
ಮುಂಬೈ(ನ.09): ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ತಮ್ಮದೇ ಹೊಸ ಬ್ರಾಂಡ್ ಸೃಷ್ಟಿಸುತ್ತಿದ್ದಾರೆ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎನಿಸಿರುವ ವಿರಾಟ್, ಈಗ ಸಾಮಾಜಿಕ ಜಾಲತಾಣಗಳಿಂದಲೂ ಸಂಪಾದಿಸಲು ಆರಂಭಿಸಿದ್ದಾರೆ.
ಫೋರ್ಬ್ಸ್ ಸಂಸ್ಥೆಯ ಪ್ರಕಾರ, ಕೊಹ್ಲಿಯ ಪ್ರತಿ ಪ್ರಚಾರ ಪೋಸ್ಟ್'ಗೆ ಇನ್'ಸ್ಟಾಗ್ರಾಂ ಬರೋಬ್ಬರಿ ₹3.2 ಕೋಟಿ ನೀಡುತ್ತದೆ ಎನ್ನಲಾಗಿದೆ.
ಇನ್'ಸ್ಟಾಗ್ರಾಂ ಪೋಸ್ಟ್ ಮೂಲಕ ಅತಿಹೆಚ್ಚು ಸಂಪಾದನೆ ಮಾಡುವ ವಿಶ್ವದ ಅಗ್ರ 10 ಸೆಲೆಬ್ರಿಟಿಗಳ ಪೈಕಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಗಿಂತ ಮುಂದಿರುವ ಏಕೈಕ ಕ್ರೀಡಾಪಟು ಪೋರ್ಚುಗಲ್'ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ.
ಹಿಂಬಾಲಕರ ಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ, ಕೊಹ್ಲಿಗೇ ಲಾಭ ಹೆಚ್ಚು. ಕಾರಣ, ಮೊದಲ ಸ್ಥಾನದಲ್ಲಿರುವ ಅಮೆರಿಕದ ಹಾಸ್ಯನಟ ಕೆವಿನ್ ಹಾರ್ಟ್ ಪ್ರತಿ ಪೋಸ್ಟ್'ಗೆ ₹6.4 ಕೋಟಿ ಪಡೆಯುತ್ತಾರೆ. ಅವರಿಗೆ ಬರೋಬ್ಬರಿ 5.4 ಕೋಟಿ ಹಿಂಬಾಲಕರಿದ್ದಾರೆ. ರೊನಾಲ್ಡೋ 11 ಕೋಟಿಗಿಂತ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಇನ್'ಸ್ಟಾಗ್ರಾಂನಲ್ಲಿ 1.67 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಜತೆಗೆ ಟ್ವೀಟರ್'ನಲ್ಲಿ 2 ಕೋಟಿ, ಫೇಸ್'ಬುಕ್'ನಲ್ಲಿ 3.6 ಕೋಟಿ ಹಿಂಬಾಲಕರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.