
ಭಾನುವಾರ ರಾತ್ರಿ 9 ಗಂಟೆ ಹೊತ್ತಿಗೆ ಇಡೀ ಭಾರತವೇ ಟೀಂ ಇಂಡಿಯಾ ಗೆಲ್ಲುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿ ಮುಳುಗಿ ಹೋಗಿತ್ತು. ಟೆಕ್ಷನ್ನಲ್ಲಿ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಒದ್ದಾಡುತ್ತಿದ್ರು. ಆದ್ರೆ ಇದೇ ಟೈಮ್ನಲ್ಲಿ ದೂರದ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಶ್ವ ದಾಖಲೆ ನಿರ್ಮಾಣವಾಗಿತ್ತು. ಬಾಂಗ್ಲಾ ವಿರುದ್ಧದ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾದ ಡ್ಯಾಷಿಂಗ್ ಬ್ಯಾಟ್ಸ್ಮನ್ ಒಬ್ಬ ಇಡೀ ವಿಶ್ವವನ್ನೇ ದಂಗು ಬಡಿಸಿದ್ದ
ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗದ ಶತಕ ದಾಖಲಿಸಿದ ಮಿಲ್ಲರ್
ಇತ್ತ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣಸಾಟ ನಡೆಸುತ್ತಿದ್ರೆ ಸೌತ್ ಆಫ್ರಿಕಾದಲ್ಲಿ ಬಾಂಗ್ಲಾ ವಿರುದ್ಧ ಹರಿಣಗಳು ಟಿ20 ಪಂದ್ಯದಲ್ಲಿ ಕಾದಾಡುತ್ತಿದ್ರು. ಅದೇ ಪಂದ್ಯದಲ್ಲಿ ಕಿಲ್ಲರ್ ಮಿಲ್ಲರ್ ಅಬ್ಬರಿಸಿ ಬೊಬ್ಬರಿದಿದ್ದರು. ಬಾಂಗ್ಲಾ ಬೌಲರ್'ಗಳನ್ನ ಬೆಂಡೆತ್ತಿದ ಮಿಲ್ಲರ್ ಬೌಂಡರಿ ಸಿಕ್ಸ್ಗಳನ್ನ ಸಿಡಿಸಿದ್ರು. ಕ್ರೀಸ್'ಗೆ ಬಂದಾಗಿನಿಂದ ಆಕ್ರಮಣಕಾರಿ ಆಟವಾಡಿದ ಮಿಲ್ಲರ್ ಕೇವಲ 35 ಬಾಲ್ಗಳಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ರು.
ಕೇವಲ 35 ಬಾಲ್ಗಳಲ್ಲೇ ಶತಕ ಸಿಡಿಸುವುದರೊಂದಿಗೆ ಮಿಲ್ಲರ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ದಾಖಲೆ ಮಾಡಿದ್ರು. ತಮ್ಮದೇ ದೇಶದ ರಿಚರ್ಡ್ ಲಿವಿ 2012 ರಲ್ಲಿ 45 ಬಾಲ್ಗಳಲ್ಲಿ ಸಿಡಿಸಿದ್ದ ದಾಖಲೆಯನ್ನ ಮಿಲ್ಲರ್ ಪುಡಿಪುಡಿ ಮಾಡಿದ್ರು.
ತಮ್ಮ ಹಳ್ಳವನ್ನ ತಾವೇ ತೋಡಿಕೊಂಡ ಬಾಂಗ್ಲನ್ನರು
ನಿಜ ಹೇಳಬೇಕಂದ್ರೆ ಮೊನ್ನೆ ಮಿಲ್ಲರ್ ದಾಖಲೆಯ ಶತಕ ಸಿಡಿಸಲು ಸಾಧ್ಯವೇ ಆಗ್ತಿರಲಿಲ್ಲ. ಅವರ ಶತಕಕ್ಕೆ ಮುಖ್ಯ ಕಾರಣನೇ ಬಂಗ್ಲಾ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ ಮಾಡಿದ್ದ 1 ಎಡವಟ್ಟು. ಅದಕ್ಕೆ ಮಿಲ್ಲರ್ ಆ ರೆಕಾರ್ಡ್ ಅನ್ನ ರಹೀಮ್ಗೆ ಸಮರ್ಪಿಸಬೇಕು. ಕಾರಣ ಡೆವಿಡ್ ಮಿಲ್ಲರ್ ಖಾತೆ ತೆರೆಯುವ ಮುಂಚೆನೇ ಔಟಾಗಬೇಕಿತ್ತು. ಕ್ರೀಸ್ಗಿಳಿದು ಎದುರಿಸಿದ್ದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪಿವಿಲಿಯನ್ ಸೇರಿಕೊಳ್ಳಬೇಕಿತ್ತು. ಆದ್ರೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್, ಮಿಲ್ಲರ್ ನೀಡಿದ್ದ ಕ್ಯಾಚನ್ನ ಡ್ರಾಪ್ ಮಾಡಿ ಜೀವದಾನ ನೀಡಿದ್ರು.
ನೀಡಿದ ಜೀವದಾನವನ್ನ ಸಮರ್ಪಕವಾಗಿ ಬಳಸಿಕೊಂಡ ಮಿಲ್ಲರ್ ಬಾಂಗ್ಲಾರನ್ನ ಇನ್ನಿಲ್ಲದಂತೆ ಕಾಡಿದ್ರು. ಬೌಲರ್ಗಳನ್ನ ಬೆಂಡೆತ್ತಿದ್ರು. ದಾಖಲೆಯ ಶತಕ ಸಿಡಸಿ ಒಂದು ಚಾನ್ಸ್ ನೀಡಿದ್ರೆ ಏನೆಲ್ಲಾ ಆಗುತ್ತೆ ಅಂತ ತೋರಿಸಿಕೊಟ್ರು.
ಒಟ್ಟಿನಲ್ಲಿ ಮೊನ್ನೆಯ ಮಿಲ್ಲರ್ ಇನ್ನಿಂಗ್ಸ್ ನೋಡುಗರಿಗೆ ಕಿಕ್ ಹೆಚ್ಚಿಸಿತ್ತು. ಸೌತ್ ಆಫ್ರಿಕಾದ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸ ದೌತಣ ಸಿಕ್ಕಿತ್ತು. ಆದ್ರೆ ಕ್ಯಾಚ್ ಡ್ರಾಪ್ ಮಾಡಿ ಬಾಂಗ್ಲಾ ಸ್ಥಿತಿ ಇಂಗು ತಿಂದ ಮಂಗನಂತಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.