* ಫ್ರೆಂಚ್ ಓಪನ್ ಪುರುಷರ ಸೆಮೀಸ್‌ನಲ್ಲಿ ಗಾಯಗೊಂಡು ಹೊರಬಿದ್ದ ಅಲೆಕ್ಸಾಂಡರ್ ಜ್ವರೆವ್
* ತೀವ್ರ ರೋಚಕತೆ ಹುಟ್ಟುಹಾಕಿದ್ದ ಅಲೆಕ್ಸಾಂಡರ್ ಜ್ವರೆವ್ - ರಾಫೆಲ್ ನಡಾಲ್ ಕಾದಾಟ
* ಆಡುವಾಗ ಬಿದ್ದು ಮೊಣಕಾಲು ಗಾಯಕ್ಕೊಳಗಾದ ಜ್ವರೆವ್ ಅವರನ್ನುಸಂತೈಸಿದ ನಡಾಲ್
ನವದೆಹಲಿ(ಜೂ.04): ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ (Rafael Nadav vs Alexander Zverev) ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮುಖಾಮುಖಿಯಾಗಿದ್ದರು. ಚೊಚ್ಚಲ ಬಾರಿಗೆ ಸೆಮೀಸ್‌ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬೀಳುವುದರೊಂದಿಗೆ ಅಲೆಕ್ಸಾಂಡರ್ ಜ್ವರೆವ್ ಅವರ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರುವ ಕನಸು ಭಗ್ನವಾಗಿದೆ. ಗಾಯಗೊಂಡ ಅಲೆಕ್ಸಾಂಡರ್ ಜ್ವರೆವ್ ಅವರನ್ನು ನಡೆಸಿಕೊಂಡ ರಾಫೆಲ್ ನಡಾಲ್ ಅವರ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಫ್ರೆಂಚ್ ಓಪನ್ ಸೆಮಿಫೈನಲ್‌ನ (French Open Semi Final) ಎರಡನೇ ಸೆಟ್ ವೇಳೆ ಅಂಕಣದಲ್ಲಿ ಬಿದ್ದು ಗಾಯಗೊಂಡ ಜ್ವೆರೆವ್, ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. 91 ನಿಮಿಷಗಳ ಕಾಲ ನಡೆದ ಮೊದಲ ಸೆಟ್ ಅನ್ನು ಟೈ ಬ್ರೇಕರ್ ಮೂಲಕ 7-6(10-8) ಗೆದ್ದಿದ್ದ ನಡಾಲ್‌ಗೆ 2ನೇ ಸೆಟ್‌ನಲ್ಲೂ ಭಾರೀ ಪೈಪೋಟಿ ಎದುರಾಯಿತು. 6-6 ಗೇಮ್‌ಗಳಲ್ಲಿ ಉಭಯ ಆಟಗಾರರು ಸಮಬಲ ಸಾಧಿಸಿದ್ದರು. ಈ ವೇಳೆ ಜ್ವೆರೆವ್ ಜಾರಿ ಬಿದ್ದು ತಮ್ಮ ಬಲ ಮೊಣಕಾಲನ್ನು ಮುರಿದುಕೊಂಡರು. ಭಾರೀ ನೋವಿನಿಂದ ಬಳಲಿದ ಜ್ವೆರೆವ್ ಕಣ್ಣೀರಿಟ್ಟ ದೃಶ್ಯ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಕಣ್ಣುಗಳಲ್ಲೂ ನೀರು ತರಿಸಿತು. ಜ್ವೆರೆವ್ ಬಿದ್ದ ದೃಶ್ಯಗಳನ್ನು ಮರು ಪ್ರಸಾರ ಮಾಡುವುದಿಲ್ಲ, ಅದು ಅಷ್ಟು ಭೀಕರವಾಗಿದೆ ಎಂದು ವೀಕ್ಷಕ ವಿವರಣೆಗಾರರ ಮೂಲಕ ಪ್ರಸಾರಕರು ಹೇಳಿಸಿದರು. ವೀಲ್‌ಚೇರ್ ಮೂಲಕ ಜರ್ಮನಿ ಟೆನಿಸಿಗನನ್ನು ಅಂಕಣದಿಂದ ಹೊರ ಕರೆದುಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಊರುಗೋಲು ಹಿಡಿದು ಅಂಕಣಕ್ಕೆ ವಾಪಸಾದ ಜ್ವೆರೆವ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ನಡಾಲ್‌ರನ್ನು ಅಭಿನಂದಿಸಿದರು.
