
ವಿದೇಶೀ ಆಟಗಾರರೇ ತನಗೆ ಹೆಚ್ಚು ಇಷ್ಟ ಎಂದಿದ್ದ ತನ್ನ ಅಭಿಮಾನಿಗೆ ಭಾರತ ಬಿಟ್ಟು ವಿದೇಶಕ್ಕೇ ಹೋಗಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಸಿಸಿಐ ಕೂಡಾ ಕ್ಯಾಪ್ಟನ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಕೊಹ್ಲಿ ಟ್ವೀಟ್ ಒಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಕ್ಯಾಪ್ಟನ್ ಕೊಹ್ಲಿ 'ನೀವು ಟ್ರೋಲ್ ಮಾಡುತ್ತಿರುವುದು ನನ್ನನ್ನಲ್ಲ ಎಂಬುವುದು ನನ್ನ ಭಾವನೆ. ನಾನು ಖುದ್ದು ಟ್ರೋಲ್ ಗೆ ಅಂಟಿಕೊಂಡಿದ್ದೇನೆ. ನಾನು ಆ ವ್ಯಕ್ತಿಯ ಕಮೆಂಟ್‌ಗೆ ಪ್ರತಿಕ್ರಿಯೆ ನೀಡುವ ಮೂಲಕ, ಕೆಲ ಭಾರತೀಯರು ಹೇಗೆಲ್ಲಾ ಕಮೆಂಟ್ ಮಾಡುತ್ತಾರೆ ಎಂಬುವುದನ್ನು ತೋರಿಸಿದ್ದಷ್ಟೇ. ನಾನು ಕೂಡಾ ನಿಲುವು ವ್ಯಕ್ತಪಡಿಸುವುದನ್ನು ಗೌರವಿಸುತ್ತೇನೆ. ಗೆಳೆಯರೇ ಹಬ್ಬದ ಖುಷಿಯನ್ನು ಆನಂದಿಸಿ, ಶಾಂತವಾಗಿರಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ವಿವಾದ?
ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದ್ದರು. ಇದಕ್ಕೆ ಅಭಿಮಾನಿಯೊಬ್ಬ ಕಮೆಂಟ್ ಮಾಡುತ್ತಾ 'ಕೊಹ್ಲಿ ಬ್ಯಾಟಿಂಗ್ ನಲ್ಲಿ ನನಗೇನೂ ವಿಷೇಶತೆ ಕಾಣುವುದಿಲ್ಲ. ಭಾರತೀಯರಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳೇ ಅದ್ಭುತವಾಗಿ ಆಡುತ್ತಾರೆ' ಎಂದಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕೊಹ್ಲಿ 'ನೀವು ಭಾರತ ದೇಶದಲ್ಲಿದ್ದೀರಿ ಎಂದು ನನಗನಿಸುತ್ತಿಲ್ಲ ಎಂದು ನಾನು . ನೀವು ಭಾರತ ಬಿಟ್ಟು ವಿದೇಶಕ್ಕೆ ಹೋಗಿ, ಅಲ್ಲೆ ಬದುಕಿ. ನಮ್ಮ ದೇಶದಲ್ಲಿ ನೀವು ಯಾಕಿದ್ದೀರಾ? ಮತ್ತು ನಮ್ಮ ದೇಶವನ್ನು ಯಾಕೆ ಪ್ರೀತಿಸುತ್ತೀರಾ? ನೀವು ನನ್ನನ್ನು ಇಷ್ಟ ಪಡುವುದಿಲ್ಲ ಎಂದರೆ, ನನಗೇನು ಚಿಂತೆ ಇಲ್ಲ' ಎಂದಿದ್ದರು. ಕೊಹ್ಲಿಯ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.