ಚಾಂಪಿಯನ್ಸ್ ಟ್ರೋಫಿ: ಲಂಕಾ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು..!

Published : Apr 24, 2017, 03:33 PM ISTUpdated : Apr 11, 2018, 12:41 PM IST
ಚಾಂಪಿಯನ್ಸ್ ಟ್ರೋಫಿ: ಲಂಕಾ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು..!

ಸಾರಾಂಶ

ಕಳಪೆ ಫಾರ್ಮ್'ನಿಂದ ತಂಡದಿಂದ ಹೊರಬಿದ್ದಿದ್ದ ಚಾಮರಾ ಕಪುಗೆಡರ, ದೇಶಿಯ ಟೂರ್ನಿಯಲ್ಲಿ ಉತ್ತಮ ರನ್ ಕಲೆಹಾಕಿರುವ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಬಳಿಕ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಕೊಲಂಬೋ(ಏ.24): ಮುಂದಿನ ಜೂನ್‌ 01ರಿಂದ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಶ್ರೀಲಂಕಾದ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.

ಗಾಯಾಳುಗಳಾದ ಕಾರಣ ಈ ಹಿಂದೆ ತಂಡದಿಂದ ಹೊರಬಿದ್ದಿದ್ದ ಲಸಿತ್ ಮಾಲಿಂಗ, ಆ್ಯಂಜೆಲೋ ಮ್ಯಾಥ್ಯೂಸ್ ಅವರು ಮರಳಿ ತಂಡದಲ್ಲಿ ಸ್ಥಾನಪಡೆಯಲು ಯಶಸ್ವಿಯಾಗಿದ್ದಾರೆ. ಇನ್ನು ಆ್ಯಂಜಲೋ ಮ್ಯಾಥ್ಯೂಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕಳಪೆ ಫಾರ್ಮ್'ನಿಂದ ತಂಡದಿಂದ ಹೊರಬಿದ್ದಿದ್ದ 30 ವರ್ಷದ ಚಾಮರಾ ಕಪುಗೆಡರ, ದೇಶಿಯ ಟೂರ್ನಿಯಲ್ಲಿ ಉತ್ತಮ ರನ್ ಕಲೆಹಾಕಿರುವ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಬಳಿಕ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಶ್ರೀಲಂಕಾ ತಂಡ ಇಂತಿದೆ:

ಆ್ಯಂಜಲೋ ಮ್ಯಾಥ್ಯೂಸ್(ನಾಯಕ), ಉಪುಲ್ ತರಂಗ(ಉಪನಾಯಕ), ನಿರ್ಶೋನ್ ಡಿಕ್'ವೆಲ್ಲಾ, ಕುಸಾಲ್ ಪೆರೆರಾ, ಕುಸಾಲ್ ಮೆಂಡೀಸ್, ಚಾಮರಾ ಕಪುಗೆಡರ, ಅಸೀಲಾ ಗುಣರತ್ನೆ, ದಿನೇಶ್ ಚಾಂಡಿಮಲ್, ಲಸೀತ್ ಮಾಲಿಂಗ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ನುವಾನ್ ಕುಲಸೇಖರ, ತಿಸಾರ ಪೆರೆರಾ, ಲಕ್ಸನ್ ಸಂದಕನ್, ಸೀಕ್ಕುಗೆ ಪ್ರಸನ್ನ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?