ವಾರಿಯರ್ಸ್'ಗೆ ಮುನ್ನಡೆ ತಂದ ಸೈನಾ

Published : Jan 05, 2017, 04:16 PM ISTUpdated : Apr 11, 2018, 12:39 PM IST
ವಾರಿಯರ್ಸ್'ಗೆ ಮುನ್ನಡೆ ತಂದ ಸೈನಾ

ಸಾರಾಂಶ

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೈನಾ 14-12, 11-7 ಎರಡು ನೇರ ಗೇಮ್‌'ಗಳಿಂದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಸಾಧಿಸಿದರು.

ಲಖನೌ(ಜ.05): ಅವಧ್ ವಾರಿಯರ್ಸ್‌'ನ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ಎರಡನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ದೆಹಲಿ ಏಸರ್ಸ್ ತಂಡದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಪಡೆದಿದ್ದಾರೆ. ಇದರೊಂದಿಗೆ ಅವಧ್ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು.

ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೈನಾ 14-12, 11-7 ಎರಡು ನೇರ ಗೇಮ್‌'ಗಳಿಂದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಸಾಧಿಸಿದರು. ಪಂದ್ಯದ ಆರಂಭದಿಂದಲೂ ನಡೆದ ರೋಚಕ ಹೋರಾಟದಲ್ಲಿ ಸೈನಾ, ಎದುರಾಳಿ ಆಟಗಾರ್ತಿ ನಿಟ್ಚೌನ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಎರಡು ಗೇಮ್‌'ಗಳ ಪಂದ್ಯದಲ್ಲಿ ಸೈನಾ ಕ್ರಮವಾಗಿ 2 ಮತ್ತು 4 ಪಾಯಿಂಟ್ಸ್‌ಗಳ ಅಂತರದಲ್ಲಿ ಪಂದ್ಯ ಜಯಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ವಾರಿಯರ್ಸ್‌ನ ಕೆ. ಶ್ರೀಕಾಂತ್ 11-9, 11-13, 11-9 ಗೇಮ್‌'ಗಳಿಂದ ದೆಹಲಿಯ ಜಾನ್ ಓ ಜೊರ್ಗೆನ್ಸನ್ ಎದುರು ಜಯ ದಾಖಲಿಸಿದರು. ಇದರೊಂದಿಗೆ ವಾರಿಯರ್ಸ್ ತಂಡದ ಮುನ್ನಡೆಗೆ ಕಾರಣರಾದರು. ಮೊದಲ ಗೇಮ್‌'ನಲ್ಲಿ ಶ್ರೀಕಾಂತ್, ಎದುರಾಳಿ ಆಟಗಾರನಿಗೆ ಬಿಸಿ ಮುಟ್ಟಿಸಿದರು. ಪ್ರಭಾವಿ ಸ್ಮಾಶ್‌'ಗಳಿಂದ ಜೊರ್ಗೆನ್ಸನ್ ಅವರನ್ನು ದಂಗಬಡಿಸಿದ ಶ್ರೀಕಾಂತ್, ಮೊದಲ ಗೇಮ್‌'ನಲ್ಲಿ 2 ಪಾಯಿಂಟ್ಸ್ ಮುನ್ನಡೆ ಪಡೆದರು. ಎರಡನೇ ಗೇಮ್‌'ನಲ್ಲಿ ಕೊಂಚ ವಿಚಲಿತರಾದಂತೆ ಕಂಡ ಶ್ರೀಕಾಂತ್‌ಗೆ, ದೆಹಲಿ ತಂಡದ ಆಟಗಾರ ಜೊರ್ಗೆನ್ಸನ್ ತಿರುಗೇಟು ನೀಡುವಲ್ಲಿ ಸಫಲರಾದರು. ನಂತರದ ನಿರ್ಣಾಯಕ ಗೇಮ್‌ನಲ್ಲಿ ಮತ್ತದೇ 2 ಅಂಕಗಳ ಅಂತರ ಕಾಯ್ದುಕೊಂಡ ಶ್ರೀಕಾಂತ್ ಪಂದ್ಯ ಜಯಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?