ಸ್ನೇಹಿತರ ದಿನದಂದು ಸಚಿನ್’ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಕಾಂಬ್ಳಿ

Published : Aug 06, 2018, 02:10 PM IST
ಸ್ನೇಹಿತರ ದಿನದಂದು ಸಚಿನ್’ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಕಾಂಬ್ಳಿ

ಸಾರಾಂಶ

‘ಸಚಿನ್ ಅಂಗಳದಲ್ಲಿ ಜೈ ಇದ್ದಂತೆ ಮತ್ತು ಅಂಗಳದ ಹೊರಗೆ ನಾನು ವೀರೂ ಇದ್ದಂತೆ’ ಎಂದು ತಮ್ಮ ಬಾಲ್ಯದ ದಿನಗಳ ಫೋಟೋವೊಂದನ್ನು ಟ್ವೀಟ್ ಕಾಂಬ್ಳಿ ಮಾಡಿದ್ದಾರೆ.

ನವದೆಹಲಿ(ಆ.06]: ಸ್ನೇಹಿತರ ದಿನದ ನಿಮಿತ್ತ ಕ್ರಿಕೆಟ್ ದಿಗ್ಗಜ, ತಮ್ಮ ಬಾಲ್ಯದ ಸ್ನೇಹಿತ ಸಚಿನ್ ತೆಂಡುಲ್ಕರ್'ಗೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿಶಿಷ್ಟ ರೀತಿಯಲ್ಲಿ ಶುಭ ಕೋರಿದ್ದಾರೆ. 

ಜನಪ್ರಿಯ ಚಲನಚಿತ್ರ ‘ಶೋಲೆ’ಯಲ್ಲಿ ಬರುವ ಜೈ ಮತ್ತು ವೀರೂ ಪಾತ್ರಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ‘ಸಚಿನ್ ಅಂಗಳದಲ್ಲಿ ಜೈ ಇದ್ದಂತೆ ಮತ್ತು ಅಂಗಳದ ಹೊರಗೆ ನಾನು ವೀರೂ ಇದ್ದಂತೆ’ ಎಂದು ತಮ್ಮ ಬಾಲ್ಯದ ದಿನಗಳ ಫೋಟೋವೊಂದನ್ನು ಟ್ವೀಟ್ ಕಾಂಬ್ಳಿ ಮಾಡಿದ್ದಾರೆ.

ಇದೇ ವೇಳೆ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಇಬ್ಬರೂ ಜತೆಗಿರುವ ಫೋಟೋ ಟ್ವೀಟ್ ಮಾಡಿ ಶುಭ ಹಾರೈಸಿದೆ.

ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ‘ವಿಶ್ವದಲ್ಲಿ ಗೆಳೆತನ ಅತ್ಯಂತ ಶ್ರೇಷ್ಠ ಸಂಬಂಧ’ ಎಂದು ತಮ್ಮ ಇನ್‌ಸ್ಟಾಗ್ರಾಮ್'ನಲ್ಲಿ ಬರೆದುಕೊಂಡಿದ್ದಾರೆ. ರೋಹಿತ್ ಶರ್ಮಾ,
‘ನಾನು ಗೆಳೆತನದಿಂದ ಬಹಳಷ್ಟನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?