ಸೆಹ್ವಾಗ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ತೆಂಡುಲ್ಕರ್

First Published Jun 10, 2018, 12:07 PM IST
Highlights

ಸೆಹ್ವಾಗ್-ಸಚಿನ್ ಜೋಡಿ ಭಾರತ ಪರ 93 ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದು 42.13ರ ಸರಾಸರಿಯಲ್ಲಿ 3,919 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 18 ಅರ್ಧಶತಕಗಳ ಜತೆಯಾಟವಾಡಿದ್ದಾರೆ. 

ನವದೆಹಲಿ(ಜೂ.10): ವೀರೇಂದ್ರ ಸೆಹ್ವಾಗ್ ಜತೆ ಆರಂಭಿಕ ದಿನಗಳಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎನಿಸುತ್ತಿತ್ತು ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಆನ್‌ಲೈನ್ ಶೋವೊಂದರಲ್ಲಿ ಒಟ್ಟಿಗೆ ಪಾಲ್ಗೊಂಡಿರುವ ಸಚಿನ್ ಹಾಗೂ ಸೆಹ್ವಾಗ್, ಭಾರತ ತಂಡದ ಅನೇಕ ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ‘ಸೆಹ್ವಾಗ್ ಜತೆ ಇನ್ನಿಂಗ್ಸ್ ಆರಂಭಿಸುವುದು ಆರಂಭದ ದಿನಗಳಲ್ಲಿ ಕಷ್ಟವಾಗುತ್ತಿತ್ತು. ಯಾಕೆಂದರೆ ಸೌಮ್ಯ ಸ್ವಭಾವದ ವೀರೂ ಮಾತೇ ಆಡುತ್ತಿರಲಿಲ್ಲ. ಸಹ ಆಟಗಾರ ಬಾಯೇ ಬಿಡದಿದ್ದಾಗ ಕ್ರೀಸ್ ಹಂಚಿಕೊಂಡು ಉತ್ತಮ ಜೊತೆಯಾಟವಾಡುವುದು ಕಷ್ಟ ಸಾಧ್ಯ. ಹೀಗಾಗಿ ಒಮ್ಮೆ ಹೊರಗೆ ಊಟಕ್ಕೆ ಕರೆದೊಯ್ದು ವೀರೂ ಜತೆ ಒಡನಾಟ ಬೆಳೆಸಿಕೊಳ್ಳಲು ಆರಂಭಿಸಿದೆ. ಬಳಿಕ ನಮ್ಮ ಜೋಡಿ ವಿಶ್ವ ಕ್ರಿಕೆಟ್‌ನ ಯಶಸ್ವಿ ಜೋಡಿಯಾಗಿ ಬದಲಾಯಿತು’ ಎಂದು ಸಚಿನ್ ಹೇಳಿಕೊಂಡಿದ್ದಾರೆ. ಮೇಲ್ನೋಟಕ್ಕೆ ಸೆಹ್ವಾಗ್ ಸಾಕಷ್ಟು ತಮಾಶೆಯಾಗಿ ಕಾಣುವ ಸೆಹ್ವಾಗ್ ಸೌಮ್ಯ ಸ್ವಭಾವದವರು ಎಂಬ ಸಚಿನ್ ಮಾತು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಸೆಹ್ವಾಗ್-ಸಚಿನ್ ಜೋಡಿ ಭಾರತ ಪರ 93 ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದು 42.13ರ ಸರಾಸರಿಯಲ್ಲಿ 3,919 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 18 ಅರ್ಧಶತಕಗಳ ಜತೆಯಾಟವಾಡಿದ್ದಾರೆ. 

click me!