ಸದ್ಯ ಆಸ್ಪ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮೆರೈನರ್ಸ್ ತಂಡದೊಂದಿಗೆ ಅನಿರ್ದಿಷ್ಟ ಅವಧಿಗೆ ಅಭ್ಯಾಸ ನಡೆಸುತ್ತಿರುವ ಬೋಲ್ಟ್, ಋುತು ಪೂರ್ವ ಅಭ್ಯಾಸ ಪಂದ್ಯದಲ್ಲಿ 2 ಗೋಲು ಬಾರಿಸಿ ವಿಶ್ವದ ಗಮನ ಸೆಳೆದಿದ್ದರು.
ಸಿಡ್ನಿ(ಅ.20): ವಿಶ್ವದ ವೇಗದ ಮಾನವ ಉಸೇನ್ ಬೋಲ್ಟ್, ಮಾಲ್ಟಾ ದೇಶದ ವಲ್ಲೆಟ್ಟಾ ಫುಟ್ಬಾಲ್ ಕ್ಲಬ್ ನೀಡಿದ್ದ ಗುತ್ತಿಗೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಸದ್ಯ ಆಸ್ಪ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮೆರೈನರ್ಸ್ ತಂಡದೊಂದಿಗೆ ಅನಿರ್ದಿಷ್ಟ ಅವಧಿಗೆ ಅಭ್ಯಾಸ ನಡೆಸುತ್ತಿರುವ ಬೋಲ್ಟ್, ಋುತು ಪೂರ್ವ ಅಭ್ಯಾಸ ಪಂದ್ಯದಲ್ಲಿ 2 ಗೋಲು ಬಾರಿಸಿ ವಿಶ್ವದ ಗಮನ ಸೆಳೆದಿದ್ದರು. ಬೋಲ್ಟ್, ಮೆರೈನರ್ಸ್ ತಂಡದಿಂದಲೇ ಗುತ್ತಿಗೆ ಪಡೆಯುವ ನಿರೀಕ್ಷೆಯಲ್ಲಿದ್ದು, ಜಗತ್ತಿನ ವಿವಿಧ ದೇಶಗಳ ಫುಟ್ಬಾಲ್ ಕ್ಲಬ್‌ಗಳಿಂದ ಬರುತ್ತಿರುವ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ.
ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಪಡೆದ ಬಳಿಕ, ಬೋಲ್ಟ್ ವೃತ್ತಿಪರ ಫುಟ್ಬಾಲಿಗನಾಗುವತ್ತ ಗಮನ ಹರಿಸಿದ್ದಾರೆ.