ENG vs IND: ಭಾರತದ ಹೀನಾಯ ಪ್ರದರ್ಶನಕ್ಕೆ ಇವರೇ ಹೊಣೆ ಎಂದ ಫ್ಯಾನ್ಸ್! ಇಬ್ಬರು ಸ್ಟಾರ್ ಆಟಗಾರರನ್ನು ಬೇಕೆಂದೇ ಹೊರಹಾಕಿದರಾ?

Published : Jul 19, 2026, 08:59 PM IST
team india

ಸಾರಾಂಶ

ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಂಪೂರ್ಣ ವಿಫಲರಾದರು, ಇದರಿಂದ ಇಂಗ್ಲೆಂಡ್ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಳಪೆ ಪ್ರದರ್ಶನವು ತಂಡದ ಆಯ್ಕೆಯ ಬಗ್ಗೆ, ವಿಶೇಷವಾಗಿ ಆ ಇಬ್ಬರು ಅನುಭವಿ ಆಟಗಾರರನ್ನು ಕೈಬಿಟ್ಟಿರುವ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.

ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಸಂಪೂರ್ಣ ವೈಫಲ್ಯ ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತೀಯ ಬೌಲರ್‌ಗಳ ಲೈನ್ ಅಂಡ್ ಲೆಂಗ್ತ್ ಮಿಸ್ ಮಾಡಿಸಿ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ಪರ ಓಪನರ್ ಬೆನ್ ಡಕೆಟ್ 141 ರನ್ ಚಚ್ಚಿದರೆ, ಜಾಕೋಬ್ ಬೆಥೆಲ್ 91 ರನ್ ಗಳಿಸಿದರು. ಜೋ ರೂಟ್ (91*) ಅಜೇಯರಾಗಿ ಉಳಿದರೆ, ಕ್ಯಾಪ್ಟನ್ ಜೋಸ್ ಬಟ್ಲರ್ 13 ಎಸೆತಗಳಲ್ಲಿ ಅಜೇಯ 41 ರನ್ ಸಿಡಿಸಿ ಡೆತ್ ಓವರ್‌ಗಳಲ್ಲಿ ಅಬ್ಬರಿಸಿದರು. ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರು.

ಟೀಮ್ ಇಂಡಿಯಾದ ಮುಜುಗರದ ದಾಖಲೆ

ಲಾರ್ಡ್ಸ್‌ನಲ್ಲಿ ನಡೆದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದು ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮೊದಲು, 1975 ರಲ್ಲಿ ಈ ಮೈದಾನದಲ್ಲಿ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ 334/4 ಗಳಿಸಿತ್ತು. ಗುರ್ನೂರ್ ಬ್ರಾರ್ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಅತ್ಯಂತ ದುಬಾರಿ ಬೌಲರ್ ಆದರು. ಬ್ರಾರ್ 10 ಓವರ್‌ಗಳಲ್ಲಿ 97 ರನ್‌ಗಳನ್ನು ನೀಡಿದರು, ಆದರೆ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದರ ಹೊರತಾಗಿ, ಅರ್ಶ್‌ದೀಪ್ 10 ಓವರ್‌ಗಳಲ್ಲಿ 72 ರನ್‌ಗಳನ್ನು, ಪ್ರಸಿದ್ಧ್ ಕೃಷ್ಣ 10 ಓವರ್‌ಗಳಲ್ಲಿ 69 ರನ್‌ಗಳನ್ನು ಮತ್ತು ಅಕ್ಷರ್ ಪಟೇಲ್ 10 ಓವರ್‌ಗಳಲ್ಲಿ 61 ರನ್‌ಗಳನ್ನು ನೀಡಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು.

ತಂಡದ ಆಯ್ಕೆಯಲ್ಲಿ ಎಡವಟ್ಟು!

