ನಂ.1 ಸ್ಥಾನಕ್ಕೆ ನಡೆದಿದೆ ಬಿಗ್ ಫೈಟ್:ರಿಯಲ್ ನಾಯಕರ ಬ್ಯಾಟಿಂಗ್ ಸ್ಟೋರಿ

By Suvarna Web DeskFirst Published Feb 18, 2017, 1:56 PM IST
Highlights

ಆದರೆ ಯಾವ ಆಟಗಾರರು ಸದ್ಯ ಟೆಸ್ಟ್​​​ ಕ್ರಿಕೆಟ್'ಅನ್ನ ಆಳಿ ಟೆಸ್ಟ್​​​ ರಾಂಕಿಂಗ್​​ನಲ್ಲಿ ಅಗ್ರಸ್ಥಾನವನ್ನ ಅಲಂಕರಿಸಿರುವರೊ ಅವರೆ ರ‌್ಯಾಂಕಿಂಗ್ ತಂಡಕ್ಕೂ ನಾಯಕರು.

ಇದು ಕಾಕತಾಳಿಯನೋ ಅಥವಾ ಅಚ್ಚರಿನೋ ಗೊತ್ತಿಲ್ಲ. ಆದರೆ ಯಾವ ಆಟಗಾರರು ಸದ್ಯ ಟೆಸ್ಟ್​​​ ಕ್ರಿಕೆಟ್'ಅನ್ನ ಆಳಿದ್ದಾರೆ ಅವರು ಪ್ರತಿನಿಧಿಸುವ ತಂಡ ಕೂಡ ಬೆಸ್ಟ್ ರ‌್ಯಾಂಕಿಂಗ್ ಸ್ಥಾನ ಅಲಂಕರಿಸಿದೆ

ಟೆಸ್ಟ್​​​ ಕ್ರಿಕೆಟನ್ನ ಆಳುತ್ತಿರೋ 4 ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳು, ಇದು ಕಾಕತಾಳಿಯನೋ ಅಥವಾ ಅಚ್ಚರಿನೋ ಗೊತ್ತಿಲ್ಲ. ಆದರೆ ಯಾವ ಆಟಗಾರರು ಸದ್ಯ ಟೆಸ್ಟ್​​​ ಕ್ರಿಕೆಟ್'ಅನ್ನ ಆಳಿ ಟೆಸ್ಟ್​​​ ರ‌್ಯಾಂಕಿಂಗ್​​ನಲ್ಲಿ ಅಗ್ರಸ್ಥಾನವನ್ನ ಅಲಂಕರಿಸಿರುವರೊ ಅವರೆ ರ‌್ಯಾಂಕಿಂಗ್ ತಂಡಕ್ಕೂ ನಾಯಕರು.

Latest Videos

ಟೆಸ್ಟ್​​​ ಕ್ರಿಕೆಟನ್ನ ಆಳುತ್ತಿರೋ 4 ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗಳು, ವಿಶ್ವ ರ‌್ಯಾಂಕಿಂಗ್​​ನಲ್ಲಿ ಅಗ್ರಸ್ಥಾನ ಹೊಂದಿರುವುದಷ್ಟೇ ಅಲ್ಲ. ತಮ್ಮ ತಂಡದ ಆಧಾರ ಸ್ತಂಭಗಳು ಕೂಡ. ಅಷ್ಟೇ ಅಲ್ಲ ಟೆಸ್ಟ್​​​ ರ‌್ಯಾಂಕಿಂಗ್​​ನಲ್ಲಿ ಟಾಪ್​​​​​ 4 ಬ್ಯಾಟ್ಸ್​ಮನ್​ಗಳು ಅವರವರ ತಂಡಗಳಿಗೆ ಅವರೇ ನಾಯಕರು. ತಮ್ಮ ವೈಯಕ್ತಿಕ ಸಾಧನೆಯೊಂದಿಗೆ ಅವರ ತಂಡಗಳನ್ನೂ ಯಶಸ್ವಿಯಾಗಿ ಮುನ್ನಡೆಸಿ ಟಾಪ್ 5 ತಂಡಗಳಲ್ಲಿ ಉಳಿಯುವಂತೆ ಮಾಡಿದ್ದಾರೆ.

