ಮದ್ದು ತಿಂದ ಯೂಸೂಫ್'ಗೆ 5 ತಿಂಗಳು ನಿಷೇಧ; ಮುಗಿಯುತ್ತೆ ಇನೈದೇ ದಿನಗಳಲ್ಲಿ ಶಿಕ್ಷೆ..!

Published : Jan 09, 2018, 03:53 PM ISTUpdated : Apr 11, 2018, 01:08 PM IST
ಮದ್ದು ತಿಂದ ಯೂಸೂಫ್'ಗೆ 5 ತಿಂಗಳು ನಿಷೇಧ; ಮುಗಿಯುತ್ತೆ ಇನೈದೇ ದಿನಗಳಲ್ಲಿ ಶಿಕ್ಷೆ..!

ಸಾರಾಂಶ

ಬಿಸಿಸಿಐನ ಆ್ಯಂಟಿ ಡೋಪಿಂಗ್ ಕೋಡ್ 2.1 ನಿಯಮ ಉಲ್ಲಂಘಿಸಿರುವುದು ಸಾಭೀತಾಗಿರುವುದರಿಂದ ಇದೀಗ ಆಗಸ್ಟ್ 15ರಂದು ಹೇರಲಾಗಿದ್ದ ತಾತ್ಕಾಲಿಕ ಶಿಕ್ಷೆಯನ್ನೇ ಖಾಯಂ ಗೊಳಿಸಲಾಗಿದೆ. ಆ ಶಿಕ್ಷೆಯೀಗ ಜನವರಿ 15ಕ್ಕೆ ಮುಕ್ತಾಯವಾಗಲಿದೆ. ಅಂದರೆ ಇನ್ನು ಆರು ದಿನಕ್ಕೆ ನಿಷೇಧ ಶಿಕ್ಷೆ ಮುಕ್ತಾಯವಾಗಲಿದ್ದು, ಜನವರಿ 247&28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗೆ ಲಭ್ಯರಿರಲಿದ್ದಾರೆ.  

ನವದೆಹಲಿ(ಜ.09): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಯೂಸೂಫ್ ಪಠಾಣ್ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಡೋಪಿಂಗ್ ಟೆಸ್ಟ್'ನಲ್ಲಿ ಸಾಭೀತಾಗಿರುವುದರಿಂದ ಅವರ ಮೇಲೆ ಬಿಸಿಸಿಐ 5 ತಿಂಗಳ ನಿಷೇಧ ಹೇರಿದೆ. ಆದರೆ ಆ ನಿಷೇಧ ಜನವರಿ 15ರಂದು ಕೊನೆಯಾಗಲಿದೆ.

ದೆಹಲಿಯಲ್ಲಿ ಮಾರ್ಚ್ 16, 2017ರಲ್ಲಿ ನಡೆದ ದೇಶಿ ಟಿ20 ಟೂರ್ನಿ ವೇಳೆ ಯೂಸೂಫ್ ಮೂತ್ರದ ಮಾದರಿಯನ್ನು ಡೋಪಿಂಗ್ ಟೆಸ್ಟ್ ಸಲುವಾಗಿ ನೀಡಿದ್ದರು. ಅದರ ವೈದ್ಯಕೀಯ ವರದಿಯಲ್ಲಿ ನಿಷೇಧಿತ ಟರ್ಬುಟಲೈನ್ ಮದ್ದು ಸೇವಿಸಿರುವುದು ಸಾಭೀತಾಗಿದೆ.

ತಾವು ಉದ್ದೇಶಪೂರ್ವಕವಾಗಿ ಉದ್ದೀಪನ ಮದ್ದು ಸೇವಿಸಿಲ್ಲ. ಆರೋಗ್ಯ ಸಂಬಂಧಿತ ಸಮಸ್ಯೆಯಿಂದಾಗಿ ಈ ಮದ್ದು ಸೇವಿಸಿರುವುದಾಗಿ ಈ ಮೊದಲೇ ಬಿಸಿಸಿಐಗೆ ಪಠಾಣ್ ಸ್ಪಷ್ಟನೆ ನೀಡಿದ್ದರು. ಈ ಸಂಬಂಧ ಬಿಸಿಸಿಐ ಪಠಾಣ್ ಮೇಲೆ ಆಗಸ್ಟ್ 15ರಂದು ತಾತ್ಕಾಲಿಕ ನಿಷೇಧ ಹೇರಿತ್ತು.

ಬಿಸಿಸಿಐನ ಆ್ಯಂಟಿ ಡೋಪಿಂಗ್ ಕೋಡ್ 2.1 ನಿಯಮ ಉಲ್ಲಂಘಿಸಿರುವುದು ಸಾಭೀತಾಗಿರುವುದರಿಂದ ಇದೀಗ ಆಗಸ್ಟ್ 15ರಂದು ಹೇರಲಾಗಿದ್ದ ತಾತ್ಕಾಲಿಕ ಶಿಕ್ಷೆಯನ್ನೇ ಖಾಯಂ ಗೊಳಿಸಲಾಗಿದೆ. ಆ ಶಿಕ್ಷೆಯೀಗ ಜನವರಿ 15ಕ್ಕೆ ಮುಕ್ತಾಯವಾಗಲಿದೆ. ಅಂದರೆ ಇನ್ನು ಆರು ದಿನಕ್ಕೆ ನಿಷೇಧ ಶಿಕ್ಷೆ ಮುಕ್ತಾಯವಾಗಲಿದ್ದು, ಜನವರಿ 247&28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗೆ ಲಭ್ಯರಿರಲಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!