
ಲಂಡನ್(ಜು.14): 2012ರ ಪ್ಯಾರಲಿಂಪಿಕ್ಸ್ ನಂತರ ಮತ್ತೊಂದು ಮಹಾ ಕ್ರೀಡಾಕೂಟದ ಆತಿಥ್ಯಕ್ಕೆ ಲಂಡನ್ ಸಜ್ಜಾಗಿದೆ. ಇಂದಿನಿಂದ 8ನೇ ಆವೃತ್ತಿಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್ ಆರಂಭಗೊಳ್ಳುತ್ತಿದೆ.
1960ರಲ್ಲಿ ರೋಮ್'ನಲ್ಲಿ ಮೊದಲ ಬಾರಿಗೆ ಪ್ಯಾರಾ ಗೇಮ್ಸ್ ಆಯೋಜನೆಗೊಂಡಿತ್ತು. 1994ರಲ್ಲಿನ ಬರ್ಲಿನ್ ಗೇಮ್ಸ್ ವೇಳೆಗೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್ ಎಂದು ಮರುನಾಮಕರಣ ಮಾಡಲಾಯಿತು.
ಮರು ನಾಮಕರಣದ ಬಳಿಕ ಮೊದಲ ಬಾರಿಗೆ ಲಂಡನ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತಿದೆ. ಈ ಬಾರಿ ಒಟ್ಟು 100 ದೇಶಗಳ ಸುಮಾರು 1300ಕ್ಕೂ ಹೆಚ್ಚು ಅಥ್ಲೀಟ್'ಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು 49 ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ 213 ಪದಕಗಳಿಗಾಗಿ ಅಥ್ಲೀಟ್'ಗಳು ಹೋರಾಟ ನಡೆಸಲಿದ್ದಾರೆ.
ಭಾರತದಿಂದ ಒಟ್ಟು 30 ಅಥ್ಲೀಟ್'ಗಳು ಸ್ಪರ್ಧಿಸುತ್ತಿದ್ದು, ರಿಯೊ ಒಲಿಂಪಿಕ್ಸ್ ಪದಕ ವಿಜೇತರಾದ ವರುಣ್ ಭಾಟಿ, ದೀಪಾ ಮಲಿಕ್, ಜಾವಲಿನ್ ಥ್ರೋ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಾಳು ಪ್ರಸನ್ನ ಕುಮಾರ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.