ಟೆಸ್ಟ್​​ ರ‌್ಯಾಂಕಿಂಗ್​​ನಲ್ಲಿ ಸ್ಮಿತ್​​ ನಂ.1 : ಆಸೀಸ್ ನಂ.2 ತಂಡ

ಆಸ್ಟ್ರೇಲಿಯಾದ ಸ್ಟೀವ್​​ ಸ್ಮಿತ್​​​​ ಒಬ್ಬ ಅಗ್ರೆಸ್ಸೀವ್​​ ಬ್ಯಾಟ್ಸ್​​ಮನ್​ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಒಂದು ವರ್ಷದಿಂದ ಆತನ ಬ್ಯಾಟಿಂಗ್​​​ ಬಿರುಗಾಳಿಯನ್ನು ತಡಿಯುವವರೆ ಇಲ್ಲ . ತನ್ನ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ಸ್ಮಿತ್​​ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​​ ಆಗಿದ್ದಾರೆ. ಜೊತೆಗೆ ಸ್ಮಿತ್​​ ಆಸ್ಟ್ರೇಲಿಯಾ ತಂಡದ ನಾಯಕ ಕೂಡ. ತನ್ನ ಸ್ವಂತ ಶಕ್ತಿಯಿಂದ ತಂಡವನ್ನ ಎಷ್ಟೋ ಬಾರಿ ಗೆಲ್ಲಿಸಿದ್ದಾನೆ.

ಕಿಂಗ್​​ ಕೊಹ್ಲಿ ರ‌್ಯಾಂಕಿಂಗ್ನಲ್ಲಿ ನಂ. 2: ಟೀಂ ಇಂಡಿಯಾ ನಂ.1

ವಿರಾಟ್​​ ಕೊಹ್ಲಿ, ಸದ್ಯ ವಿಶ್ವಕ್ರಿಕೆಟ್​​ನ ಬೆಸ್ಟ್​​ ಬ್ಯಾಟ್ಸ್​​ಮನ್​​​. ಇತ್ತೀಚೆಗೆ ಪ್ರಕಟವಾದ ಐಸಿಸಿ ರ‌್ಯಾಂಕಿಂಗ್​​​ನಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಸಾಲು ಸಾಲು ದ್ವಿಶತಕವನ್ನ ದಾಖಲಿಸಿ ರ‌್ಯಾಂಕಿಂಗ್​​ನಲ್ಲಿ 2ನೇ ಸ್ಥಾನ ಗಳಿಸಿದರೂ ತನ್ನ ತಂಡವನ್ನ ನಂಬರ್​​ ಒನ್​​ ಸ್ಥಾನದಲ್ಲಿರುವಂತೆ ನೋಡಿಕೊಂಡಿದ್ದಾರೆ. ಇನ್ನೂ 23 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸರಣಿಯಲ್ಲೂ ತಮ್ಮ ಎಂದಿನ ಬ್ಯಾಟಿಂಗ್​ ನಾಗಲೋಟವನ್ನು ಮುಂದುವರೆಸಿ ನಂಬರ್​​ ಒನ್​ ಬ್ಯಾಟ್ಸ್​ಮನ್​ ಆಗಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲ ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ನಂಬರ್​​ 1 ಸ್ಥಾನದಲ್ಲೇ ಮುಂದುವರೆಸಿ ಒಂದು ಮಿಲಿಯನ್​​​​​​ ಡಾಲರ್ ಬಹುಮಾನವನ್ನು ​​​ ತಮ್ಮದಾಗಿಸಿಕೊಳ್ಳಲು ಎದುರು ನೋಡುತಿದ್ದಾರೆ.

