ಬಿಜೆಪಿ ಅಭ್ಯರ್ಥಿಯಾಗಿ ವಿಶ್ವಕಪ್ ಹೀರೋ ಕಣಕ್ಕೆ?

By Web DeskFirst Published Mar 13, 2019, 5:12 PM IST
Highlights

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸ್ಟಾರ್ ಆಟಗಾರ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

ನವದೆಹಲಿ[ಮಾ.13]: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತಿ ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 

ಈ ಕ್ಷೇತ್ರವನ್ನು ಬಿಜೆಪಿಯ ಮೀನಾಕ್ಷಿ ಲೇಖಿ ಈಗ ಪ್ರತಿನಿಧಿಸುತ್ತಿದ್ದು, ಅವರು ದೆಹಲಿಯ ಮತ್ತೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಗೌತಮ ಗಂಭೀರ್ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

37 ವರ್ಷದ ಗೌತಮ್ ಗಂಭೀರ್ ಕಳೆದ ವರ್ಷವಷ್ಟೇ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರು. ಭಾರತದ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗೌತಮ್ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. ಡೆಲ್ಲಿ ಚುನಾವಣೆಯು ಮೇ 12ರಂದು ನಡೆಯಲಿದ್ದು, ಮೇ 23ರಂದು ಅಭ್ಯರ್ಥಿಗಳ ಫಲಿತಾಂಶ ಹೊರಬೀಳಲಿದೆ. 

click me!