ಶ್ರೀಶಾಂತ್ ಆರೋಪದಲ್ಲಿ ಯಾವುದೇ ಹುರುಳಿಲ್ಲ

By Suvarna Web DeskFirst Published Nov 4, 2017, 4:52 PM IST
Highlights

2013ರಲ್ಲಿ ಶ್ರೀಶಾಂತ್ ಅವರನ್ನು ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ಆಜೀವ ನಿಷೇಧ ಹೇರಿದೆ.

ನವದೆಹಲಿ(ನ.04): ಐಪಿಎಲ್ ಕಳ್ಳಾಟದಲ್ಲಿ ತೊಡಗಿದ್ದ ಹಲವರು ಹೆಸರನ್ನು ಬಿಸಿಸಿಐ ಬಹಿರಂಗಗೊಳಿಸಿಲ್ಲ ಎಂದು ಶ್ರೀಶಾಂತ್ ಮಾಡಿರುವ ಆರೋಪ ನಿರಾಧಾರವಾದುದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಭದ್ರತಾ ಸಮಿತಿ ಮುಖ್ಯಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.

‘ಬಿಸಿಸಿಐ ಯಾವುದೇ ತಾರತಮ್ಯ ಮಾಡುತ್ತಿಲ್ಲ. ನಿಷೇಧಿಸಲ್ಪಟ್ಟ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿಲ್ಲ. ಸ್ಥಳೀಯ ಪಂದ್ಯಗಳಲ್ಲಿ ಆಡುತ್ತಿರಬಹುದು, ಹಾಗಾಗಿ ಅದು ಬಿಸಿಸಿಐನ ಗಮನಕ್ಕೆ ಬಂದಿಲ್ಲ’ ಎಂದಿದ್ದಾರೆ.

2013ರಲ್ಲಿ ಶ್ರೀಶಾಂತ್ ಅವರನ್ನು ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ಆಜೀವ ನಿಷೇಧ ಹೇರಿದೆ.

ಸುಪ್ರೀಂ ಮೆಟ್ಟಿಲೇರುವೆ: ತಮ್ಮ ವಿರುದ್ಧ ಹೇರಿರುವ ಆಜೀವ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಶ್ರೀಶಾಂತ್ ತಿಳಿಸಿದ್ದಾರೆ.

 

click me!