
ವಿರಾಟ್ ಕೊಹ್ಲಿ ಫಾರ್ಮ್'ಗೆ ಮರಳಿದ್ದು ಹಲವು ರೀತಿಯಿಂದ ಭಾರತಕ್ಕೆ ವರವಾಗಿದೆ. ಇಂದೋರ್'ನಲ್ಲಿ ದ್ವಿಶತಕ ಸಿಡಿಸುವುದರೊಂದಿಗೆ ವಿರಾಟ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಬ್ಬ ಯಶಸ್ವಿ ಪ್ಲೇಯರ್ ಮತ್ತು ಯಶಸ್ವಿ ನಾಯಕನ್ನಾಗಿ ಕೊಹ್ಲಿ ಮಿನುಗುತ್ತಿದ್ದಾರೆ. ವಿರಾಟ್-ರಹಾನೆ ಜೋಡಿ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದೆ.
ಟೆಸ್ಟ್'ನಲ್ಲಿ ವಿರಾಟ್ ಗರಿಷ್ಠ ಸ್ಕೋರ್
ವಿರಾಟ್ ಕೊಹ್ಲಿ ಇದುವರೆಗೂ ತವರಿನಲ್ಲಿ ಹೇಳಿಕೊಳ್ಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಅವರು ಶತಕ ದಾಖಲಿಸಿದ್ರು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದರು. ಆದರೆ ಈ ಸಲ ಅಂತು ಇಂತೂ ಕಾದು ಒಂದು ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. 211 ರನ್ಗಳಿಸುವ ಮೂಲಕ ತಮ್ಮ ಜೀವನದ ಗರಿಷ್ಠ ಸ್ಕೋರ್ ದಾಖಲಿಸಿದರು.
ಎರಡನೇ ದಿನದ ಆರಂಭದಿಂದಲೂ ವಿರಾಟ್ ಸಕರಾತ್ಮಕವಾಗಿ ಆಟವಾಡಿದರು. ಕಿವೀಸ್'ನ ಎಲ್ಲ ಬೌಲರ್ಗಳಿಗೂ ಸರಾಗವಾಗಿ ಆಡಿದ ವಿರಾಟ್, ಎಲ್ಲರ ವಿರುದ್ಧ ಬೌಂಡರಿ ಸಿಡಿಸುವ ಮೂಲಕ ಇನ್ನಿಂಗ್ಸ್ ಕಟ್ಟುತ್ತ ಸಾಗಿದ್ದರು.
ಇದುವರೆಗೂ ಭಾರತ ಯಾವ ಟೆಸ್ಟ್ ನಾಯಕರು ಎರಡು ಸಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿರಲಿಲ್ಲ. ಇಂಧೋರ್ನಲ್ಲಿ ವಿರಾಟ್ ಆಕರ್ಷಕ ದ್ವಿಶತಕ ದಾಖಲಿಸಿದರು. ನಾಯಕನ್ನಾಗಿ ವಿರಾಟ್ ದಾಖಲಿಸಿದ ಎರಡನೇ ದ್ವಿಶತಕ ಇದಾಗಿತ್ತು. ಅದ್ಭುತ ಆಟದ ಮೂಲಕ ವಿರಾಟ್ ಎಲ್ಲರ ಗಮನಸೆಳೆದರು.
ನಾಯಕನ್ನಾಗಿ ವಿರಾಟ್ ಅಬ್ಬರ
ನಾಯಕನ್ನಾಗಿರುವ ವಿರಾಟ್ ಕೊಹ್ಲಿ ತವರಿನಲ್ಲಿ ಒಟ್ಟು ನಾಲ್ಕು ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರನ್ನಾಗಿರುವ ವಿರಾಟ್ ನಾಯಕನ್ನಾಗಿ 6 ಶತಕ ಸಿಡಿಸಿದ್ದಾರೆ. ನಾಯಕನ್ನಾಗಿ ಇಷ್ಟು ಕಡಿಮೆ ಅವಧಿಯಲ್ಲಿ 6 ಶತಕ ಸಿಡಿಸಿದ ಹಿರಿಮೆ ಕೂಡ ಅವರಿಗೆ ಸಲ್ಲುತ್ತದೆ. ಇನ್ನೂ ನಾಯಕನ್ನಾಗಿಯು ವಿರಾಟ್ ಸತತ ಗೆಲುವಿನ ಲಯದಲ್ಲಿದ್ದು, ದಿನದಿಂದ ದಿನಕ್ಕೆ ತಮ್ಮ ದಾಖಲೆ ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ..
ಗಮನಸೆಳೆದ ವಿರಾಟ್ ಆಟ
ನ್ಯೂಜಿಲೆಂಡ್'ನ ಎಲ್ಲ ಬೌಲರ್'ಗಳಿಗೂ ದಿಟ್ಟ ಉತ್ತರ ನೀಡಿದ ವಿರಾಟ್ ಆಟ ಹೆಚ್ಚು ಗಮನಸೆಳೆಯಿತು. ತಮ್ಮ ಟ್ರೇಡ್ಮಾರ್ಕ್ ಶಾಟ್ಗಳಿಂದದ ಗಮನಸೆಳೆದ ಕೊಹ್ಲಿ ತಮ್ಮ ಜೀವನದ ಸರ್ವಶ್ರೇಷ್ಠ 211ರನ್ಗಳಿಸಿ ಹೊರನಡೆದರು. ನಾಲ್ಕನೇ ವಿಕೆಟ್'ಗೆ ಈ ಜೋಡಿ 365ರನ್ಗಳ ಜೊತೆಯಾಟವಾಡುವ ಮೂಲಕ ಗಮನಸೆಳೆಯಿತು..
ವಿರಾಟ್ ದ್ವಿಶತಕ ಇಂತಿದೆ. ಒಟ್ಟು 366 ಬಾಲ್ ಆಡಿರುವ ವಿರಾಟ್ 20 ಬೌಂಡರಿಗಳ ಸಹಾಯದಿಂದ, 57.65ರ ಸ್ಟ್ರೈಕ್ರೇಟ್ನಲ್ಲಿ 211ರನ್ಗಳಿಸಿದ್ದಾರೆ.
ಸೂಕ್ತ ಸಮಯಕ್ಕೆ ಫಾರ್ಮ್ ಕಂಡುಕೊಂಡ ವಿರಾಟ್ ಎರಡನೇ ದಿನವೂ ಆಕರ್ಷಕ 108ರನ್ಗಳನ್ನು ಸೇರಿಸುವ ಮೂಲಕ 211ರನ್ಗಳಿಸಿ ಮಿಂಚಿದ್ರು. ನಾಯಕನ್ನಾಗಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ವಿರಾಟ್, ತವರಿನಲ್ಲಿ ನಡೆಯುವ ಸಮರೋಪಾದಿ ಟೆಸ್ಟ್ ಸರಣಿಯಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.