
ಹೈದರಾಬಾದ್ (ಅ.31) ಟೆನಿಸ್ ಪಟು ಸಾನಿಯಾ ಮಿರ್ಜಾ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ವೈಯುಕ್ತಿಕ ವಿಚಾರ, ಪ್ರೊಫೆಶನಲ್ ಲೈಫ್ ಕುರಿತ ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ಮಗ ಹೇಳಿದ ಗುಟ್ಟೊಂದನ್ನು ಬಹಿರಂಗಪಡಿಸಿದ್ದಾರೆ. ಮಗ ಕಿವಿಯಲ್ಲಿ ಹೇಳಿದ ಗುಟ್ಟು ಕೇಳಿ ಸಾನಿಯಾ ಮಿರ್ಜಾ ತಲೆ ಚಚ್ಚಿಕೊಂಡಿದ್ದಾರೆ. ಸೀಕ್ರೆಟ್ ಒಂದನ್ನು ಹೇಳುತ್ತೇನೆ ಎಂದು ಸಾನಿಯಾ ಕಿವಿಯಲ್ಲಿ ಏನನ್ನೋ ಹೇಳಿದ್ದಾನೆ. ಆದರೆ ಈ ಗುಟ್ಟು ಕೇಳಿಸಿಕೊಂಡ ಸಾನಿಯಾ ತಲೆನೋವು ಹೆಚ್ಚಾಗಿದೆ. ಇದೇ ವೇಳೆ ಮಗನ ಗುಟ್ಟಿನ ರಹಸ್ಯವನ್ನು ಸಾನಿಯಾ ಬಹಿರಂಗಪಡಿಸಿದ್ದಾರೆ.
ಮಗನ ಜೊತೆ ಕಾಲ ಕಳೆಯುತ್ತಿರುವ ವಿಡಿಯೋ ಒಂದನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಾನಿಯಾ ಮಿರ್ಜಾ ತನ್ನ ಪುತ್ರ ಹೇಳುವ ಗುಟ್ಟಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ನನ್ನ ಮಗ ಹೇಳುವ ಸೀಕ್ರೆಟ್ ಎಂದಿರುವ ಸಾನಿಯಾ ಮಿರ್ಜಾ, ಆತ ಕಿವಿಯಲ್ಲಿ ಹೇಳುವಾಗ ಅದರಲ್ಲಿ ಶೇಕಡಾ 50ರಷ್ಟು ಗಾಳಿ ಇರುತ್ತೆ. ಇನ್ನು ಶೇಕಡಾ 49ರಷ್ಟು ಎಂಜಲು ಕಿವಿಗೆ ಬಂದಿರುತ್ತೆ. ಸೀಕ್ರೆಟ್ ಮಾಹಿತಿ ಕೇವಲ ಒಂದು ಪರ್ಸೆಂಟ್ ಮಾತ್ರ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಹಾಗೂ ಮಗನ ಪ್ರೀತಿಯ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಪ್ರಮುಖವಾಗಿ ಪೋಷಕರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಾನಿಯಾ ಮಿರ್ಜಾ ಹೇಳಿದ್ದು ಸತ್ಯ. ಮಕ್ಕಳು ಗುಟ್ಟು ಹೇಳುವಾಗ ಈ ಅನುಭವವಾಗಿದೆ ಎಂದಿದ್ದಾರೆ. ಇದೇ ವೇಳೆ ಹಲವರು ಕಿವಿಮಾತುಗಳನ್ನು ಹೇಳಿದ್ದಾರೆ. ಮಕ್ಕಳು ಗುಟ್ಟು ಹೇಳಲು ಬರುವಾಗ ನಿರಾಸೆ ಮಾಡಬೇಡಿ, ಅವರ ಗುಟ್ಟನ್ನು ಆಲಿಸಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಈ ರೀತಿಯ ಪ್ರೀತಿಯ ಮಾತುಕತೆ, ಆಟಗಳು ಸಂಬಂಧಕ್ಕೆ ಮೌಲ್ಯ ನೀಡುತ್ತದೆ. ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ. ಈ ತಾಯಂದಿರ ಅನುಭವದ ಮುದ್ದಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇತ್ತೀಚೆಗೆ ಸಾನಿಯಾ ಮಿರ್ಜಾ ಮಸೀದಿ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ್ದಾರೆ ಅನ್ನೋ ಮಾಹಿತಿ ಹರಿದಾಡಿತ್ತು. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ಸಾನಿಯಾ ಮಿರ್ಜಾ ತಂದೆ ಸ್ಪಷ್ಟಡಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ, ಈ ವರದಿಗಳು ಆಧಾರರಹಿತ ಎಂದಿದ್ದಾರೆ.
ಅಲ್ಲದೆ, ಭಾರತದ ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಸಾನಿಯಾ ಇರುವಂತೆ ವೈರಲ್ ಆಗಿರುವ ಫೋಟೋ ಸಂಪೂರ್ಣವಾಗಿ ಎಐ (AI Generated) ಮೂಲಕ ಸೃಷ್ಟಿಸಿರುವ ನಕಲಿ ಚಿತ್ರವಾಗಿದೆ ಎಂದು ಇಮ್ರಾನ್ ಮಿರ್ಜಾ ತಿಳಿಸಿದ್ದಾರೆ. ಸಾನಿಯಾ ತಮ್ಮ ಖಾಸಗಿ ಮತ್ತು ಸಮಾಜಸೇವೆಯನ್ನು ಪ್ರಚಾರಕ್ಕೋಸ್ಕರ ಬಳಸಿಕೊಳ್ಳುವುದಿಲ್ಲ, ಅಧಿಕೃತವಲ್ಲದ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದು, ಸಾನಿಯಾ ಕೂಡ ಈ ಸ್ಪಷ್ಟನೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.