
ದಂಬುಲ್ಲಾ(ಮಾ.29): ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ 2ನೇ ಏಕದಿನ ಪಂದ್ಯದ ಕೊನೆ ಓವರ್'ನಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಬಾಂಗ್ಲಾ ದೇಶದ 5ನೇ ಬೌಲರ್ ಎನ್ನುವ ದಾಖಲೆ ಬರೆದರು.
ಸತತ ಮೂರು ಎಸೆತಗಳಲ್ಲಿ ಅಸಿಲಾ ಗುಣರತ್ನೆ, ಸುರಂಗ ಲಕ್ಮಾಲ್ ಹಾಗೂ ನುವಾನ್ ಪ್ರದೀಪ್ ವಿಕೆಟ್ ಕಬಳಿಸಿದ ಬಾಂಗ್ಲಾ ವೇಗಿ ಟಸ್ಕಿನ್ ಅಹಮದ್ ಬಾಂಗ್ಲಾದೇಶದ ಹ್ಯಾಟ್ರಿಕ್ ವಿಕೆಟ್ ಸಾಧಕರ ಕ್ಲಬ್ಬಿಗೆ ಹೊಸದಾಗಿ ಸೇರ್ಪಡೆಗೊಂಡರು. ಆ ಮೂಲಕ ಏಕದಿನ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಶಹದತ್ ಹುಸೈನ್, ಅಬ್ದುರ್ ರಜಾಕ್, ತೈಜುಲ್ ಇಸ್ಲಾಂ ಹಾಗೂ ರುಬೆಲ್ ಹುಸೈನ್ ಅವರ ಸಾಲಿಗೆ ಸೇರಿದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಂಕಾ, ಕುಶಾಲ್ ಮೆಂಡಿಸ್ ಶತಕದ ನೆರವಿನಿಂದ 312 ರನ್ ಕಲೆಹಾಕಿತು. ನಿರಂತರವಾಗಿ ಮಳೆ ಸುರಿದ ಕಾರಣ ಬಾಂಗ್ಲಾ ಇನ್ನಿಂಗ್ಸ್ ಆರಂಭಗೊಳ್ಳದೆ ಪಂದ್ಯ ರದ್ದು ಎಂದು ರೆಫ್ರಿ ಘೋಷಿಸಿದರು.
ಪಾಕಿಸ್ತಾನದ ಜಲಾಲ್-ಉದ್-ದೀನ್ ಏಕದಿನ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದರು. 1982ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವೇಗಿ ಸತತ ಮೂರು ವಿಕೆಟ್ ಪಡೆದು ಹ್ಯಾಟ್ರಿಕ್ ನಿರ್ಮಿಸಿದ್ದಾರೆ.
ಹೀಗಿತ್ತು ಟಸ್ಕೀನ್ ಅಹಮ್ಮದ್ ಮಾಡಿದ ಹ್ಯಾಟ್ರಿಕ್...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.