
ನವದೆಹಲಿ(ಫೆ.06): ಭಾರತದಲ್ಲಿ ಜನರನ್ನು ಹುಚ್ಚೆಬ್ಬಿಸುವಂತೆ ಮಾಡುವುದು ಕ್ರಿಕೆಟ್ ಕ್ರೇಜ್. ಇಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಕ್ರಿಕೆಟ್ ನೋಡಿ ಆನಂದಪಟ್ಟುಕೊಳ್ಲುತ್ತಾರೆ. ಇನ್ನು ಕ್ರಿಕೆಟ್ ಟೀಂನಲ್ಲಿ ಆಡಬೇಕೆನ್ನುವುದು ಬಹುತೇಕರ ಯುವಕರಲ್ಲಿರುವ ಆಸೆ.
ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಆಟಗಾರನಾಗಲು ಓರ್ವ ವ್ಯಕ್ತಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಆದರೆ ಒಂದು ಬಾರಿ ಈ ಕ್ಷೇತ್ರಕ್ಕೆ ಎಂಟ್ರಿ ಸಿಕ್ಕಿತೆಂದರೆ ಹಣದ ಹೊಳೆ ಹರಿಯಲಾರಂಭಿಸುತ್ತದೆ. ಹಾಗಾದರೆ ಕ್ರಿಕೆಟಿಗರಿಗಿರುವ ವೇತನವೆಷ್ಟು? ಅವರ ವೇತನದ ಕುರಿತು ಕೇಳಿ ಶಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
BCCI ಕ್ರಿಕೆಟ್ ಆಟಗಾರರಿಗೆ A, B ಹಾಗೂ C ಎಂಬ ಮೂರು ವಿಭಿನ್ನ ಗ್ರೇಡ್ ನೀಡುತ್ತದೆ.
ಗ್ರೇಡ್ A ಅಡಿಯಲ್ಲಿ ಬರುವ ಆಟಗಾರರಿಗೆ BCCI ವರ್ಷವೊಂದಕ್ಕೆ 1 ಕೋಟಿ ವೇತನ ನೀಡುತ್ತದೆ. ಇದನ್ನು ಹೊರತುಪಡಿಸಿ ಈ ಆಟಗಾರರಿಗೆ: ಒಂದು ಟೆಸ್ಟ್ ಪಂದ್ಯವಾಡಲು 15 ಲಕ್ಷ, ಒಂದು ಏಕದಿನ ಪಂದ್ಯವಾಡಲು 3 ಲಕ್ಷ ಹಾಗೂ ಒಂದು ಟಿ 20 ಪಂದ್ಯವಾಡಲು 1.5 ಲಕ್ಷ ರೂಪಾಯಿ ಪ್ರತ್ಯೇಕವಾಗಿ ನೀಡುತ್ತದೆ.
ಈ ಗ್ರೇಡ್'ನಲ್ಲಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಹಾಗೂ ರವಿಚಂದ್ರನ್ ಅಶ್ವಿನ್ ಸೇರಿ ಒಟ್ಟು 4 ಮಂದಿ ಆಟಗಾರರಿದ್ದಾರೆ.
ಗ್ರೇಡ್ B ನಲ್ಲಿ ಬರುವ ಆಟಗಾರರಿಗೆ BCCI ಒಂದು ವರ್ಷಕ್ಕೆ 50 ಲಕ್ಷ ರೂಪಾಯಿ ವೇತನ ನೀಡುತ್ತದೆ. ಇದನ್ನು ಹೊರತುಪಡಿಸಿ ಒಂದು ಟೆಸ್ಟ್ ಪಂದ್ಯವಾಡಲು 3 ಲಕ್ಷ, ಒಂದು ಏಕದಿನ ಪಂದ್ಯವಾಡಲು 2 ಲಕ್ಷ ಹಾಗೂ ಒಂದು ಟಿ 20 ಪಂದ್ಯವಾಡಲು 1.5 ಲಕ್ಷ ರೂಪಾಯಿ ಈ ಆಟಗಾರರಿಗೆ ಪ್ರತ್ಯೇಕವಾಗಿ ನೀಡುತ್ತದೆ.
