ಮಿಥಾಲಿ ಗರ್ಲ್ಸ್, ಕೊಹ್ಲಿ ಬಾಯ್ಸ್ ಒಗ್ಗೂಡಿದ್ರೆ ಹೇಗಿರುತ್ತೆ..?: ಇಲ್ಲಿದೆ ಭಾರತ ಕಂಬೈನ್ಡ್ ಇಲೆವನ್ ತಂಡ

Published : Jul 27, 2017, 04:19 PM ISTUpdated : Apr 11, 2018, 12:44 PM IST
ಮಿಥಾಲಿ ಗರ್ಲ್ಸ್, ಕೊಹ್ಲಿ ಬಾಯ್ಸ್ ಒಗ್ಗೂಡಿದ್ರೆ ಹೇಗಿರುತ್ತೆ..?: ಇಲ್ಲಿದೆ ಭಾರತ ಕಂಬೈನ್ಡ್ ಇಲೆವನ್ ತಂಡ

ಸಾರಾಂಶ

ಭಾರತದಲ್ಲಿ ಪುರುಷ ಕ್ರಿಕೆಟ್​ಗೆ ಸಿಗುವಷ್ಟು ಮಾನ್ಯತೆ ಮಹಿಳಾ ಕ್ರಿಕೆಟ್​​ಗೆ ಸಿಗುತ್ತಿಲ್ಲ ಅನ್ನೋ ಕೂಗು ಇಂದು ನಿನ್ನೆಯದಲ್ಲ. ಆದ್ರೆ ಮೊನ್ನೆ ಮಿಥಾಲಿ ಪಡೆ ಮಹಿಳಾ ವಿಶ್ವಕಪ್​ನಲ್ಲಿ ಮಾಡಿದ ಮೋಡಿ ಅಷ್ಟಿ​​​​​ಷ್ಟಲ್ಲ. ಸದ್ಯ ಭಾರತದಲ್ಲಿ ಕೊಹ್ಲಿ ಹುಡುಗರಿಗಿಂತ ಮಿಥಾಲಿ ಹುಡುಗಿಯರ ಬಗ್ಗೆ ಟಾಕ್​​ಗಳು ಹೆಚ್ಚಾಗಿದೆ. ಭಾರತದ ಮಹಿಳಾ ತಂಡವನ್ನ ಬ್ಲೂ ಬಾಯ್ಸ್​​​​ ಸಮಾನವಾಗಿ ಕಾಣ್ತಿದ್ದಾರೆ. ಇವೆರಡೂ ತಂಡವನ್ನ ಸೇರಿಸಿ ಒಂದು ತಂಡವನ್ನಾಗಿ ಮಾಡಿದ್ರೆ ಹೇಗಿರುತ್ತೆ.? ಪುರುಷ ಮತ್ತು ಮಹಿಳಾ ಕ್ರಿಕೆಟ್​​​ ತಂಡವನ್ನ ಕಂಬೈನ್ಡ್​​​​ ಮಾಡಿ. ಟೀಂ ಇಂಡಿಯಾ ಕಂಬೈನ್ಡ್​​​​ ಟೀಂ ಅಂತ ನಾವು ಒಂದು ತಂಡವನ್ನ ರೆಡಿ ಮಾಡಿದ್ದೇವೆ. ಈ ತಂಡ ವಿಶ್ವದ ಯಾವುದೇ ಟೀಂ ಅನ್ನ ಸುಲಭವಾಗಿ ಮಣ್ಣು ಮುಕ್ಕಿಸುತ್ತೆ.

ಪೂನಮ್​​​ ರಾವತ್​​ - ಶಿಖರ್​​​ ಧವನ್​​ ಓಪನರ್ಸ್​​​​​​

ಸದ್ಯ ಪುರುಷ ಕ್ರಿಕೆಟ್​​​​'ನಲ್ಲಿ ಶಿಖರ್​​​ ಧವನ್​​​ ಮತ್ತು ವುಮೆನ್ಸ್​​​ ಕ್ರಿಕೆಟ್​​ನಲ್ಲಿ ಪೂನಂ ರಾವತ್​​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇಬ್ಬರೂ ತಮ್ಮ ತಮ್ಮ ತಂಡಕ್ಕೆ ರನ್​ ಗುಡ್ಡೆ ಹಾಕುತ್ತಿದ್ದಾರೆ. ಸೋ ಇವರಿಬ್ಬರನ್ನ ಕಂಬೈನ್ಡ್​​​​ ಟೀಂನ ಓಪನರ್ಸ್​​​. ಇವರಿಬ್ಬರೂ ಸೇರಿಕೊಂಡ್ರೆ ತಂಡಕ್ಕೆ ಉತ್ತಮ ಓಪನ್ನಿಂಗ್​​ ಸಿಗುವುದರೆಲ್ಲಿ ಅನುಮಾನವಿಲ್ಲ​​​​​.