ಸುಮಾರು 3 ಗಂಟೆ 13 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಉಭಯ ಆಟಗಾರರು ಕೆಚ್ಚೆದೆಯ ಪ್ರದರ್ಶನ ತೋರಿವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಬ್ಯಾಕ್‌ಹ್ಯಾಂಡ್ ಮೂಲಕ ಚೆಂಡನ್ನು ಬಾರಿಸುವ ಯತ್ನದಲ್ಲಿ ಪಾದವು ತಿರುಚಿದ್ದು, ಜಾರಿ ಬಿದ್ದು ಮೊಣಕಾಲು ಗಾಯ ಮಾಡಿಕೊಂಡರು. ಅಲೆಕ್ಸಾಂಡರ್ ಜ್ವರೆವ್ ಗಾಯಗೊಳ್ಳುತ್ತಿದ್ದಂತೆಯೇ ರಾಫೆಲ್ ನಡಾಲ್, ಅವರ ಬಳಿ ಬಂದು ಯೋಗಕ್ಷೇಮ ವಿಚಾರಿಸಿದರು. ಇದಾದ ಬಳಿಕ ಮೈದಾನ ತೊರೆದು ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದರು. ಈ ವೇಳೆ ಅಲೆಕ್ಸಾಂಡರ್ ಜ್ವರೆವ್‌ಗೆ ಮತ್ತೆ ರಾಫೆಲ್ ನಡಾಲ್ ಜತೆಯಾದರು. ರಾಫೆಲ್ ನಡಾಲ್ ಅವರ ಈ ನಿಸ್ವಾರ್ಥ ಸೇವೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
Rafael Nadal reaches his 14th final following Alexander Zverev's semi-final retirement;The Spaniard to clash with Casper Ruud from Norway in Sunday’s Final pic.twitter.com/ie3Eh7GIcj
— All India Radio News (@airnewsalerts)French Open ಇಗಾ vs ಗಾಫ್ ಗ್ರ್ಯಾಂಡ್ ಫೈನಲ್‌ಗೆ ಕ್ಷಣಗಣನೆ
ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಮಾನವೀಯತೆ ಹಾಗೂ ಕಾಳಜಿ ವಹಿಸಿದ ರೀತಿಯೇ ನಡಾಲ್ ಅವರನ್ನು ಮತ್ತಷ್ಟು ಸ್ಪೆಷಲ್ ವ್ಯಕ್ತಿಯನ್ನಾಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
The humility and concern shown by Nadal is what makes him so special. pic.twitter.com/t7ZE6wpi47
— Sachin Tendulkar (@sachin_rt)ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಕಾರಣಕ್ಕಾಗಿಯೇ ಕ್ರೀಡೆ ಒಮ್ಮೊಮ್ಮೆ ಕಣ್ಣೀರು ಹಾಕುವಂತೆ ಮಾಡುತ್ತದೆ. ನೀವು ಖಂಡಿತ ವಾಪಾಸ್ಸಾಗಲಿದ್ದೀರಿ ಅಲೆಕ್ಸಾಂಡರ್ ಜ್ವರೆವ್. ರಾಫೆಲ್ ನಡಾಲ್ ಅವರ ಕ್ರೀಡಾಸ್ಪೂರ್ತಿ, ಮಾನವೀಯತೆ ಅದ್ಭುತ ಹಾಗೂ ನಿಮ್ಮ ಮೇಲೆ ಮತ್ತಷ್ಟು ಗೌರವ ಹೆಚ್ಚಾಗುವಂತೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
This is why sport can make you cry. You will be back . - Sportsmanship, humility. Just brilliant and respect 🙏🙏🙏 pic.twitter.com/n5JFNFK7r1
— Ravi Shastri (@RaviShastriOfc)14ನೇ ಫ್ರೆಂಚ್ ಓಪನ್ ಫೈನಲ್ ಆಡಲಿರುವ ನಡಾಲ್:
21 ಟೆನಿಸ್ ಗ್ರ್ಯಾನ್ ಸ್ಲಾಂ ಒಡೆಯ ರಾಫೆಲ್ ನಡಾಲ್, 22ನೇ ಗ್ರ್ಯಾನ್ ಸ್ಲಾಂ ಟ್ರೋಫಿಗೆ ಮತ್ತಷ್ಟು ಹತ್ತಿರವಾಗಿದ್ದು, ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಈಗಾಗಲೇ 13 ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿರುವ ನಡಾಲ್, ಭಾನುವಾರ 14ನೇ ಟ್ರೋಫಿ ಎತ್ತಿಹಿಡಿಯಲು ಎದುರು ನೋಡುತ್ತಿದ್ದಾರೆ.