
ಮೊಹಾಲಿ(ಏ.07): ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾವನ್ನು ಓರ್ವ ಬೌಲರ್ ಮುನ್ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ KXIP ಪಂಜಾಬ್ ನಾಳೆ ಕಣಕ್ಕಿಳಿಯುತ್ತಿದ್ದು, ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಹ್ವಾಗ್, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಂ KXIP ತಂಡದ ನಾಯಕತ್ವ ವಹಿಸಿ ನೀಡಿದ್ದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ.
ನಾನು ಬೌಲರ್'ಗಳು ಕ್ಯಾಪ್ಟನ್ ಆಗಿರುವ ತಂಡದ ಬಹುದೊಡ್ಡ ಅಭಿಮಾನಿ. ನಾನು ಕಪಿಲ್ ದೇವ್, ಇಮ್ರಾನ್ ಖಾನ್, ವಾಸೀಂ ಅಕ್ರಂರಂತವರು ತಂಡವನ್ನು ಮುನ್ನಡೆಸಿದ್ದನ್ನು ನೋಡಿದ್ದೇನೆ. ಸಾಮಾನ್ಯವಾಗಿ ಭಾರತದಲ್ಲಿ ಬೌಲರ್'ಗಳು ಟೀಂ ಇಂಡಿಯಾವನ್ನು ಮುನ್ನಡೆಸಿದ್ದು ಕಡಿಮೆ. ಆದರೆ ವಿರಾಟ್ ಕೊಹ್ಲಿ ಬಳಿಕ ಕೆಲ ಬೌಲರ್'ಗಳು ಭಾರತ ತಂಡದ ನಾಯಕರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಇದೇವೇಳೆ ಕಿಂಗ್ಸ್'ಇಲೆವನ್ ಪಂಜಾಬ್ ತಂಡದ ಬಗ್ಗೆ ಮಾತನಾಡಿದ ಸೆಹ್ವಾಗ್, ಕಳೆದ 10 ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದೇಶಿ ಹಾಗೂ ವಿದೇಶಿ ಆಟಗಾರರನ್ನೊಳಗೊಂಡ ಸಮತೋಲಿತ ತಂಡವಾಗಿ ರೂಪುಗೊಂಡಿದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.