ಈ ಗ್ರೇಡ್'ನಲ್ಲಿ ಸುರೇಶ್ ರೈನಾ, ರೋಹಿತ್ ಶರ್ಮಾ, ಅಂಬಾಟಿ ರಾಯಡು, ಮುರಳಿ ವಿಜಯ್, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ್ ಹಾಗೂ ಮಹಮ್ಮದ್ ಶಮಿಯವರ ಹೆಸರಿದೆ.
ಗ್ರೇಡ್ C ನಲ್ಲಿ ಬರುವ ಆಟಗಾರರಿಗೆ BCCI ಒಂದು ವರ್ಷಕ್ಕೆ 25 ಲಕ್ಷ ರೂಪಾಯಿ ವೇತನ ನೀಡುತ್ತದೆ. ಇದನ್ನು ಹೊರತುಪಡಿಸಿ ಒಂದು ಟೆಸ್ಟ್ ಪಂದ್ಯವಾಡಲು 3 ಲಕ್ಷ, ಒಂದು ಏಕದಿನ ಪಂದ್ಯವಾಡಲು 2 ಲಕ್ಷ ಹಾಗೂ ಟಿ 20 ಪಂದ್ಯವಾಡಲು 1.5 ಲಕ್ಷ ರೂಪಾಯಿ ಈ ಆಟಗಾರರಿಗೆ ಪ್ರತ್ಯೇಕವಾಗಿ ನೀಡುತ್ತದೆ.
ಈ ಗ್ರೇಡ್ ಪಟ್ಟಿಯಲ್ಲಿ ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಸ್ಟುವರ್ಟ್ ಬಿನ್ನಿ, ಋದ್ಧಿಮಾನ್ ಸಾಹಾ, ಮೋಹಿತ್ ಶರ್ಮಾ, ವರುಣ್ ಅರೋನ್, ಕರಣ್ ಶರ್ಮಾ, ರವೀಂದ್ರ್ ಜಡೇಜಾ, ಕೆ. ಎಲ್. ರಾಹುಲ್, ಧವನ್ ಕುಲಕರ್ಣಿ, ಹರ್ಭಜನ್ ಸಿಂಗ್, ಶ್ರೀನಾಥ್ ಅರವಿಂದ್ ಮೊದಲಾದವರ ಹೆಸರಿದೆ.
ಇಷ್ಟೇ ಅಲ್ಲದೆ, ಏಕದಿನ ಅಥವಾ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದರೆ 5 ಲಕ್ಷ ರೂಪಾಯಿ ಬೋನಸ್ ರೂಪದಲ್ಲಿ ನೀಡಲಾಗುತ್ತದೆ. ದ್ವಿಶತಕ ಬಾರಿಸಿದಲ್ಲಿ 7 ಲಕ್ಷ ರೂಪಾಯಿ, 5 ವಿಕೆಟ್ ಕಸಿದುಕೊಂಡಲ್ಲಿ 5 ಲಕ್ಷ ರೂಪಾಯಿ ಪ್ರತ್ಯೇಕವಾಗಿ ನೀಡುತ್ತಾರೆ. ಇದಲ್ಲದೆ ಟೆಸ್ಟ್ ಕ್ರಿಕೆಟ್'ನಲ್ಲಿ ಓರ್ವ ಕ್ರಿಕೆಟಿಗ 10 ವಿಕೆಟ್ ಕಸಿದುಕೊಳ್ಳುತ್ತಾನೆಂದಾದರೆ ಆತನಿಗೆ ಬಹುಮಾನ ರೂಪದಲ್ಲಿ 7 ಲಕ್ಷ ರೂಪಾಯಿ ನೀಡುತ್ತಾರೆ.
ಕೃಪೆ: ಲೈವ್ ಇಂಡಿಯಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.