ರೂಟ್​​ ವಿಶ್ವದ 3ನೇ ಬೆಸ್ಟ್​​ ಬ್ಯಾಟ್ಸ್​ಮನ್​​​ : ಟೀಂ ನಂಬರ್ 4

ಇಂಗ್ಲೆಂಡ್​​ ತಂಡ ಟೀಂ ಇಂಡಿಯಾ ವಿರುದ್ಧ ಇತ್ತೀಚೆಗಷ್ಟೇ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿತ್ತು. ಅದರ ಬೆನ್ನಲ್ಲೇ ಅಲಸ್ಟೈರ್​​ ಕುಕ್​ ಕೂಡ ತಮ್ಮ ನಾಯಕತ್ವಕ್ಕೆ ಗುಡ್​ ಬೈ ಹೇಳಿದರು. ಅವರ ಸ್ಥಾನಕ್ಕೆ ಈಗ ಇಂಗ್ಲೆಂಡ್​ ಕ್ರಿಕೆಟ್​ ಸಂಸ್ಥೆ ವಿಶ್ವದ 3ನೇ ಬೆಸ್ಟ್​​ ಬ್ಯಾಟ್ಸ್​ಮನ್​ ಕೈಗೆ ತಂಡವನ್ನ ನೀಡಿದೆ. ಸದ್ಯ ವಿಶ್ವ ಶ್ರೇಷ್ಠರ ಸಾಲಿನಲ್ಲಿರುವ ಜೋ ರೂಟ್ ​​4ನೇ ಸ್ಥಾನದಲ್ಲಿರುವ ಇಂಗ್ಲೆಂಡ್​​​ ತಂಡವನ್ನು ಅಗ್ರಸ್ಥಾನಕ್ಕೇರಿಸುವ ಉತ್ಸಾಹದಲ್ಲಿದ್ದಾರೆ.

ರಾಂಕಿಂಗ್​ನಲ್ಲಿ ಕೇನ್​​ ವಿಲಿಯಮ್ಸನ್​ ನಂ.4 : ಕೀವಿಸ್​​ ರಾಂಕಿಂಗ್​ನಲ್ಲಿ ನಂಬರ್ 5

ನ್ಯೂಜಿಲೆಂಡ್​​​​ನ ಆರಾಧ್ಯ ಧೈವ ಕೇನ್​ ವಿಲಿಯಮ್ಸನ್​​ ರಾಂಕಿಂಗ್​​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಸದ್ಯದ ರ‌್ಯಾಂಕಿಂಗ್​ನ  ಟೈಟ್​​ ಫೈಟ್​ನಲ್ಲಿ ಸೈಲೆಂಟಾಗಿ ತೆರೆಮರೆಯಲ್ಲಿ ಮಿಂಚುತ್ತಿರುವ ಕೇನ್​​ ತಮ್ಮ ತಂಡವನ್ನೂ ಯಶಸ್ಸಿನ ಹಾದಿಯಲ್ಲಿ ಸಾಗಿಸುತಿದ್ದಾರೆ. ಟೆಸ್ಟ್​​ ರ‌್ಯಾಂಕಿಂಗ್​​ನಲ್ಲಿ ಟಾಪ್​​ 4 ಬ್ಯಾಟ್ಸ್​​ಮನ್​​​​ಗಳು ಆಯಾ ತಂಡದ ನಾಯಕರಾಗಿರೋದು ನಿಜಕ್ಕೂ ಅಚ್ಚರಿನೆ ಸರಿ. ಅಷ್ಟೇ ಅಲ್ಲ ತಮ್ಮ ಅದ್ಭುತ ಬ್ಯಾಟಿಂಗ್​ನಿಂದ ತಂಡವನ್ನೂ ಯಶಸ್ವಿಯಾಗಿ ಮುನ್ನಡೆಸುವುದಲ್ಲದೇ ಉಳಿದ ಆಟಗಾರರಿಗೂ ಮಾದರಿಯಾಗಿದ್ದಾರೆ.

ವರದಿ: ಅಮಿತ್​​ ಗೌಡ, ಸುವರ್ಣ ನ್ಯೂಸ್

click me!