
ಮುಂಬೈ(ಅ.23): ಭಾರತೀಯ ಸ್ಪಿನ್ನರ್'ಗಳನ್ನು ಎದುರಿಸಲು ನಾವು ಮೊದಲು ಅಂದಕೊಂಡಂತೆ ಆಡಿದ್ದರಿಂದ ಗೆಲುವು ನಮ್ಮದಾಯಿತು ಎಂದು ರಾಸ್ ಟೇಲರ್ ಹೇಳಿದ್ದಾರೆ.
ಭಾರತೀಯ ಪಿಚ್'ನಲ್ಲಿ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಶಾಟ್'ಗಳ ಮೂಲಕ ಭಾರತದ ಸ್ಪಿನ್ನರ್'ಗಳನ್ನು ದಿಕ್ಕುತಪ್ಪಿಸಿದೆವು. ಹಾಗಾಗಿ ನಮ್ಮ ತಂತ್ರ ಫಲಿಸಿತು ಎಂದು ಅನುಭವಿ ಆಟಗಾರ ರಾಸ್ ಟೇಲರ್ ತಿಳಿಸಿದ್ದಾರೆ.
‘ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಬೌಲಿಂಗ್ ಮಾಡುವ ವೇಳೆ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ತಂತ್ರ ಅನುಸರಿಸಲು ಟಾಮ್ ಲೇಥಮ್'ಗೆ ಸೂಚಿಸಿದ್ದೆ. ನಮ್ಮ ಯೋಜನೆ ಫಲ ನೀಡಿತು. ಅಂದುಕೊಂಡಂತೆ ಭಾರತೀಯರ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು’ ಎಂದು ಟೇಲರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಟಾಪ್ ಲಾಥಮ್ ಶತಕ ಬಾರಿಸಿದರೆ, ರಾಸ್ ಟೇಲರ್ 95 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.