ಕಳೆದ ತಿಂಗಳು ಟೀಮ್ ಇಂಡಿಯಾದ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿತ್ತು. ಐರ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಲ್ಲಿ ವೈಟ್‌ವಾಶ್ ಆಗಿತ್ತು, ನಂತರ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಸೋತಿತು. ಟೀಮ್ ಇಂಡಿಯಾ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತು, ಆದರೆ ಎರಡನೇ ಪಂದ್ಯದಲ್ಲಿ ತಂಡವು ಮತ್ತೊಂದು ಸೋಲನ್ನು ಅನುಭವಿಸಿತು. ಇದರ ನಂತರ, ಮೂರನೇ ಏಕದಿನ ಪಂದ್ಯದಲ್ಲೂ ಭಾರತೀಯ ಬೌಲರ್‌ಗಳು ಕಳಪೆ ಪ್ರದರ್ಶನ ತೋರಿದರು. ಆದ್ದರಿಂದ ತಂಡದ ಆಯ್ಕೆಯಲ್ಲೇ ಎಡವಟ್ಟಾಗಿದೆ ಎಂದು ಕ್ರಿಕೆಟ್ ದಿಗ್ಗಜ್ಜರು ಮೌನ ಮುರಿದಿದ್ದಾರೆ.

ಬೌಲರ್‌ಗಳ ಕಳಪೆ ಪ್ರದರ್ಶನ!

ಅನನುಭವಿ ಆಟಗಾರರಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಅವಕಾಶ ನೀಡಲಾಯಿತು. ಆದರೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಡಲಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಪ್ರಸಿದ್ಧ ಕೃಷ್ಣ ಅವರನ್ನು ಎದುರಾಳಿಗಳು ಹೆಚ್ಚಾಗಿ ಆಕ್ರಮಣ ಮಾಡುತ್ತಿರುವುದು ಕಂಡುಬಂದಿದೆ, ಆದರೆ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಐಪಿಎಲ್‌ನಾದ್ಯಂತ ಫಾರ್ಮ್‌ಗಾಗಿ ಹೆಣಗಾಡಿದರು ಮತ್ತು ಗುರ್ನೂರ್ ಬ್ರಾರ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಅನುಭವವೂ ಕಡಿಮೆಯಾಗಿದೆ. ಆದ್ದರಿಂದ ಪದೇ ಪದೇ ಟೀ ಇಂಡಿಯಾ ಎಡುವುತ್ತಿದೆ ಎನ್ನುವುದಕ್ಕೆ ಇಂದಿನ ಪಂದ್ಯ ಸಾಕ್ಷೊಯಾಗಿದೆ.

ಇಬ್ಬರು ಅನುಭವಿ ಆಟಗಾರರನ್ನು ತಂಡದಿಂದ ಹೊರಗಿಡಲಾಯಿತು.!

ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರಿಗೂ ಅವಕಾಶ ನೀಡಲಾಗುತ್ತಿಲ್ಲ. ಈ ಇಬ್ಬರೂ ಆಟಗಾರರು ಕಳೆದ ಎರಡು ಇಂಗ್ಲೆಂಡ್ ಪ್ರವಾಸಗಳಲ್ಲಿ ತಮ್ಮ ಅನುಭವದ ಬಲದಿಂದ ಪ್ರಾಬಲ್ಯ ಸಾಧಿಸಿದ್ದರು, ಆದರೆ ಗಂಭೀರ್ ಮತ್ತು ಅಗರ್ಕರ್ ಅವರನ್ನು ಇಷ್ಟಪಡುತ್ತಿಲ್ಲ, ಹಾಗಾದರೆ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಅವರಿಗೆ ಏಕೆ ಅವಕಾಶ ನೀಡುತ್ತಿಲ್ಲ? ಇದು ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಆದ್ದರಿಂದ ಈ ಕಳಪೆ ಪ್ರದರ್ಶನಕ್ಕೆ ಅವರೇ ಹೊಣೆ ಎನ್ನುವ ಮಾತು ಕೇಳಿ ಬರುತ್ತಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಕೆಟ್ಟ ದಾಖಲೆ ಬರೆದ ಗುರ್ನೂರ್ ಬ್ರಾರ್; ಇಂಗ್ಲೆಂಡ್‌ಗೆ ಒಲಿದ ಅತಿದೊಡ್ಡ ರೆಕಾರ್ಡ್!
ENG VS IND: 54 ವರ್ಷಗಳ ಏಕದಿನ ಇತಿಹಾಸದಲ್ಲೇ ಇದೇ ಮೊದಲು! ಲಾರ್ಡ್ಸ್‌ನಲ್ಲಿ ವಿಶ್ವ ದಾಖಲೆಗಳ ಸುರಿಮಳೆ!