ಐರ್ಲೆಂಡ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಜಿಮ್‌ನಲ್ಲಿ ಕಸರತ್ತು

Published : Jun 24, 2018, 06:12 PM IST
ಐರ್ಲೆಂಡ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಜಿಮ್‌ನಲ್ಲಿ ಕಸರತ್ತು

ಸಾರಾಂಶ

ಐರ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಪಂದ್ಯಕ್ಕಾಗಿ ಡಬ್ಲಿನ್‌ನಲ್ಲಿ ಬೀಡುಬಿಟ್ಟಿರುವ ಭಾರತ ತಂಡ ಜಿಮ್‌ನಲ್ಲಿ ಕಸರತ್ತು ಆರಂಭಿಸಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಜಿಮ್ ಸೆಶನ್ ಹೇಗಿದೆ. ಇಲ್ಲಿದೆ.

ಡಬ್ಲಿನ್(ಜೂ.24): ಇಂಗ್ಲೆಂಡ್ ವಿರುದ್ಧದ ಮಹತ್ವದ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧಧ 2 ಟಿ-ಟ್ವೆಂಟಿ ಪಂದ್ಯಕ್ಕಾಗಿ ಭಾರತ ಜಿಮ್‌ನಲ್ಲಿ ಕಸರತ್ತು ಆರಂಭಿಸಿದೆ. ಶುಕ್ರವಾರ ಐರ್ಲೆಂಡ್‌ನ ರಾಜಧಾನಿ ಡಬ್ಲಿನ್ ತಲುಪಿರುವ ಭಾರತ ತಂಡ, ಇದೀಗ ಅಭ್ಯಾಸ ಆರಂಭಿಸಿದೆ.

ನಾಯಕ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ಜಿಮ್ ಸೆಶನ್ ಬಳಿಕ ಮೈದಾನದಲ್ಲಿ ನೆಟ್ ಪ್ರಾಕ್ಟೀಸ್ ಮಾಡಿದ ಭಾರತ ತಂಡ, ಜೂನ್ 27, ಹಾಗೂ 29 ರಂದು ಐರ್ಲೆಂಡ್ ವಿರುದ್ಧ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ.

 

;

 

ಐರ್ಲೆಂಡ್ ವಿರುದ್ಧದ ಚುಟುಕು ಸರಣಿ ಬಳಿಕ ಭಾರತ ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧ 3 ಟಿ-ಟ್ವೆಂಟಿ, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಹೀಗಾಗಿ ಆಂಗ್ಲರ ವಿರುದ್ಧದ ಸರಣಿಗೆ ಪೂರ್ವಭಾವಿಯಾಗಿ ಐರ್ಲೆಂಡ್ ಪಂದ್ಯ ತಂಡಕ್ಕೆ ಸಹಕಾರಿಯಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?