ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈ-ಕೆಕೆಆರ್ ಸಜ್ಜು

Published : May 09, 2018, 05:10 PM IST
ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈ-ಕೆಕೆಆರ್ ಸಜ್ಜು

ಸಾರಾಂಶ

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌'ಗೆ ಕೋಲ್ಕತಾ ನೈಟ್‌'ರೈಡರ್ಸ್‌ ತನ್ನ ತವರು ಮೈದಾನ ಈಡನ್ ಗಾರ್ಡನ್ಸ್‌'ನಲ್ಲಿಂದು ಆತಿಥ್ಯ ವಹಿಸಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ.

ಕೋಲ್ಕತಾ[ಮೇ.09]: ಐಪಿಎಲ್ 11ನೇ ಆವೃತ್ತಿ ರೋಚಕ ಘಟ್ಟ ತಲುಪಿದ್ದು, ಪ್ಲೇ-ಆಫ್‌'ನಲ್ಲಿ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಸನ್‌'ರೈಸರ್ಸ್‌, ಚೆನ್ನೈ ಹಾಗೂ ಪಂಜಾಬ್ ಅಂಕಪಟ್ಟಿಯಲ್ಲಿ ಮೊದಲ 3 ಸ್ಥಾನಗಳನ್ನು ಪಡೆ ಯುವ ನೆಚ್ಚಿನ ತಂಡಗಳೆನಿಸಿದ್ದು, 4ನೇ ಸ್ಥಾನ ಯಾರ ಪಾಲಾಗಿದೆ ಎನ್ನುವ ಕುತೂಹಲ ಹುಟ್ಟಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌'ಗೆ ಕೋಲ್ಕತಾ ನೈಟ್‌'ರೈಡರ್ಸ್‌ ತನ್ನ ತವರು ಮೈದಾನ ಈಡನ್ ಗಾರ್ಡನ್ಸ್‌'ನಲ್ಲಿಂದು ಆತಿಥ್ಯ ವಹಿಸಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ. ಎರಡೂ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಇನ್ನುಳಿದ 4ರಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಮುಂಬೈ ಸದ್ಯ 4 ಜಯ ಕಂಡಿದ್ದರೆ, ಕೋಲ್ಕತಾ 5ರಲ್ಲಿ ಗೆದ್ದಿದೆ. ಅಗ್ರ 3 ಸ್ಥಾನಗಳಲ್ಲಿರುವ ತಂಡಗಳು 18ಕ್ಕೂ ಹೆಚ್ಚು ಅಂಕ ಗಳಿಸುವ ಸಾಧ್ಯತೆ ಇದ್ದು, 4ನೇ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುವ ನಿರೀಕ್ಷೆ ಇದೆ. 
ಕೆಕೆಆರ್ ವಿರುದ್ಧ ಮುಂಬೈ ಈ ವರೆಗೂ ಆಡಿರುವ 22 ಐಪಿಎಲ್ ಪಂದ್ಯಗಳಲ್ಲಿ 17ರಲ್ಲಿ ಗೆದ್ದಿದ್ದು, ಮತ್ತೊಮ್ಮೆ ಪ್ರಾಬಲ್ಯ ಮುಂದುವರಿಸಲು ಎದುರು ನೋಡುತ್ತಿದೆ. 
ಸಂಭಾವ್ಯ ತಂಡ:
KKR: ಲಿನ್, ನರೈನ್, ನಿತೀಶ್ ರಾಣಾ, ಶುಭ್‌'ಮನ್, ದಿನೇಶ್ ಕಾರ್ತಿಕ್, (ನಾಯಕ), ರಸೆಲ್, ಚಾವ್ಲಾ, ಜಾನ್ಸನ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ಸೂರ್ಯಕುಮಾರ್ ಯಾದವ್.
MI: ಲೆವಿಸ್, ಇಶಾನ್, ರೋಹಿತ್(ನಾಯಕ), ಹಾರ್ದಿಕ್, ಕೃನಾಲ್, ಡುಮಿನಿ, ಕಟ್ಟಿಂಗ್, ಮೆಕ್ಲೆನಾಘನ್, ಮರ್ಕಂಡೆ,ಜಸ್‌'ಪ್ರೀತ್ ಬುಮ್ರಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ
ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