ಪಂದ್ಯದ ವೇಳೆ ದುರ್ವರ್ತನೆ : ಕೊಹ್ಲಿಗೆ ಶೇ.25 ದಂಡ

By Suvarna Web deskFirst Published Jan 16, 2018, 3:20 PM IST
Highlights

ಆಟವಾಡುವಾಗ ವಿರುದ್ಧವಾದ ನಡವಳಿಕೆಯ ಕಾರಣ'ದಿಂದ ಅಂಪೈರ್'ಗಳಾದ ಮೈಖೇಲ್ ಗುಫ್ ಹಾಗೂ ಪೌಲ್ ರೈಫಲ್, ಮೂರನೇ ಅಂಪೈರ್ ರಿಚರ್ಡ್ ಕೀಟರ್'ಬರ್ಗ್ ಹಾಗೂ ನಾಲ್ಕನೆ ಅಂಪೈರ್ ಅಲಾಲಿದ್ದೀನ್ ಪಾಲೇಕರ್ ದಂಡ ವಿಧಿಸಿದ್ದಾರೆ.

ಸೆಂಚೂರಿಯನ್(ಜ.16): ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ದುರ್ವರ್ತನೆ ತೋರಿದ ಕಾರಣಕ್ಕಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ 2ನೇ ಟೆಸ್ಟ್'ನ 3ನೇ ದಿನದಂದು ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್'ನ 25ನೇ ಓವರ್ ಆಟ ನಡೆಯುತ್ತಿದ್ದಾಗ ತೇವಾಂಶ ಪಿಚ್'ನಿಂದ ಪಂದ್ಯ ಸ್ಥಗಿತಗೊಂಡಿತ್ತು. ಆಗ ಕೊಹ್ಲಿ ಅವರು ಆಕ್ರಮಣಕಾರಿ ರೀತಿಯಲ್ಲಿ ಚಂಡನ್ನು ನೆಲಕ್ಕೆ ಬಡಿದಿದ್ದರು.

ಈ ವರ್ತನೆಗಾಗಿ ಐಸಿಸಿಯ 2.1.1 ನಿಯಮ' ಆಟವಾಡುವಾಗ ವಿರುದ್ಧವಾದ ನಡವಳಿಕೆಯ ಕಾರಣ'ದಿಂದ ಅಂಪೈರ್'ಗಳಾದ ಮೈಖೇಲ್ ಗುಫ್ ಹಾಗೂ ಪೌಲ್ ರೈಫಲ್, ಮೂರನೇ ಅಂಪೈರ್ ರಿಚರ್ಡ್ ಕೀಟರ್'ಬರ್ಗ್ ಹಾಗೂ ನಾಲ್ಕನೆ ಅಂಪೈರ್ ಅಲಾಲಿದ್ದೀನ್ ಪಾಲೇಕರ್  ದಂಡ ವಿಧಿಸಿದ್ದಾರೆ.

click me!