ರಾಥೋಡ್ ಒತ್ತಾಯಕ್ಕೆ ನಾಡಾಗೆ ಸೇರ್ಪಡೆಗೊಂಡೆ: ವೀರೂ

By Web DeskFirst Published Aug 1, 2018, 12:53 PM IST
Highlights

2 ದಿನಗಳ ಹಿಂದೆಯಷ್ಟೇ ಸೆಹ್ವಾಗ್ ನಾಡಾ ಸಮಿತಿಯ ಸಭೆಗಳಿಗೆ ಒಮ್ಮೆಯೂ ಹಾಜರಾಗಿಲ್ಲ ಎನ್ನುವ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವೀರೂ, ‘ನಾನು ಬಿಸಿಸಿಐ ಜತೆ ಇದ್ದಿದ್ದರಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು ಕಡಿಮೆ. ಡೋಪಿಂಗ್ ಕುರಿತು ನನಗೆ ಹೆಚ್ಚೇನು ತಿಳಿದಿಲ್ಲ. ಅದನ್ನು ಹೇಳಿಕೊಳ್ಳಲು ನನಗೆ ಹಿಂಜರಿಕೆಯೂ ಇಲ್ಲ. ನಾಡಾ ಸಮಿತಿಯಲ್ಲಿ ಕ್ರಿಕೆಟರ್‌ಗಳಿಗಿಂತ ಒಲಿಂಪಿಯನ್‌ಗಳು ಇದ್ದರೆ ಸೂಕ್ತ’ ಎಂದಿದ್ದಾರೆ.

ನವದೆಹಲಿ(ಆ.01]: ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ‘ನಾಡಾ ಸಮಿತಿ ಸದಸ್ಯನಾಗಲು ಇಷ್ಟವಿರಲಿಲ್ಲ. ಆದರೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಒತ್ತಾಯಿಸಿದ್ದರಿಂದ ಸೇರ್ಪಡೆಗೊಂಡೆ’ ಎಂದು ಹೇಳಿದ್ದಾರೆ. 

2 ದಿನಗಳ ಹಿಂದೆಯಷ್ಟೇ ಸೆಹ್ವಾಗ್ ನಾಡಾ ಸಮಿತಿಯ ಸಭೆಗಳಿಗೆ ಒಮ್ಮೆಯೂ ಹಾಜರಾಗಿಲ್ಲ ಎನ್ನುವ ವರದಿ ಪ್ರಕಟಗೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವೀರೂ, ‘ನಾನು ಬಿಸಿಸಿಐ ಜತೆ ಇದ್ದಿದ್ದರಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು ಕಡಿಮೆ. ಡೋಪಿಂಗ್ ಕುರಿತು ನನಗೆ ಹೆಚ್ಚೇನು ತಿಳಿದಿಲ್ಲ. ಅದನ್ನು ಹೇಳಿಕೊಳ್ಳಲು ನನಗೆ ಹಿಂಜರಿಕೆಯೂ ಇಲ್ಲ. ನಾಡಾ ಸಮಿತಿಯಲ್ಲಿ ಕ್ರಿಕೆಟರ್‌ಗಳಿಗಿಂತ ಒಲಿಂಪಿಯನ್‌ಗಳು ಇದ್ದರೆ ಸೂಕ್ತ’ ಎಂದಿದ್ದಾರೆ.

ನನಗೆ ಮೊದಲೆರಡು ನಾಡಾ ಸಮಿತಿ ಸಭೆ ನಡೆಯುವ ಬಗ್ಗೆ ಮಾಹಿತಿ ಇರಲಿಲ್ಲ. ಇನ್ನು ಮೂರನೇ ಸಭೆಯ ಬಗ್ಗೆ ಮಾಹಿತಿಯಿತ್ತು. ಆದರೆ ನನ್ನ ಮಗನ ಆರೋಗ್ಯದ ಸಮಸ್ಯೆ ಇದ್ದಿದ್ದರಿಂದ ಆ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಸೆಹ್ವಾಗ್ ಸ್ಪಷ್ಟನೆ ನೀಡಿದ್ದಾರೆ.

click me!