ ಚಿಕಿತ್ಸೆ ಪಡೆಯುವ ಮೂಲಕ ಚೇತರಿಸಿಕೊಂಡಿದ್ದರು.

ಕ್ಯಾನ್ಸ್'ರ್ ರೋಗಿಗಳ ಅಭ್ಯದಯಕ್ಕಾಗಿ ಯುವರಾಜ್ ಸಿಂಗ್ ಅವರು ಯುವಿ'ಕೆನ್ ಫೌಂಡೇಷನ್ ಸ್ಥಾಪಿಸಲಾಗಿದ್ದು, ಅವರ ತಾಯಿ ಕೂಡ ಸಂಸ್ಥಾಪಕರಾಗಿದ್ದಾರೆ. ಕಳಪೆ ಆಟದ ಕಾರಣದಿಂದಾಗಿ ಯುವರಾಜ್ ಸಿಂಗ್'ನನ್ನು ಟೀಂ ಇಂಡಿಯಾ ತಂಡದಲ್ಲಿ ಕಡೆಗಣಿಸಲಾಗುತ್ತದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಿಂದಲೂ ಯುವರಾಜ್'ರನ್ನು ಕೈಬಿಡಲಾಗಿತ್ತು.

ಯುವಿ ಇಲ್ಲಿಯವರೆಗೂ 304 ಏಕದಿನ ಪಂದ್ಯಗಳಿಂದ 8000 ರನ್ ಬಾರಿಸಿರುವ ಜೊತೆಗೆ 40 ಟೆಸ್ಟ್'ಗಳು ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್