ವಿಶೇಷ ಅಭಿಮಾನಿ ಭೇಟಿಯಾದ ಕೊಹ್ಲಿ, ಧೋನಿ!

Published : Nov 03, 2018, 07:18 PM IST
ವಿಶೇಷ ಅಭಿಮಾನಿ ಭೇಟಿಯಾದ ಕೊಹ್ಲಿ, ಧೋನಿ!

ಸಾರಾಂಶ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅದೆಂತ ಸ್ಟಾರ್ ಕ್ರಿಕೆಟಿಗರು ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವರ ಸರಳತೆ ಕುರಿತು ಹೇಳಲೇಬೇಕು.  ತಮ್ಮನ್ನ ಭೇಟಿಯಾಗಲು ಕಾಯುತ್ತಿದ್ದ ವಿಶೇಷ ಅಭಿಮಾನಿಯ ಸಂತೋಷವನ್ನ ಇಮ್ಮಡಿಗೊಳಿಸುವಲ್ಲಿ ಈ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ. 

ತಿರುವನಂತಪುರಂ(ನ.03): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್ ಧೋನಿ ವಿಶೇಷ ಅಭಿಮಾನಿಯನ್ನ ಭೇಟಿಯಾಗಿ ಎಲ್ಲರ ಮೆಚ್ಚುಗೆಗೆ  ಪಾತ್ರರಾಗಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗರ ಜೊತೆ ಮಾತುಕತೆ ನಡೆಸಿದ ಕೇರಳದ ಈ ಪುಟ್ಟ ಅಭಿಮಾನಿಯ ಸಂತಸಕ್ಕೆ ಪಾರವೆ ಇಲ್ಲ. 

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿಯನ್ನ ಭೇಟಿಯಾಗಲು ಈ ವಿಶೇಷ ಅಭಿಮಾನಿ ಕಾಯುತ್ತಿದ್ದ. ಇದನ್ನ ಅರಿತ ಕೊಹ್ಲಿ ಹಾಗೂ ಧೋನಿ ಈ ಅಭಿಮಾನಿ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು. ಇಷ್ಟೇ ಅಲ್ಲ ಆಟೋಗ್ರಾಫ್ ನೀಡಿದರು.

ಕೊಹ್ಲಿ ಹಾಗೂ ಧೋನಿ ಕೈಕುಲಕಿದ ಈ ವಿಶೇಷ ಅಭಿಮಾನಿ ಖುಷಿ ಇಮ್ಮಡಿಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಾರ್ ಕ್ರಿಕೆಟಿಗರ ಸರಳತೆಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ: ಇಂದು ಅಧಿಕೃತ ಘೋಷಣೆ? ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?
ಕೊಹ್ಲಿ, ಶುಭಮನ್ ಗಿಲ್ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ವೈಭವ್ ಸೂರ್ಯವಂಶಿ!