
ಬ್ಯೂನಸ್ ಐರಿಸ್(ಅ.16): ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಇಲ್ಲಿ ನಡೆಯುತ್ತಿರುವ ಕಿರಿಯರ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿವೆ. ಫೈನಲ್‌ನಲ್ಲಿ ಎಡವಿದರೂ ಎರಡೂ ತಂಡಗಳು ಇತಿಹಾಸ ರಚಿಸಿವೆ. ಕಿರಿಯರ ಒಲಿಂಪಿಕ್ಸ್ ಹಾಕಿ-ಫೈವ್ಸ್‌ನಲ್ಲಿ ಭಾರತ ತಂಡಗಳಿಗೆ ಇದು ಚೊಚ್ಚಲ ಪದಕ.
ಪುರುಷರ ಫೈನಲ್‌ನಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 2-4 ಗೋಲುಗಳಲ್ಲಿ ಸೋಲುಂಡರೆ, ಮಹಿಳಾ ತಂಡ 1-3 ಗೋಲುಗಳಲ್ಲಿ ಅರ್ಜೆಂಟೀನಾ ವಿರುದ್ಧ
ಪರಾಭವಗೊಂಡಿತು. ಮಲೇಷ್ಯಾ ಪುರುಷರ ತಂಡ ಹಾಗೂ ಅರ್ಜೆಂಟೀನಾ ಮಹಿಳಾ ತಂಡಗಳಿಗೂ ಕೂಟದಲ್ಲಿ ಇದು ಮೊದಲ ಚಿನ್ನದ ಪದಕ.
ಪುರುಷರ ಚಿನ್ನದ ಪದಕದ ಪಂದ್ಯದಲ್ಲಿ ಭಾರತಕ್ಕೆ ನಾಯಕ ವಿವೇಕ್ ಪ್ರಸಾದ್ 2ನೇ ನಿಮಿಷದಲ್ಲೇ ಮುನ್ನಡೆ ಒದಗಿಸಿದರು. ಆದರೆ 4ನೇ ನಿಮಿಷದಲ್ಲಿ ಮಲೇಷ್ಯಾ
ಸಮಬಲ ಸಾಧಿಸಿತು. 5ನೇ ನಿಮಿಷದಲ್ಲಿ ವಿವೇಕ್ 2ನೇ ಗೋಲು ಬಾರಿಸಿ ಮೊದಲಾರ್ಧದ ಅಂತ್ಯಕ್ಕೆ ಮುನ್ನಡೆಯನ್ನು2-1 ಕ್ಕೇರಿಸಿದರು.
ದ್ವಿತೀಯಾರ್ಧದಲ್ಲಿ 3 ಗೋಲು ಬಾರಿಸಿ ಮಲೇಷ್ಯಾ, ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿತು. ಮಹಿಳೆಯರ ಫೈನಲ್‌ನಲ್ಲಿ ಭಾರತ 49 ಸೆಕೆಂಡ್‌ಗಳಲ್ಲೇ ತನ್ನ ಮೊದಲ ಗೋಲು ಬಾರಿಸಿದರು. ಮುಮ್ತಾಜ್ ಖಾನ್ ಮೊದಲ ಗೋಲು ಗಳಿಸಿದರು. ಆರಂಭಿಕ ಗೋಲಿನಿಂದ ಆಘಾತಕ್ಕೊಳಗಾದರೂ ಅರ್ಜೆಂಟೀನಾ ಪುಟಿದೆದ್ದು ಜಯವನ್ನು ತನ್ನದಾಗಿಸಿಕೊಂಡಿತು. ಕೂಟದಲ್ಲಿ ಭಾರತ 4 ಚಿನ್ನ, 10 ಬೆಳ್ಳಿ (ಒಟ್ಟು 14) ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.