
ನಾಗ್ಪುರ(ಆ.05): ನಾಯಕ ಅನೂಪ್ ಕುಮಾರ್ ಮತ್ತು ಶಬ್ಬೀರ್ ಬಾಪು ಅವರ ಆಕ್ರಮಣಕಾರಿ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ವಿರುದ್ಧ 36-22 ಅಂಕಗಳ ಅಂತರದಿಂದ ಯು ಮುಂಬಾ ತಂಡ ಸುಲಭದ ಗೆಲುವು ದಾಖಲಿಸಿತು.
ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಯು ಮುಂಬಾ 14-8ರಿಂದ ಮುನ್ನಡೆ ಕಾಯ್ದುಕೊಂಡಿತ್ತು.
30ನೇ ನಿಮಿಷದಲ್ಲಿ ಅನೂಪ್ ಬೋನಸ್ ಮತ್ತು 2 ಅಂಕದೊಂದಿಗೆ ಮೂರು ಅಂಕ ಗಳಿಸಿದರು. ಬಳಿಕ ಸೂಪರ್ ಟ್ಯಾಕಲ್'ನಿಂದ ಮುಂಬಾ ಮತ್ತೆ 3 ಅಂಕ ಪಡೆಯುವ ಮೂಲಕ 26-15ರಿಂದ ಮುನ್ನಡೆಯಿತು. ಆ ನಂತರ ಪಂದ್ಯದ ಮೇಲೆ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದ ಅನೂಪ್ ಪಡೆ ಯಾವುದೇ ಹಂತದಲ್ಲೂ ಡೆಲ್ಲಿ ಪುಟಿದೇಳಲು ಬಿಡಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.