100ನೇ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಮಾಡಿದ ಧೋನಿ-ರೈನಾ

First Published Jun 28, 2018, 4:06 PM IST
Highlights

ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಶಿಖರ್ ಧವನ್ ಆಕರ್ಷಕ ಅರ್ಧಶತಕ ಹಾಗೂ ಮಣಿಕಟ್ಟು ಸ್ಪಿನ್ನರ್’ಗಳಾದ ಚಾಹಲ್-ಕುಲ್ದೀಪ್ ಮಾಂತ್ರಿಕ ಸ್ಪಿನ್ ನೆರವಿನಿಂದ ಭಾರತ ತಂಡ 100ನೇ ಪಂದ್ಯದಲ್ಲಿ 76 ರನ್’ಗಳ ಭರ್ಜರಿ ಜಯ ದಾಖಲಿಸಿದೆ.

ಬೆಂಗಳೂರು[ಜೂ.28]: ಭಾರತ-ಐರ್ಲೆಂಡ್ ನಡುವಿನ ಟಿ20 ಪಂದ್ಯವು ಟೀಂ ಇಂಡಿಯಾ ಪಾಲಿಗೆ ನೂರನೇ ಅಂತರಾಷ್ಟ್ರೀಯ ಪಂದ್ಯವಾಗಿತ್ತು. ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಶಿಖರ್ ಧವನ್ ಆಕರ್ಷಕ ಅರ್ಧಶತಕ ಹಾಗೂ ಮಣಿಕಟ್ಟು ಸ್ಪಿನ್ನರ್’ಗಳಾದ ಚಾಹಲ್-ಕುಲ್ದೀಪ್ ಮಾಂತ್ರಿಕ ಸ್ಪಿನ್ ನೆರವಿನಿಂದ ಭಾರತ ತಂಡ 100ನೇ ಪಂದ್ಯದಲ್ಲಿ 76 ರನ್’ಗಳ ಭರ್ಜರಿ ಜಯ ದಾಖಲಿಸಿದೆ.

ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಬಳಿಕ 100ನೇ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ 7ನೇ ತಂಡವೆನ್ನುವ ಗೌರವಕ್ಕೆ ಭಾರತ ಪಾತ್ರವಾಗಿದೆ. ಇದರ ಜತೆಗೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ ಅಪರೂಪದ ಸಾಧನೆ ಮಾಡಿದ್ದಾರೆ.

ಹೌದು, ಭಾರತ ಪರ ಮೊದಲ ಹಾಗೂ ನೂರನೇ ಅಂತರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಭಾರತ ತಂಡವು 2006ರ ಡಿಸೆಂಬರ್ 01ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿತ್ತು. ಈ ಪಂದ್ಯವನ್ನು ಭಾರತ 6 ವಿಕೆಟ್’ಗಳ ಅಂತರದ ಜಯಭೇರಿ ಬಾರಿಸಿತ್ತು. ಧೋನಿ ಶೂನ್ಯ ಸುತ್ತಿದ್ದರೆ, ರೈನಾ ಅಜೇಯ 3 ರನ್ ಬಾರಿಸಿದ್ದರು. ಇನ್ನು ನೂರನೇ ಪಂದ್ಯದಲ್ಲಿ ರೈನಾ 10 ಹಾಗೂ ಧೋನಿ 11 ರನ್ ಬಾರಿಸಿದ್ದಾರೆ.
     

click me!