ಲಂಕಾ ತಂಡದ ಕೈ ಹಿಡಿದ ಕುಸಾಲ್ ಪರೇರಾ-ಸರಣಿ ಸಮಭಲ

First Published Jun 27, 2018, 2:19 PM IST
Highlights

ಸರಣಿಯಲ್ಲಿ ಹಿನ್ನಡೆ, ನಾಯಕ ದಿನೇಶ್ ಚಾಂಡಿಮಾಲ್ ಚೆಂಡು ವಿರೂಪ ಪ್ರಕರಣದಿಂದ ನಿಷೇಧ, ಕುಸಾಲ್ ಪರೇರಾ ಇಂಜುರಿ, ಹೀಗೆ ಸಾಕಷ್ಟು ಅಡೆತಡೆ ಎದುರಿಸಿದ ಶ್ರೀಲಂಕಾ ತಂಡ ಅಂತಿಮ ಪಂದ್ಯ ಗೆಲ್ಲೋ ಮೂಲಕ ವೆಸ್ಟ್ಇಂಡೀಸ್ ಜೊತೆ ಸರಣಿ ಹಂಚಿಕೊಂಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ಬಾರ್ಬಡೋಸ್(ಜೂ.27):  ವೆಸ್ಟ್ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಈ ಮೂಲಕ ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕ ನಡುವಿನ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ 1-1 ಅಂತರದಲ್ಲಿ ಸಮಭಲಗೊಂಡಿದೆ. 

ವೆಸ್ಟ್ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ದಿಟ್ಟ ಹೋರಾಟ ನೀಡೋ ಮೂಲಕ ಗೆಲುವಿನ ನಗೆ ಬೀರಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ಇಂಡೀಸ್ 204 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ ಕೇವಲ 154 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ವೆಸ್ಟ್ಇಂಡೀಸ್ ತಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಸುರಂಗ ಲಕ್ಮಲ್ ಹಾಗೂ ಕುಸಾನ್ ರಾಜಿತ ದಾಳಿಗೆ ಗುಸಿದ ವಿಂಡೀಸ್ 93 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಶ್ರೀಲಂಕಾ ಗೆಲುವಿಗೆ 144 ರನ್ ಟಾರ್ಗೆಟ್ ನೀಡಿತು.

2ನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಲಂಕಾದ ಕುಸಾಲ್ ಪರೇರಾ ಸಿಕ್ಸರ್ ತಡೆಯಲು ಹೋಗಿ ಗಂಭೀರವಾಗಿ ಗಾಯಗೊಂಡರು. ಹೀಗಾಗಿ ಪರೇರಾ ಅವರನ್ನ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಾಯಿಸಿತು. ಬಳಿಕ ಚೇತರಿಸಿಕೊಂಡು ಅಂತಿಮ ಹಂತದಲ್ಲಿ ಕಣಕ್ಕಿಳಿದ ಕುಸಾಲ್ ಪರೇರಾ ಅಜೇಯ 28 ರನ್ ಸಿಡಿಸೋ ಮೂಲಕ ಲಂಕಾ ತಂಡಕ್ಕೆ 4 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಅಂತಿಮ ಪಂದ್ಯದ ಗೆಲುವಿನೊಂದಿಗೆ ಶ್ರೀಲಂಕಾ 3 ಟೆಸ್ಟ್ ಪಂದ್ಯಗಳ ಸರಣಿಯನ್ನ 1-1 ಅಂತರದಲ್ಲಿ ವೆಸ್ಟ್ಇಂಡೀಸ್ ಜೊತೆ ಹಂಚಿಕೊಂಡಿತು. ಬಾಲ್ ಟ್ಯಾಂಪರಿಂಗ್, ಇಂಜುರಿ ಸೇರಿದಂತೆ ಹಲವು ಅಡೆತಡೆ ಎದುರಿಸಿದ ಶ್ರೀಲಂಕಾ ತಂಡ ಕೊನೆಗೂ ಸರಣಿ ಸಮಭಲಗೊಳಿಸೋ ಮೂಲಕ ನಿಟ್ಟುಸಿರು ಬಿಟ್ಟಿದೆ.
 

click me!