
ವಿಶಾಖಪಟ್ಟಣ(ಡಿ.17): ಐಪಿಎಲ್ ಇತಿಹಾಸದಲ್ಲಿಯೇ ಬಿಸಿಸಿಐ ಮಹತ್ತರ ಬದಲಾವಣೆಯೊಂದು ಮಾಡಲು ಮುಂದಾಗಿದೆ.
ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್'ಎಸ್) ಬಳಕೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ ಬಿಸಿಸಿಐ, ಇದೀಗ ತನ್ನ ನಿಲುವನ್ನು ಬದಲಿಸಿದಂತಿದೆ. ಐಪಿಎಲ್'ನ 11ನೇ ಆವೃತ್ತಿಯಲ್ಲಿ ಡಿಆರ್'ಎಸ್ ಅಳವಡಿಸುವ ಸಾಧ್ಯತೆ ದಟ್ಟವಾಗಿದೆ.
ವಿಶಾಖಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಭಾರತದ 12 ದೇಸಿ ಅಂಪೈರ್'ಗಳಿಗೆ ಡಿಆರ್‌ಎಸ್ ಕಾರ್ಯಗಾರ ನಡೆಸುತ್ತಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4ನೇ ಅಂಪೈರ್'ಗಳಾಗಿ ಕಾರ್ಯ ನಿರ್ವಹಿಸುವ ದೇಸಿ ಅಂಪೈರ್‌ಗಳು, ಐಪಿಎಲ್'ನಲ್ಲಿ ಮೈದಾನದ ಅಂಪೈರ್'ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಐಸಿಸಿ ಅಂಪೈರ್‌ಗಳ ಕೋಚ್ ಡೆನ್ನಿಸ್ ಬರ್ನ್ಸ್ ಹಾಗೂ ಅಂಪೈರ್ ಪಾಲ್ ರೈಫಲ್, ಶನಿವಾರ ಭಾರತದ ಕೋಚ್'ಗಳಿಗೆ ಡಿಆರ್'ಎಸ್ ಬಳಕೆ ಬಗ್ಗೆ ಮಾರ್ಗದರ್ಶನ ನೀಡಿದರು.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಐಪಿಎಲ್‌ನಲ್ಲಿ ಡಿಆರ್'ಎಸ್ ಅಳವಡಿಸುವ ದೃಷ್ಟಿಯಿಂದಲೇ ಈ ಕಾರ್ಯಗಾರ ಆಯೋಜಿಸಲಾಗಿದೆ. ತಂತ್ರಜ್ಞಾನ ಬಳಕೆಯಿಂದ ಕ್ರಿಕೆಟ್ ಆಟದ ಸೊಬಗನ್ನು ಹೆಚ್ಚಿಸಲು ಸಾಧ್ಯ. ತಂತ್ರಜ್ಞಾನದಲ್ಲಿ ಡಿಆರ್'ಎಸ್ ಸಹ ಒಂದು, ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.