ಶಕೀಬ್ ಚೊಚ್ಚಲ ದ್ವಿಶತಕ; ಬೃಹತ್ ಮೊತ್ತದತ್ತ ಬಾಂಗ್ಲಾ

By Suvarna Web DeskFirst Published Jan 13, 2017, 4:26 PM IST
Highlights

ಮೊದಲ ದಿನದಾಟಕ್ಕೆ ಮಳೆ ಕೊಂಚ ಅಡ್ಡಿಪಡಿಸಿತ್ತು. ಆದರೆ ಎರಡನೇ ದಿನದಾಟದಲ್ಲಿ ಶಕೀಬ್ ಅಲ್ ಹಸನ್ ಮತ್ತು ಮುಷ್ಫೀಕರ್ ರಹೀಂ ರನ್ ಮಳೆ ಸುರಿಸಿದರು.

ವೆಲ್ಲಿಂಗ್ಟನ್(ಜ.13): ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಶಕೀಬ್ ಅಲ್ ಹಸನ್ (217) ಮತ್ತು ನಾಯಕ ಮುಷ್ಫೀಕರ್ ರಹೀಂ (159) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ.

ಇಲ್ಲಿನ ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರದ ಅಂತ್ಯಕ್ಕೆ ಶಬ್ಬೀರ್ ರೆಹಮಾನ್ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇನ್ನು 3 ವಿಕೆಟ್‌ಗೆ 154 ರನ್‌'ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಬಾಂಗ್ಲಾದೇಶ, ದಿನಾಂತ್ಯಕ್ಕೆ 7 ವಿಕೆಟ್‌ಗೆ 542 ರನ್ ಗಳಿಸಿತು. ದಿನವಿಡೀ ಬ್ಯಾಟಿಂಗ್ ಮಾಡಿದ ಪ್ರವಾಸಿ ಬಾಂಗ್ಲಾದೇಶ 4 ವಿಕೆಟ್ ಕಳೆದುಕೊಂಡು 388 ರನ್ ಗಳಿಸಿತು.

ಮೊದಲ ದಿನದಾಟಕ್ಕೆ ಮಳೆ ಕೊಂಚ ಅಡ್ಡಿಪಡಿಸಿತ್ತು. ಆದರೆ ಎರಡನೇ ದಿನದಾಟದಲ್ಲಿ ಶಕೀಬ್ ಅಲ್ ಹಸನ್ ಮತ್ತು ಮುಷ್ಫೀಕರ್ ರಹೀಂ ರನ್ ಮಳೆ ಸುರಿಸಿದರು.

ಆಲ್ರೌಂಡರ್ ಶಕೀಬ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ವೃತ್ತಿ ಜೀವನದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು. ಇನ್ನು ನಾಯಕ ಮುಷ್ಫೀಕರ್ ರಹೀಂ 4ನೇ ಶತಕ ದಾಖಲಿಸಿದರು. ಈ ಇಬ್ಬರು ಆಟಗಾರರು ನ್ಯೂಜಿಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಜೋಡಿ 5ನೇ ವಿಕೆಟ್‌ಗೆ 359 ರನ್‌ಗಳನ್ನು ಸೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ನ್ಯೂಜಿಲೆಂಡ್ ಪರ ನೀಲ್ ವ್ಯಾಗ್ನರ್ 3, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ ಮೊದಲ ಇನಿಂಗ್ಸ್:542/7

ಶಕೀಬ್ ಅಲ್ ಹಸನ್ 217

ಮುಷ್ಫೀಕರ್ 159

click me!