(Video)ವಿರಾಟ್-ಅನುಷ್ಕಾ ಮದುವೆಗೆ ನಾಂದಿ ಹಾಡುತ್ತಾ ಈ ಹೊಸ ಜಾಹೀರಾತು..?

Published : Oct 22, 2017, 04:01 PM ISTUpdated : Apr 11, 2018, 01:00 PM IST
(Video)ವಿರಾಟ್-ಅನುಷ್ಕಾ ಮದುವೆಗೆ ನಾಂದಿ ಹಾಡುತ್ತಾ ಈ ಹೊಸ ಜಾಹೀರಾತು..?

ಸಾರಾಂಶ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಒಂದು ಜಾಹೀರಾತಿನಲ್ಲಿ ಆ್ಯಕ್ಟಿಂಗ್ ಮಾಡೋ ಮೂಲ್ಕ ಶೀಘ್ರವೇ ಮ್ಯಾರೇಜ್ ಆಗ್ತೀವಿ ಅನ್ನೋದನ್ನ ಸಾರಿದ್ದಾರೆ. ಹಾಗಾದ್ರೆ ಈ ಹಾಟ್ ಕಪಲ್ ನೀಡಿದ ಅಚ್ಚರಿ ಏನು..? ಆ ಜಾಹಿರಾತಿನಲ್ಲಿ ಇರೋದಾದ್ರೂ ಏನು? ಇಲ್ಲಿದೆ ವಿವರ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಗೆಳತಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲವ್ ಸ್ಟೋರಿ ದಿನೇದಿನೇ ಕ್ಯೂಯ್ಯಾಸಿಟಿ ಹುಟ್ಟಿಹಾಕ್ತಿದೆ. ಅವರು ಎಲ್ಲೆ ಸುತ್ತಾಡಿದ್ರೂ ಸುದ್ದಿಯಾಗ್ತಿದೆ. ಈಗ ಇವರಿಬ್ಬರ ನಟಿಸಿರುವ ಖಾಸಗಿ ಸಂಸ್ಥೆಯ ಜಾಹೀರಾತು ಒಂದು ಬಾರಿ ಸದ್ದು ಮಾಡ್ತಿದೆ. ಇವರ ನಾಲ್ಕು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿರುವ ಈ ಜಾಹೀರಾತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವಧು ವರರ ಸಂಭಾಷಣೆಯನ್ನ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ದೃಷ್ಠಿ ಕೋನದಲ್ಲಿ ಹೇಳೋ ಈ ಜಾಹೀರಾತು, ಹಾಟ್‌ಕಪಲ್‌ಗಳ ಮುಂದಿನ ಹೆಜ್ಜೆಯನ್ನ ಸಂಕ್ಷಿಪ್ತವಾಗಿ ವಿವರಿಸಿದೆ. ಮದುವೆ ನಿರ್ಧಾರ ಕುರಿತು ಇವರಿಬ್ಬರ ಸಂಭಾಷಣೆ, ಕೇವಲ ಜಾಹೀರಾತಿಗೆ ಮಾತ್ರ ಸೀಮಿತವಾಗಿಲ್ಲ. ಈ ಸೂಪರ್ ಜೋಡಿಗಳ ಬದುಕಿಗೂ ಅನ್ವಯಿಸುವಂತಿದೆ.

 

 

 

 

 

 

 

 

 

 

 

ಈ ಜಾಹೀರಾತಿನಲ್ಲಿ ಕೊಹ್ಲಿ ಮತ್ತಷ್ಟು ಹ್ಯಾಂಡ್ಸಮ್‌ ಲುಕ್‌'ನಲ್ಲಿ ಕಾಣಿಸಿಕೊಂಡ್ರೆ, ಅನುಷ್ಕಾ ಬ್ಯೂಟಿ ಡಬಲ್ ಆಗಿದೆ. ಇವರಿಬ್ಬರ ಪರ್ಫೆಕ್ಟ್ ಜೋಡಿ ಕಣ್ಣು ಕುಕ್ಕುತ್ತಿದೆ. ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ಜಾಹೀರಾತಿನಲ್ಲಿ ನಟಿಸುತ್ತಿರೋದು ಇದೇ ಮೊದಲಲ್ಲ. ಇದಕ್ಕೂ ಮೊದಲು ಶಾಂಪು ಜಾಹೀರಾತಿನಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ರು.

 

 

 

 

 

 

 

 

 

 

 

ವಿಶೇಷ ಅಂದ್ರೆ ಇದೇ ಜಾಹೀರಾತಿನಿಂದ ಇವರ ಪ್ರೇಮ್ ಕಹಾನಿ ಆರಂಭಗೊಂಡಿತ್ತು. ಶಾಂಪು ಜಾಹೀರಾತಿನಲ್ಲಿ ಮೊದಲ ಬಾರಿಗೆ ಜೊತೆಯಾದ ಈ ಜೋಡಿ, ಇದೀಗ ಬದುಕಿನುದ್ದಕ್ಕೂ ಜೊತೆಯಾಗಿ ಹೆಜ್ಜೆ ಇಡಲಿದ್ದಾರೆ. ಶಾಂಪು ಬಳಿಕ ಕೊಹ್ಲಿ ಹಾಗೂ ಅನುಷ್ಕಾ ತಂಪು ಪಾನಿಯದ ಜಾಹೀರಾತಿನಲ್ಲಿ ಕಾಣಿಸಿಕೊಂಡ್ರು. ಆದ್ರೆ ಇವರಿಬ್ಬರು ಜೊತೆಯಾಗಿ ನಟಿಸಿರಲಿಲ್ಲ. ಇವರಿಬ್ಬರ ಮಧ್ಯೆ ಬಾಲಿವುಡ್ ನಟ ರಣಬೀರ್ ಕಪೂರ್ ಕಾಣಿಸಿಕೊಂಡಿದ್ರು.

ಇತ್ತೀಚೆಗಷ್ಟೇ ಬಾಲಿವುಡ್ ನಟ ಅಮೀರ್ ಖಾನ್ ಜೊತೆಗಿನ ಟಿವಿ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಗೆಳತಿ ಅನುಷ್ಕಾ ಕುರಿತು ಮನಬಿಚ್ಚಿ ಮಾತನಾಡಿದ್ರು. ಈ ಮೂಲಕ ಅನುಷ್ಕಾ ಮೇಲಿನ ಪ್ರೀತಿಯನ್ನ ಬಿಚ್ಚಿಟ್ಟಿದ್ರು. ಇದೀಗ ಕೊಹ್ಲಿ ಹಾಗೂ ಅನುಷ್ಕಾ ಮತ್ತೆ ಜಾಹೀರಾತಿನಲ್ಲಿ ಒಂದಾಗಿದ್ದಾರೆ. ಮೊದಲ ಜಾಹೀರಾತು ಇವರಿಬ್ಬರ ಪ್ರೀತಿಗೆ ಅಡಿಪಾಯ ಹಾಕಿತ್ತು. ಇದೀಗ ನೂತನ ಜಾಹೀರಾತು ಇವರ ಮದುವೆಗೆ ನಾಂದಿ ಹಾಡುತ್ತಾ ಅನ್ನೋ ಕುತೂಹಲ ಹುಟ್ಟಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೋಹಿತ್, ಜಡೇಜಾ ಅಲ್ಲ! ಟೀಂ ಇಂಡಿಯಾ ಸರಣಿ ಸೋಲಿಗೆ ಈ ಇಬ್ಬರೇ ಕಾರಣ! ನೀವೇನಂತೀರಾ?
ಕೊನೆಗೂ ಮುಗಿಯಿತಾ ಈ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?