
ಮುಂಬೈ(ಜೂ.02): ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗಾಗಿ ಆಸ್ಪ್ರೇಲಿಯಾದ ಟಾಮ್ ಮೂಡಿ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಸಾಕಷ್ಟುಮಾಜಿ ಕ್ರಿಕೆಟಿಗರು ರೇಸ್‌ನಲ್ಲಿದ್ದಾರೆ. ಇತ್ತೀಚೇಗಷ್ಟೇ ಬಿಸಿಸಿಐ ತಂಡದ ಪ್ರಮುಖ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಸದ್ಯದ ಕೋಚ್ ಅನಿಲ್ ಕುಂಬ್ಳೆ ಅವರ 1 ವರ್ಷದ ಅವಧಿ ಚಾಂಪಿಯನ್ಸ್ ಟ್ರೋಫಿ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್‌ಗಾಗಿ ಹುಡುಕಾಟ ನಡೆಸಿದೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಭಾರತ ಎ ತಂಡದ ಕೋಚ್ ಲಾಲ್ ಚಾಂದ್ ರಜಪೂತ್, ಆಸ್ಪ್ರೇಲಿಯಾದ ಟಾಮ್ ಮೂಡಿ ಮತ್ತು ಇಂಗ್ಲೆಂಡ್‌ನ ರಿಚರ್ಡ್ ಪೇಬಸ್ ಪ್ರಮುಖರಾಗಿದ್ದಾರೆ. ಇದರಲ್ಲಿ ಆಸೀಸ್ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಅವರ ಮೇಲೆ ಬಿಸಿಸಿಐ ಹೆಚ್ಚಿನ ಒಲವು ತೋರಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಸೆಹ್ವಾಗ್ ಅವರಿಗಿದೆ. ನೂತನ ಕೋಚ್ ಆಗಿ ನೇಮಕವಾಗುವವರು ಮುಂದಿನ 2019 ರ ವಿಶ್ವಕಪ್ ವರೆಗೂ ಮುಂದುವರೆಯಲಿದ್ದಾರೆ.
ಕೋಚ್ ಹುದ್ದೆಗೆ ನಾನು ಅರ್ಹ: ದೊಡ್ಡ ಗಣೇಶ್
ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ನಾನು ಅರ್ಹನಾಗಿದ್ದೇನೆ ಎಂದು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕನ್ನಡಪ್ರಭಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ಸೇರಿದಂತೆ ಸಾಕಷ್ಟುಟೂರ್ನಿಗಳಲ್ಲಿ ರಾಜ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದೇನೆ. ನಾನು ಕೋಚ್ ಆಗಿ ಆಯ್ಕೆಯಾದರೆ ಭಾರತ ತಂಡವನ್ನು ವಿಶ್ವ ದರ್ಜೆಯಲ್ಲಿ ಮತ್ತಷ್ಟುಪ್ರಬಲಗೊಳಿಸುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇನೆ. ಕೋಚ್ ಆಗಿರುವವರು ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಆಗ ಮಾತ್ರ ತಂಡದಿಂದ ಉತ್ತಮ ಫಲಿತಾಂಶ ಹೊರಬರಲು ಸಾಧ್ಯವಾಗಲಿದೆ ಎಂದು ಗಣೇಶ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.