ಧೋನಿಯನ್ನು ಮೀರಿಸಿದ ವಿರಾಟ್​​ ಕೊಹ್ಲಿ ಪಡೆದ ಸಂಬಳವೆಷ್ಟು...!

By Internet DeskFirst Published Oct 5, 2016, 5:36 AM IST
Highlights

ಮುಂಬೈ(ಅ.05): ಜನವರಿ-ಸೆಪ್ಟೆಂಬರ್ 2016ರ ವೇಳೆಯಲ್ಲಿ ಎಂ.ಎಸ್. ಧೋನಿಗಿಂತ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೆಚ್ಚಿನ ಸಂಬಳ ಪಡೆದಿದ್ದಾರೆ.

9 ತಿಂಗಳಲ್ಲಿ ಕೊಹ್ಲಿಗೆ 1.78 ಕೋಟಿ ರೂಪಾಯಿ ಸಂಬಳ ಸಿಕ್ಕಿದೆ. ಧೋನಿ,ಕೊಹ್ಲಿ ಸೇರಿದಂತೆ ನಾಲ್ಕು ಆಟಗಾರರು 1 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. 

Latest Videos

ಬಿಸಿಸಿಐ ಇಂಡಿಯಾ ತಂಡದ ಆಟಗಾರರನ್ನು ಎ,ಬಿ ಮತ್ತು ಸಿ ಗುಂಪಾಗಿ ವಿಂಗಡನೆ ಮಾಡಿದೆ. ಗ್ರೇಡ್ ‘ಎ’ನಲ್ಲಿ ಬರುವ ಆಟಗಾರರಿಗೆ 1 ಕೋಟಿ ರೂಪಾಯಿ ಸಂಬಳ ನೀಡುತ್ತಿದೆ. 

ಗ್ರೇಡ್ ಬಿ ಆಟಗಾರರಿಗೆ 50 ಲಕ್ಷ ಹಾಗೂ ಸಿ ಗ್ರೇಡ್ ಆಟಗಾರರಿಗೆ 25 ಲಕ್ಷ ರೂಪಾಯಿ ಸಂಬಳ ನೀಡಲಾಗ್ತಿದೆ.

‘ಎ’ ಗ್ರೇಡ್ ನಲ್ಲಿ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ,ಅಶ್ವಿನ್ ಸೇರಿದ್ದಾರೆ.
 

click me!