ಕೊಹ್ಲಿ, ಮಿಥಾಲಿ​​​​, ಕೌರ್​​​​, ಧೋನಿ ಮಿಡ್ಲ್​​​​ ಆರ್ಡರ್​​​​​ ಬಲ

ಒಂದು ವೇಳೆ ಕಂಬೈನ್ಡ್​​​​ ಟೀಂನ ಓಪನರ್ಸ್​​​ ಕೈ ಕೊಟ್ರೆ 2ನೇ ವಿಕೆಟ್​​​​ಗೆ ಟೀಂ ಇಂಡಿಯಾ ನಾಯಕ ವಿರಾಟ್​​​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. 3ನೇ ವಿಕೆಟ್​​ಗೆ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್​​​​​ ಬಂದರೆ 5ನೇ ಕ್ರಮಾಮಕದಲ್ಲಿ ಪಂಜಾಬ್​​ ಪುತ್ರಿ ಹರ್ಮನ್​​ಪ್ರೀತ್​​​​ ಕೌರ್​​​​ ಅಖಾಡಕ್ಕೆ ಇಳಿಯಲಿದ್ದಾರೆ. ಕೊನೆಯದಾಗಿ ಫಿನಿಶರ್​​​ ಎಂ.ಎಸ್​​​ ಧೋನಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಲಿದ್ದಾರೆ.

ದೀಪ್ತಿ ಶರ್ಮಾ - ರವೀಂದ್ರ ಜಡೇಜಾ ಆಲ್​ರೌಂಡರ್ಸ್​​​

ಯಾವುದೇ ತಂಡವಾದರೂ ಆಲರೌಂಡರ್ಸ್​​​​​ ತಂಬಾನೇ ಮುಖ್ಯ. ಆದರೆ ಕಂಬೈನ್ಡ್​​​​ ಟೀಂ ಇಂಡಿಯಾದಲ್ಲಿ ವಿಶ್ವದ ಬೆಸ್ಟ್​​​ ಆಲ್​ರೌಂಡರ್ಸ್​​​​ ಇದ್ದಾರೆ. ಮಹಿಳಾ ತಂಡದಿಂದ ದೀಪ್ತಿ ಶರ್ಮಾ ಇದ್ದರೆ ಪುರುಷ ತಂಡದಿಂದ ರವೀಂದ್ರ ಜಡೇಜಾ ಇದ್ದಾರೆ. ಇವರಿಬ್ಬರೂ ಬ್ಯಾಟಿಂಗ್​​ ಮಾತ್ರವಲ್ಲದೇ ತಮ್ಮ ಸ್ಪಿನ್​ ಮೋಡಿಯಿಂದ ಎದುರಾಳಿ ತಂಡಕ್ಕೆ ಮಾರಕ ಎನಿಸಲಿದ್ದಾರೆ.

​ಬೌಲಿಂಗ್​​ ತ್ರಿಮೂರ್ತಿಗಳು ಯಾರ್ಯಾರು..?

​ಇನ್ನೂ ಕೊನೆಯದಾಗಿ ಕಂಬೈನ್ಡ್​​​​ ಟೀಂ ಇಂಡಿಯಾದ ಬೌಲರ್​​​ಗಳು ಅಂದ್ರೆ ಮಿಥಾಲಿ ಪಡೆಯ ಅನುಭವಿ ವೇಗಿ ಜುಲನ್​ ಗೋಸ್ವಾಮಿ ಹಾಗೂ ಕೊಹ್ಲಿ ಪಡೆಯ ಫ್ರಂಟ್​​​ ಲೈನ್​​ ಬೌಲರ್ಸ್​​​​ ಭುವನೇಶ್ವರ್​​​ ಕುಮಾರ್​​​ ಮತ್ತು ಜಸ್​​ಪ್ರೀತ್​​ ಬುಮ್ರಾ. ಈ ಮೂರು ವೇಗಿಗಳನ್ನ ಒಂದೇ ತಂಡದಲ್ಲಿರುವುದನ್ನ ಕಂಡರೆ ಎದುರಾಳಿ ತಂಡ ನೆಮ್ಮದಿಯಾಗಿ ನಿದ್ದೆ ಮಾಡೋದೇ ಇಲ್ಲ. ಅಷ್ಟರ ಮಟ್ಟಿಗಿರುತ್ತೆ ಈ ತ್ರಿಮೂರ್ತಿಗಳ ಬೌಲಿಂಗ್​ ದಾಳಿ.

ಈ ಕಂಬೈನ್ಡ್​​​ ಟೀಂ ಇಂಡಿಯಾವನ್ನ ಉಹಿಸಿಕೊಂಡರೆ ಮೈ ಜುಮ್​ ಎನ್ನಿಸುತ್ತೆ. ಇನ್ನೇನಾದರೂ ಈ ರೀತಿಯ ಒಂದು ತಂಡ ತಯಾರಾಗಿ ಬಿಟ್ಟರೆ ವಿಶ್ವದ ಯಾವುದೇ ಬಲಿಷ್ಠ ತಂಡವಾದ್ರೂ ದಂಗಾಗಿಬಿಡುತ್ತೆ. ಈ ಒಂದು ತಂಡವಿದ್ರೆ ಯಾವುದೇ ಟೂರ್ನಿಯಾದರೂ ಸುಲಭವಾಗಿ ಮಣಿಸುವುದರಲ್ಲಿ ಅನುಮಾನವೇ ಇಲ್ಲ​​​.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?