
ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್ನಲ್ಲಿ ಭರ್ಜರಿ ಜಯವೇನೋ ದಾಖಲಿಸಿತು. ಆdre ಇದೇ ಪಂದ್ಯದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಹಾರ್ದಿಕ್ ಪಾಂಡ್ಯ ತಮ್ಮ ಆಲ್ರೌಂಡ್ ಆಟದಿಂದ ಎಲ್ಲರ ಗಮನ ಸೆಳುದ್ರು. ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸುವುದರೊಂದಿಗೆ ಒಂದು ವಿಕೆಟ್ ಅನ್ನೂ ಪಡೆಯೂವ ಮೂಲಕ ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಂಡ್ರು.
ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಆಟವಾಡಿ ಶಹಬಾಸ್ ಅನ್ನಿಸಿಕೊಂಡಿರೋದೇನೋ ಓಕೆ. ಆದ್ರೆ ಅವರನ್ನ ಒಂದೇ ಪಂದ್ಯಕ್ಕೆ ಹಟ್ಟಕ್ಕೆ ಹೇರಿಸೋದು ಎಷ್ಟು ಸರಿ..? ಆದ್ರೆ ಒಂದೇ ಟೆಸ್ಟ್ಗೆ ಹಾರ್ದಿಕ್ ಪಾಂಡ್ಯಗೆ ಕೊಡ್ತಿರೋ ಬಿಲ್ಡಪ್ ನಿಜಕ್ಕೂ ಅತಿ ಆಯ್ತು ಅನಿಸ್ತಿದೆ.
ಯುವ ಆಟಗಾರನನ್ನ ಹೊಗಳಿ ಅಟ್ಟಕ್ಕೇರಿಸಿದ ಕೊಹ್ಲಿ..!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ ಮಾತುಗಳನ್ನ. ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಬೆನ್ ಸ್ಟೋಕ್ಸ್ ಆಗ್ತಾರಂತೆ. ಹೀಗಂತ ಹೇಳುವ ಮೂಲಕ ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಕಣ್ಣು ಬಿಡುತ್ತಿರುವ ಹಾರ್ದಿಕ್ ಪಾಂಡ್ಯರನ್ನ ಹೊಗಳಿ ಅಟ್ಟಕ್ಕೆ ಹೇರಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಎಲ್ಲಿ..? ಇನ್ನೂ ಕೇವಲ ಒಂದೇಒಂದು ಪಂದ್ಯವನ್ನಾಡಿರುವ ಹಾರ್ದಿಕ್ ಪಾಂಡ್ಯ ಎಲ್ಲಿ.
ಸದ್ಯ ಕೊಹ್ಲಿಯ ಈ ಮಾತು ಈಗ ಸಾಕಷ್ಟು ಚರ್ಚೆಗಳಿಗೆ ದಾರಿಯಾಗಿದೆ. ಕಾರಣ ಇನ್ನೂ ಹಾರ್ದಿಕ್ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಅಷ್ಟೆ. ಆದ್ರೆ ಈಗಾಗಲೇ ಅವರಿಗೆ ಲೆಜಂಡ್ ರೀತಿ ನೋಡುವುದು ಸರಿಯಲ್ಲ. ಈ ಹಿಂದೆ ಹಾರ್ದಿಕ್ ರಂತೆ ಆರಂಭದಲ್ಲಿ ಸಾಕಷ್ಟು ಭರವಸೆಯನ್ನ ಮೂಡಿಸಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಎಷ್ಟೋ ಆಲ್ರೌಂಡರ್ಗಳು ನಂತರ ಹೇಳ ಹೇಸರಿಲ್ಲದಂತೆ ಮಾಯವಾಗಿದ್ದಾರೆ. ಹೀಗಿರುವಾಗ ಕೊಹ್ಲಿ ಪಾಂಡ್ಯರನ್ನ ಕುರಿತು ಹೀಗೆ ಹೇಳೋದು ಎಷ್ಟು ಸರಿ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಏನೇ ಆದ್ರೂ, ಸದ್ಯ ಕೊಹ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರೋದಂತೂ ಸತ್ಯ. ಒಂದೇ ಒಂದು ಪಂದ್ಯದಿಂದ ಒಬ್ಬ ಆಟಗಾರನ ಸಾಮರ್ಥ್ಯದ ಬಗ್ಗೆ ಸರ್ಟಿಫಿಕೇಟ್ ಕೊಡೋದು ಎಷ್ಟು ಸರಿ. ನೋಡೋಣ... ಪಾಮಡ್ಯ ತಮ್ಮ ನಾಯಕನ ಮಾತು ನಿಜ ಮಾಡ್ತಾರಾ ಅಥವ ಎಲ್ಲರಂತೆ ಇವರೂ ಕೆಲವೇ ದಿನಗಳಲ್ಲಿ ತಮಡದಿಂದ ಗೇಟ್ ಪಾಸ್ ಪಡಿತಾರ ಅಂತ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.