
ಮುಂಬೈ(ಜ.11): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸತತ ಎರಡನೇ ವರ್ಷವೂ ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 2018ರಲ್ಲಿ ಶೇ.18ರಷ್ಟು ಅಂದರೆ 1253 ಕೋಟಿ ರು.ಗೆ ಏರಿಕೆಯಾಗಿದೆ. 2018ರ ನವೆಂಬರ್ 18ರ ವರೆಗೆ ಕೊಹ್ಲಿ 24 ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡಿದ್ದಾರೆ ಎಂದು ಜಾಗತಿಕ ಮೌಲ್ಯಮಾಪನ ಮತ್ತು ಕಾರ್ಪೊರೇಟ್ ಹಣಕಾಸು ಸಲಹೆಗಾರ ಸಂಸ್ಥೆ ಡಫ್ ಆ್ಯಂಡ್ ಫೆಲಿಪ್ಸ್, ಭಾರತದ ಮೌಲ್ಯಯುತ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ನಾಲ್ಕನೇ ಆವೃತ್ತಿಯ ವರದಿಯಲ್ಲಿ ತಿಳಿಸಿದೆ.
ಕೊಹ್ಲಿ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 717 ಕೋಟಿ ರು. ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ 20 ಅಗ್ರ 20 ಸೆಲೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯ 6139 ಕೋಟಿ ರು.ಗಳಾಗಿವೆ. ನಟರಾದ ಅಕ್ಷಯ್ ಮತ್ತು ರಣವೀರ್ ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದು, 3 ಮತ್ತು 4ನೇ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.